ಎರಡು ದಿನ ಸ್ನಾನ ಮಾಡಲಿಲ್ಲವಂತೆ ಪರಿಣೀತಿ ಚೋಪ್ರಾ … ಯಾಕೆ?

blank

ಮುಂಬೈ: ಬಾಲಿವುಡ್​ ನಟಿ ಪರಿಣೀತಿ ಚೋಪ್ರಾ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ, ಅವರ ಅಭಿನಯದ ಮೂರು ಚಿತ್ರಗಳು ‘ಎ ಗರ್ಲ್ ಆನ್ ದಿ ಟ್ರೈನ್’, ‘ಸೈನಾ’ ಮತ್ತು ‘ಸಂದೀಪ್ ಔರ್ ಪಿಂಕಿ ಫರಾರ್’ ಬ್ಯಾಕ್​ ಟು ಬ್ಯಾಕ್​ ಬಿಡುಗಡೆಯಾಗಿದ್ದಷ್ಟೇ ಅಲ್ಲ, ಈ ಮೂರೂ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗುವುದರ ಜತೆಗೆ, ಪರಿಣೀತಿಗೆ ಹೆಸರು ತಂದುಕೊಟ್ಟಿದೆಯಂತೆ.

ಇದನ್ನೂ ಓದಿ: ಅಮೇಜಾನ್​ ಪ್ರೈಮ್​ ಆಯ್ತು; ಇದೀಗ ನೆಟ್​ಫ್ಲಿಕ್ಸ್​ನತ್ತ ಹೊರಟ ಮನೋಜ್​

ಇನ್ನು, ‘ಸಂದೀಪ್​ ಔರ್​ ಪಿಂಕಿ ಫರಾರ್​’ ಚಿತ್ರದಲ್ಲಿನ ಸಂದರ್ಭದಲ್ಲಿ ಆದ ಒಂದು ವಿಷಯವನ್ನು ಪರಿಣೀತಿ ಇದೀಗ ಹಂಚಿಕೊಂಡಿದ್ದಾರೆ. ಅದೇನೆಂದರೆ, ಚಿತ್ರದಲ್ಲಿನ ಒಂದು ಸನ್ನಿವೇಶಕ್ಕಾಗಿ ಅವರು ಎರಡು ದಿನಗಳ ಕಾಲ ಸ್ನಾನ ಮಾಡಿರಲಿಲ್ಲವಂತೆ.

ಹೌದು, ಚಿತ್ರದಲ್ಲಿನ ಒಂದು ಗುಡಿಸಲಿನ ಸನ್ನಿವೇಶವಿದೆ. ಅದರಲ್ಲಿ ದಾರಿ ಮಧ್ಯೆ ಪರಿಣೀತಿಗೆ ಗರ್ಭಪಾತವಾಗಿ, ಅವರನ್ನು ಅರ್ಜುನ್​ ಕಪೂರ್​ ಒಂದು ಗುಡಿಸಲಿಗೆ ಕರೆದು ತರುತ್ತಾರಂತೆ. ಅಲ್ಲಿ ಆಕೆಯನ್ನು ಶುಶ್ರೂಷೆ ಮಾಡುತ್ತಾರಂತೆ. ಈ ಸನ್ನಿವೇಶವನ್ನು ಚಿತ್ರೀಕರಿಸುವುದಕ್ಕೆ ಎರಡ್ಮೂರು ದಿನ ಬೇಕಾಯಿತಂತೆ. ಅಲ್ಲಿನ ಕೊಳೆ, ಧೂಳಿನ ಮಧ್ಯೆ ಸನ್ನಿವೇಶ ಇದ್ದ ಹಿನ್ನೆಲೆಯಲ್ಲಿ, ಕಂಟಿನ್ಯುಟಿ ಮಿಸ್​ ಆಗಬಾರದು ಮತ್ತು ನೈಜವಾಗಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಪರಿಣೀತಿ, ಎರಡು ದಿನಗಳ ಕಾಲ ಸ್ನಾನ ಮಾಡಲಿಲ್ಲವಂತೆ.

ಇದನ್ನೂ ಓದಿ: ‘ದಿ ಫ್ಯಾಮಿಲಿ ಮ್ಯಾನ್​ 3’ ಯಾವಾಗ ಬರುತ್ತೆ? ಇಲ್ಲಿದೆ ಉತ್ತರ

ಈ ಕುರಿತು ಮಾತನಾಡಿರುವ ಅವರು, ‘ಅಲ್ಲಿಯ ಲೊಕೇಶನ್​ ಬಹಳ ಗಲೀಜಾಗಿತ್ತು. ಮೊದಲ ದಿನದ ಚಿತ್ರೀಕರಣದ ಅಂತ್ಯದಲ್ಲಿ, ದೇಹವೆಲ್ಲ ಮಣ್ಣಾಗಿತ್ತು. ಧೂಳಿನಿಂದಾಗಿ ಕೂದಲು ಸಹ ಬೆಳ್ಳಗಾಗಿತ್ತು. ಅದನ್ನು ಕ್ಲೀನ್ ಮಾಡುವುದಕ್ಕೆ ಹೋಗಲಿಲ್ಲ. ನೇರವಾಗಿ ರೂಮ್​ಗೆ ಹೋಗಿ ನಿದ್ದೆ ಮಾಡಿ, ಮರುದಿನ ಎದ್ದು ಬಂದೆ’ ಎಂದು ಹೇಳಿಕೊಂಡಿದ್ದಾರೆ.

‘ಪಾಪನಾಶಂ 2’ ಒಪ್ಪಲು ಕಮಲ್​ ಹಾಸನ್ ಇಟ್ಟ ಷರತ್ತೇನು?

Share This Article

ನಿಮ್ಮ ನೆಚ್ಚಿನ ಹಣ್ಣುನ್ನು ಆಯ್ಕೆ ಮಾಡಿ.. ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ!.. Personality Test

Personality Test : ಒಬ್ಬ ವ್ಯಕ್ತಿ ಹೇಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ವ್ಯಕ್ತಿಯ ವ್ಯಕ್ತಿತ್ವವನ್ನು…

ಚಾಣಕ್ಯ ನೀತಿಯಲ್ಲಿನ ಈ 4 ವಿಷಯಗಳನ್ನು ನೆನಪಿನಲ್ಲಿಡಿ; ಸಂಬಂಧದಲ್ಲಿ ಮೋಸ ಹೋದ ನೋವನ್ನು ನೀವು ಅನುಭವಿಸಬೇಕಿಲ್ಲ.. | Chanakya Niti

ಕಾಲಾನಂತರದಲ್ಲಿ ಜನರ ಬದಲಾಗುತ್ತಿರುವ ಆಲೋಚನೆಗಳಲ್ಲಿ ನಿಜವಾದ ಪ್ರೀತಿ ಕಳೆದುಹೋಗುತ್ತಿದೆ. ಈ ಜಗತ್ತಿನಲ್ಲಿ ನಿಮ್ಮನ್ನು ಉತ್ಸಾಹದಿಂದ ಪ್ರೀತಿಸುವ…

ಹರಳೆಣ್ಣೆ ನೀರಿನಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ| Health Tips

ಹರಳೆಣ್ಣೆಯನ್ನು ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಬಳಸಲಾಗುತ್ತದೆ ಎಂಬುದು ತಿಳಿದಿದೆಯೇ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮ…