ಪರಶುರಾಮಪುರ: ಹೋಬಳಿಯಾದ್ಯಂತ ಶನಿವಾರ ಮತದಾರರ ದಿನ ಆಚರಣೆ ಮತ್ತು ನೂತನ ಮತದಾರರಿಗೆ ಹೊಸ ಮಾದರಿಯ ಗುರುತಿನ ಚೀಟಿ ವಿತರಣೆ ಮಾಡಲಾಯಿತು.
ಅಜ್ಜನಹಳ್ಳಿ ಸಕಿಪ್ರಾ ಶಾಲೆ, ಎಸ್.ದುರ್ಗ, ಕ್ಯಾದಿಗುಂಟೆ, ಪಿಲ್ಲಹಳ್ಳಿ, ಪಿ.ಮಹದೇವಪುರ, ಪಿ.ಗೌರೀಪುರ, ಕೊರ‌್ಲಕುಂಟೆ, ಬೊಮ್ಮನಕುಂಟೆ, ವೃಂದಾವನಹಳ್ಳಿ, ಪಗಡಲಬಂಡೆ, ಜಾಜೂರು, ನಾಗೊಂಡನಹಳ್ಳಿ, ಸಿಎನ್‌ಹಳ್ಳಿ, ಪುರ‌್ಲೆಹಳ್ಳಿ, ದೊಡ್ಡಚೆಲ್ಲೂರು, ಚಿಕ್ಕಚೆಲ್ಲೂರು, ಟಿ.ಎನ್.ಕೋಟೆ, ದೊಡ್ಡಬೀರನಹಳ್ಳಿ, ಹರವಿಗೊಂಡನಹಳ್ಳಿ, ಗೋಸಿಕೆರೆ, ಬೊಂಬೇರಹಳ್ಳಿ ಮತ್ತಿತರ ಗ್ರಾಮಗಳ ಯುವ ಮತದಾರರಿಗೆ ಹೊಸ ಮಾದರಿಯ ಗುರುತಿನ ಚೀಟಿ ವಿತರಿಸಲಾಯಿತು.
ಆರ್‌ಐ ಶಾಂತಪ್ಪ, ಮತಗಟ್ಟೆಯ ಅಧಿಕಾರಿಗಳಾದ ಟಿ.ಆರ್.ಮಂಜಪ್ಪ, ಲತಾ, ಮಂಜುನಾಥ, ಪುಷ್ಪಾವತಿ, ಕೆ.ಚಂದ್ರಮ್ಮ, ಷಾಹಿನಾಜಾನ್, ನಾಗರತ್ನಾ, ಮಲ್ಲಿಕಾರ್ಜುನ, ಕೆ.ಲೋಕೇಶ, ಡಿ.ಕೆ.ವೀರಭದ್ರಪ್ಪ, ಮಹೇಶ, ವಿಶ್ವನಾಥ, ರಮೇಶ, ಮಲ್ಲಯ್ಯ, ಮಲ್ಲಿಕಾರ್ಜುನ, ಸುರೇಶ, ಈರಣ್ಣ, ಸತ್ಯನಾರಾಯಣರಾವ್ ಮತ್ತಿತರರಿದ್ದರು.