More

    ಎನ್.ಜಿ.ಹಳ್ಳೀಲಿ ಚೆಲುಮೆರುದ್ರ ತೇರು

    ಪರಶುರಾಮಪುರ: ನಾಗಗೊಂಡನಹಳ್ಳಿ ಗ್ರಾಮ ಸಮೀಪದ ವೇದಾವತಿ ನದಿ ದಡದಲ್ಲಿನ ಚೆಲುಮೆರುದ್ರಸ್ವಾಮಿಯ ಮಠದಲ್ಲಿ ಮಂಗಳವಾರ ರಥೋತ್ಸವ ಜರುಗಿತು.

    ಹನ್ನೆರೆಡು ಕೈವಾಡಸ್ಥರು, ದೇವಸ್ಥಾನ ಸಮಿತಿಯವರು ರಥೋತ್ಸವದ ಅಂಗವಾಗಿ ಸ್ವಾಮಿಯ ರಥವನ್ನು ವಿವಿಧ ಹೂವು-ವಸ್ತ್ರಗಳು, ಬಾಳೆಗೊನೆ, ಎಳನೀರಿನ ಗೊಂಚಲಿನಿಂದ ಅಲಂಕರಿಸಿದ್ದರು. ರಥಕ್ಕೆ ಅಭಿಷೇಕ ನೆರವೇರಿಸಿದ ಬಳಿಕ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ಬಳಿಕ ರಥೋತ್ಸವ ಜರುಗಿತು.

    ಮುಕ್ತಿಬಾವುಟವನ್ನು ಜಾಜೂರು ಗ್ರಾಪಂ ಅಧ್ಯಕ್ಷೆ ಭೀಮಕ್ಕ 21 ಸಾವಿರ ರೂಪಾಯಿಗೆ ಹರಾಜಿನಲ್ಲಿ ಪಡೆದರು.

    ರಥೋತ್ಸವಕ್ಕೂ ಮುನ್ನಾ ಆಯೋಜಿಸಿದ್ದ ಧಾರ್ಮಿಕ ಕಾಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಕರ್ನಾಟಕ-ಆಂಧ್ರದ ದ್ವಿಭಾಷಿಗರು ಅನಾದಿ ಕಾಲದಿಂದಲೂ ವೈಭವದಿಂದ ಜಾತ್ರೆ ನಡೆಸುತ್ತಿರುವುದು ಸಂತಸದ ವಿಷಯ ಎಂದರು.

    ಯಾತ್ರಿನಿವಾಸ ಉದ್ಘಾಟಿಸಿದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಈ ಭಾಗದ ಅಂತರ್ಜಲ ವೃದ್ಧಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲೇ ಕ್ರಮಕೈಗೊಳ್ಳಲಾಗುವುದು. ಮಠಕ್ಕೆ ಹೊಂದಿಕೊಂಡು ಹರಿಯುತ್ತಿರುವ ವೇದಾವತಿ ನದಿಗೆ ಅಡ್ಡಲಾಗಿ ಬೃಹತ್ ಬ್ಯಾರೇಜ್ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಗದ್ದುಗೆ ಮಠದ ಶ್ರೀ ಬಸವಕಿರಣ ಸ್ವಾಮಿ, ಶ್ರೀ ಬಸವ ಮಹಾಂತ ಸ್ವಾಮೀಜಿ, ರೈತ ಮುಖಂಡ ಕೆ.ಪಿ.ಭೂತಯ್ಯ, ಎಚ್.ಓಬಳೇಶಪ್ಪ, ಜೆ.ಎಚ್.ಬೊಮ್ಮಯ್ಯ, ಜಿ.ಟಿ.ರವಿಕುಮಾರ, ಎಂ.ಉಮಾ ಮಹೇಶ್ವರಯ್ಯ, ರವಿಚಂದ್ರ, ಬಸವರಾಜು, ಪಾಲನೇತ್ರಪ್ಪ, ನರಸಿಂಹಪ್ಪ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts