More

    ಸಿದ್ದೇಶ್ವರನದುರ್ಗದಲ್ಲಿ ಹಾಲು ಹಬ್ಬ

    ಪರಶುರಾಮಪುರ: ಸಮೀಪದ ಸಿದ್ದೇಶ್ವರನದುರ್ಗ ಗ್ರಾಮದ ಗೊಲ್ಲರಹಟ್ಟಿಯ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ರಂಗನಾಥಸ್ವಾಮಿ, ಈರಮಲ್ಲಪ್ಪಸ್ವಾಮಿ ಸಮೂಹದ ದೇವರುಗಳ ಹಾಲುಹಬ್ಬಕ್ಕೆ ಫೆ.9ರಂದು ಗಂಗಾಪೂಜೆಯೊಂದಿಗೆ ಚಾಲನೆ ದೊರೆಯಲಿದೆ.

    ಫೆ.10ರ ಬೆಳಗ್ಗೆ ಗೊಲ್ಲ ಸಮುದಾಯದ ಗುಡಿಕಟ್ಟೆಯ ಅಣ್ಣ ತಮ್ಮಂದಿರು-ನೆಂಟರಿಷ್ಟರು ಸೇರಿಕೊಂಡು ಜನಪದ ವಾದ್ಯಗಳೊಂದಿಗೆ ಊರ ಹೊರವಲಯದ ಹಳ್ಳದ ಬಳಿಗೆ ಸಮೂಹ ದೇವರುಗಳನ್ನು ಕೊಂಡೊಯ್ದು ಗಂಗಾಪೂಜೆ ನೆರವೇರಿಸುವರು. ಈ ವೇಳೆ ಪಶುಪಾಲಕರು ತಮ್ಮ ರಾಸು, ಕುರಿ-ಮೇಕೆಗಳನ್ನು ಹೊಡೆದುಕೊಂಡು ಬಂದು ದೇವರಿಗೆ ಪ್ರದಕ್ಷಿಣೆ ಹಾಕಿಸುವರು. ಈ ರೀತಿ ಮಾಡಿದರೆ ಜಾನುವಾರುಗಳಿಗೆ ಯಾವುದೇ ರೋಗ ರುಜನ ಬರುವುದಿಲ್ಲ ಎಂಬ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ.

    ಗಂಗಾಪೂಜೆ ಬಳಿಕ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕರೆತಂದು ದೇಗುಲದ ಬಳಿ ಪ್ರತಿಷ್ಠಾಪಿಸಲಾಗುತ್ತದೆ.

    ಹಾಲು ಹಬ್ಬ ಅಂದರೇನು?: ದೇಗುಲದ ಎದುರು ಎರಡೂ ಕಟ್ಟೆ ಮನೆಯವರು ಪ್ರತ್ಯೇಕವಾಗಿ ಕಟ್ಟೆಗಳನ್ನು ನಿರ್ಮಿಸುತ್ತಾರೆ. ಇದರೊಳಗೆ ಭಕ್ತರು ತಮ್ಮ ಮನೆಗಳಿಂದ ತರುವ ಮೀಸಲು ಹಾಲನ್ನು ಹಾಕುತ್ತಾರೆ. ಬಳಿಕ ಹಾಲಿನ ಕಟ್ಟೆಯನ್ನು ಹೂವು, ಧೂಪ-ದೀಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಹರಕೆ ಹೊತ್ತ ಭಕ್ತರು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಾರೆ. ನಂತರ ನೆರೆದಿದ್ದ ಎಲ್ಲರಿಗೂ ಪ್ರಸಾದ ಹಂಚಿ ಅನ್ನಸಂತರ್ಪಣೆ ಮಾಡುವ ಮೂಲಕ ಹಾಲು ಹಬ್ಬ ಆಚರಿಸಲಾಗುತ್ತದೆ ಎಂದು ದೇವಸ್ಥಾನ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts