More

    ಟಿ.ಎನ್.ಕೋಟೆಯಲ್ಲಿ ಮಾಘಮಾಸದ ಬಹುಳ ಏಕಾದಶಿ ಆಚರಣೆ

    ಪರಶುರಾಮಪುರ: ಮಾಘಮಾಸದ ಬಹುಳ ಏಕಾದಶಿ ಪ್ರಯುಕ್ತ ಟಿ.ಎನ್. ಕೋಟೆಯಲ್ಲಿ ನಾಲ್ಕು ದಿನಗಳ ಕಾಲ ಗುಡಿಕಟ್ಟೆಯ ಅಣ್ಣತಮ್ಮಂದಿರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

    ಶನಿವಾರ ಕೋಣನಗೌಡರಿಂದ ದೇವರಿಗೆ ಮೊದಲ ಪೂಜೆ ಬಳಿಕ ಎರಡು ದೇವರುಗಳಿಗೆ ಕಂಕಣ ಕಟ್ಟುವ ಶಾಸ್ತ್ರ ನಡೆಯಿತು. ಭಾನುವಾರ ಕೋಣನ ಗೌಡರಿಂದ ಅಕ್ಕಿ ಅಳೆವ ಶಾಸ್ತ್ರ, ಸೋಮವಾರ ಗೋಸಿಕೆರೆಯ ವೇದಾವತಿ ನದಿಯಲ್ಲಿ ದೇವರ ಮೂರ್ತಿಗಳಿಗೆ ಗಂಗಾಪೂಜೆ, ಹೊಸಕೆರೆ ದಿನ್ನೆಯಲ್ಲಿ ಶ್ರೀ ದಂಬಳದ ಚಿತ್ತಮ್ಮ ಮತ್ತು ಕರಿಯಣ್ಣಸ್ವಾಮಿಗೆ ವಿಶೇಷ ಪೂಜೆ ನಂತರ ಉಂಡೆ-ಮಂಡೆ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಿತು ಸಂಜೆ ಟಿ.ಎನ್. ಕೋಟೆಗೆ ಬಾನ-ಬಜಾಂತ್ರಿಯೊಂದಿಗೆ ಹಿಂದಿರುಗಲಾಯಿತು.

    ಮಂಗಳವಾರ ದೇವರುಗಳ ಉತ್ಸವ ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಗುಡಿಕಟ್ಟೆಯ ಗೌಡರು, ಪೂಜಾರರು, ಯಜಮಾನರು, ಟಿ.ಎನ್.ಕೋಟೆ, ಹೊಸಕೆರೆ ಗ್ರಾಮಸ್ಥರು, ಗುಡಿಕಟ್ಟೆಯ ಅಣ್ಣ-ತಮ್ಮಂದಿರು ನೆಂಟರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts