More

    ಡೈಪರ್ ಬದಲಾಯಿಸಲೂ ಮಕ್ಕಳ ಅಭಿಪ್ರಾಯ ಕೇಳಬೇಕು! ಹೊಸ ರೂಲ್ಸ್ ಕೇಳಿ ಶಾಕ್ ಆದ ಪೋಷಕರು!

    ಕ್ಯಾನ್ಬೆರಾ: ನೀವು ಹೆತ್ತ ಮಕ್ಕಳ ಡೈಪರ್ ಬದಲಾಯಿಸೋಕೆ ಯಾರದ್ದಾದರೂ ಅನುಮತಿ ಪಡೆಯಬೇಕಾ? ಅಯ್ಯೋ ಇಂದೆಂಥಹ ಪ್ರಶ್ನೆ ಎಂದು ನೀವೆಂದುಕೊಂಡಿದ್ದರೆ ಆ ಯೋಚನೆಯನ್ನು ಬದಲಾಯಿಸಿಕೊಳ್ಳಿ. ಏಕೆಂದರೆ ನಿಮ್ಮದೇ ಮಕ್ಕಳ ಡೈಪರ್ ಬದಲಾಯಿಸಲೂ ಮಕ್ಕಳ ಅಭಿಪ್ರಾಯ ತೆಗೆದುಕೊಳ್ಳಬೇಕು ಎಂದು ಅದೊಂದು ದೇಶದಲ್ಲಿ ಚೈಲ್ಡ್​ ಕೇರ್​ ಚೈನ್​ ಹೇಳಿದೆ.

    ಹೌದು! ಇಂತದ್ದೊಂದು ವಿಚಿತ್ರ ಕ್ರಮವನ್ನು ಆಸ್ಟ್ರೇಲಿಯಾದ ರಾಷ್ಟ್ರೀಯ ಚೈಲ್ಡ್ ಕೇರ್ ಚೈನ್ ಜಾರಿಗೊಳಿಸಿದೆ. ಅಲ್ಲಿನ ಮಕ್ಕಳ ಪೋಷಣೆ ಬಗ್ಗೆ ಸಾಕಷ್ಟು ಕ್ರಮಗಳನ್ನು ಈಗಾಗಲೇ ಜಾರಿಗೆ ತಂದಿರುವ ಚೈಲ್ಡ್ ಕೇರ್ ಸೆಂಟರ್​ ಇದೀಗ ಇಂತದ್ದೊಂದು ಹೊಸ ರೂಲ್ಸ್ ಸೇರ್ಪಡಿಸಿದೆ. ಹುಟ್ಟಿದ ಮಕ್ಕಳು ಮತ್ತು ತಂದೆ ತಾಯಿಯ ನಡುವೆ ಒಂದು ಒಳ್ಳೆಯ ಅನ್ಯೋನ್ಯತೆ ಇರುವುದು ಅಗತ್ಯ. ಹಾಗಾಗಿ ಡೈಪರ್ ಬದಲಿಸುವಾಗ ಮಕ್ಕಳ ಅಭಿಪ್ರಾಯ ಸ್ವೀಕರಿಸಿರುವುದು ಉತ್ತಮ. ಸುಮ್ಮನೆ ಮಕ್ಕಳಿಗೆ ಕಿರಿಕಿರಿ ಮಾಡುವ ಬದಲು ಅವರ ಅಭಿಪ್ರಾಯದಂತೆ ನಡೆದುಕೊಳ್ಳಬೇಕು ಎಂದು ಹೇಳಲಾಗಿದೆ.

    ಈ ಕ್ರಮದ ಬಗ್ಗೆ ಸಾಮಾಜಿಕವಾಗಿ ಭಾರೀ ಚರ್ಚೆ ಆರಂಭವಾಗಿದೆ. ಏನೂ ಅರಿಯದ ಮಕ್ಕಳ ಅಭಿಪ್ರಾಯ ತೆಗೆದುಕೊಂಡು ಅವರ ಮಲ, ಮೂತ್ರ ಸ್ವಚ್ಛಗೊಳಿಸಬೇಕು ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಅನೇಕರು ಪ್ರಶ್ನೆ ಕೇಳಲಾರಂಭಿಸಿದ್ದಾರೆ. ಅನೇಕರು ಈ ವಿಚಾರವಾಗಿ ತಮಾಷೆ ಮಾಡಿ ನಗಲಾರಂಭಿಸಿದ್ದಾರೆ. (ಏಜೆನ್ಸೀಸ್)

    ಯಮುನಾ ನದಿಗೆ ಹಾರಿದ ಸೋಶಿಯಲ್ ಮೀಡಿಯಾ ಸ್ಟಾರ್! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆತ್ಮಹತ್ಯೆಯ ದೃಶ್ಯ

    11 ವಯಸ್ಸಿಗೇ ಮಗುವಿಗೆ ಜನ್ಮವಿತ್ತ ಬಾಲಕಿ! ಇದು ಹೇಗಾಗಿದ್ದು ಎಂದು ತಲೆ ಕೆಡಿಸಿಕೊಂಡಿರುವ ಕುಟುಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts