More

    ಕಾಡುಗೊಲ್ಲರ ಗುಗ್ಗರಿ ಹಬ್ಬಕ್ಕೆ ತೆರೆ

    ಪರಶುರಾಮಪುರ: ಸಮೀಪದ ಟಿ.ಎನ್.ಕೋಟೆ ಹೊರವಲಯದ ಬಸವೇಶ್ವರ ಗೊಲ್ಲರಹಟ್ಟಿಯಲ್ಲಿ ಕಳೆದೆರಡು ದಿನಗಳಿಂದ ನಡೆದ ಕದಿರಿ ನರಸಿಂಹಸ್ವಾಮಿ, ತಿಮ್ಮಪ್ಪಸ್ವಾಮಿ ಗುಗ್ಗರಿ ಹಬ್ಬಕ್ಕೆ ಶನಿವಾರ ತೆರೆ ಬಿದ್ದಿತು.

    ಉತ್ಸವದ ಅಂಗವಾಗಿ ಗುಡಿಕಟ್ಟೆಯ ಅಣ್ಣ-ತಮ್ಮಂದಿರು ತಮ್ಮ ಕುಲದೇವರ ಮೂರ್ತಿಗಳಿಗೆ ಗಂಗಾಪೂಜೆ, ಮಣೆವುಪೂಜೆ, ಉತ್ಸವ ನಡೆಸಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.

    ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಅಕ್ಕಿ, ಬೇಳೆ, ವೆಚ್ಚದ ಹಣವನ್ನು ಕೈವಾಡಸ್ಥರಿಗೆ ನೀಡಿ ಹರಕೆ ಸಲ್ಲಿಸಿದರು. ಹುರುಳಿ-ಅಲಸಂದೆ ಇತರ ಧಾನ್ಯಗಳನ್ನು ಬೇಯಿಸಿ ನೆರೆದಿದ್ದ ಭಕ್ತರಿಗೆ ಪ್ರಸಾದವಾಗಿ ನೀಡಲಾಯಿತು.

    ಉತ್ಸವದ ಪ್ರಯುಕ್ತ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಸೇವೆ ನಡೆಯಿತು. ಶನಿವಾರ ಮಹಾಮಂಗಳಾರತಿ ಬಳಿಕ ದೇವರ ಮೂರ್ತಿಗಳನ್ನು ಗುಡಿತುಂಬಿಸಿ ಗುಗ್ಗರಿ ಹಬ್ಬಕ್ಕೆ ತೆರೆ ಎಳೆಯಲಾಯಿತು.

    ಪೂಜಾರಿ ಗಡ್ಡದ ಬಸಪ್ಪ, ಮಹೇಶ್ವರಪ್ಪ, ಚಿಕ್ಕಪ್ಪ, ಜಯಣ್ಣ, ಮುದ್ದಪ್ಪ, ಈರೇಗೌಡ, ತಿಮ್ಮಪ್ಪ ಗುಡಿಕಟ್ಟೆಯ ಅಣ್ಣ-ತಮ್ಮಂದಿರು, ನೆಂಟರಿಷ್ಟರು, ಹನ್ನೆರೆಡು ಕೈವಾಡಸ್ಥರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts