ಪರಶುರಾಮಪುರ: ಅಲೆಮಾರಿ, ಕೂಲಿ ಕಾರ್ಮಿಕರು, ಅಶಕ್ತರು, ಕಟ್ಟಡ ಕಾಮಗಾರಿ ನಿರ್ವಹಿಸುತ್ತಿರುವ ಹೊರ ರಾಜ್ಯಗಳ ಕೂಲಿ ಕಾರ್ಮಿಕರಿಗೆ ಉಳ್ಳವರು ಕೈಲಾದ ಸಹಾಯ ನೀಡಬೇಕು ಎಂದು ಚಳ್ಳಕೆರೆ ಸಿಪಿಐ ಆನಂದಪ್ಪ ಮನವಿ ಮಾಡಿದರು.
ಸಮೀಪದ ಪಿ.ಗೌರೀಪುರದಲ್ಲಿ ತುಂಗಭದ್ರಾ ಹಿನ್ನೀರು ಯೋಜನೆಯಡಿ ಪೈಪ್‌ಲೈನ್ ಕಾಮಗಾರಿ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿ, ಉಳ್ಳವರು ಬಡವರಿಗೆ ನೀಡಬೇಕು ಎಂದರು.
ಪಿಎಸ್‌ಐ ಮಹೇಶ್ ಹೊಸಕೋಟೆ, ಪೇದೆಗಳಾದ ಕೃಷ್ಣ, ಶ್ರೀನಿವಾಸ, ರವಿ, ಮಂಜುನಾಥ, ಗ್ರಾಮಸ್ಥರಾದ ಹೊನ್ನೂರಪ್ಪ, ರಾಮಚಂದ್ರಪ್ಪ, ಚಿತ್ತಯ್ಯ ಇತರರಿದ್ದರು.