More

    ಪ್ರಯಾಸದಿಂದ ಟಿಕೆಟ್ ಪಡೆದ ಶಾಸಕ ಪರಣ್ಣ ಮುನವಳ್ಳಿ

    ವೀರಾಪುರ ಕೃಷ್ಣ ಗಂಗಾವತಿ

    ಶಾಸಕ ಪರಣ್ಣ ಮುನವಳ್ಳಿ ಅವರು ಹ್ಯಾಟ್ರಿಕ್ ಗೆಲುವಿಗಾಗಿ ಪ್ರಯಾಸಪಟ್ಟು ಮತ್ತೊಮ್ಮೆ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದು, ಇದೀಗ ಅಸಮಾಧಾನಗೊಂಡವರನ್ನು ಸಂಭಾಳಿಸುವುದು ಬಹುದೊಡ್ಡ ಸವಾಲಾಗಿದೆ.

    ಮೊದಲ ಬಾರಿಗೆ 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದ ಪರಣ್ಣ ಮುನವಳ್ಳಿ, 2013ರಲ್ಲಿ 30 ಸಾವಿರ ಮತಗಳಿಂದ ಪರಾಭವಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅಲೆಯಿಂದ 2018ರಲ್ಲಿ ಮತ್ತೆ ಜಯ ಕಂಡರು. 2023ರ ಚುನಾವಣೆಗೆ ಬಿಜೆಪಿಯ ಐವರು ಅಕಾಂಕ್ಷಿಗಳಿದ್ದರು.

    ಕಾರ್ಯಕರ್ತರ ಅಭಿಪ್ರಾಯ, ಸಂಘ ಪರಿವಾರದ ಶಿಾರಸು ಮತ್ತು ಆಡಳಿತಾವಧಿಯಲ್ಲಿನ ಲೋಪ ಹಿನ್ನೆಲೆಯಲ್ಲಿ ಟಿಕೆಟ್ ದೊರೆಯುವುದು ಕಷ್ಟ ಎಂಬ ಮಾತುಗಳು ಕೇಳಿಬಂದಿದ್ದವು.

    ಇದನ್ನೂ ಓದಿ: ನನ್ನ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎಂದ ಕೆ.ಎಸ್.ಈಶ್ವರಪ್ಪ

    ಮೊದಲ ಪಟ್ಟಿಯಲ್ಲಿ ಪರಣ್ಣ ಹೆಸರು ಬಾರದಿದ್ದಾಗ ಅನುಮಾನ ತೀವ್ರಗೊಂಡಿದ್ದು, ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿದ್ದ ಶ್ರೀವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹೆಸರು ತಳಕುಹಾಕಿಕೊಂಡಿತ್ತು.

    ಆದರೆ, ತೀವ್ರ ಕಸರತ್ತು ನಡೆಸಿದ ಪರಣ್ಣ ಮುನವಳ್ಳಿ ಎರಡನೇ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಪ್ರಮುಖ ರಾಜಕಾರಣಿಯೊಬ್ಬರ ಶಿಫಾರಸು ಲ ನೀಡಿದೆ.
    ಸ್ವಾಭಾವಿಕ ಆಡಳಿತ ವಿರೋಧಿ ಅಲೆಯಿದ್ದು, ಶಾಸಕ ಕಾರ್ಯವೈಖರಿ ಬಗ್ಗೆ ಕೆಲ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಎಲ್ಲರನ್ನೂ ಸಮಧಾನಪಡಿಸುವುದು ಸವಾಲಿನ ಕೆಲಸವಾಗಿದ್ದರೂ ಅನಿವಾರ್ಯವಾಗಿದೆ.

    2004ರಿಂದ ಆಕಾಂಕ್ಷಿಯಾಗಿದ್ದ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಎಚ್.ಎಸ್. ಗಿರೇಗೌಡ, ಸಿಂಗನಾಳ ವಿರೂಪಾಕ್ಷಪ್ಪ, 2022ರಿಂದ ಮುನ್ನೆಲೆಗೆ ಬಂದ ನೆಕ್ಕಂಟಿ ಸೂರಿಬಾಬು, ಎಸ್.ರಾಘವೇಂದ್ರ ಶ್ರೇಷ್ಠಿ ಅವರನ್ನು ಒಗ್ಗಟ್ಟಾಗಿ ಕರೆದೊಯ್ಯಬೇಕಿದೆ. ಬಿಜೆಪಿ ಬಿಟ್ಟು ಅನ್ಯ ಪಕ್ಷಕ್ಕೆ ವಲಸೆ ಹೋದವರನ್ನೂ ನಿರ್ಲಕ್ಷಿಸಿದರೆ ಕಷ್ಟ ಎಂದು ಹೇಳಲಾಗುತ್ತಿದೆ.

    ಜಾತಿ ಸಮೀಕರಣ ಹೀಗಿದೆ

    ಬಿಜೆಪಿಗೆ ವೀರಶೈವ ಮತ್ತು ಕುರುಬರ ಮತಗಳು ಮುಖ್ಯವಾಗಿದ್ದು, ವೀರಶೈವ ಒಳಪಂಗಡಗಳನ್ನು ಒಗ್ಗೂಡಿಸುವುದು ಸಾಹಸವೇ ಸರಿ. ಕಳೆದ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಕುರುಬ ಸಮಾಜದ ಮುಖಂಡರು ಮಾಜಿ ಸಿಎಂ ಸಿದ್ದರಾಮಯ್ಯಗಾಗಿ ಕೈ ಹಿಡಿದಿದ್ದಾರೆ.

    ಅಲ್ಪಸಂಖ್ಯಾತರಂತೂ ಅನ್ಸಾರಿ ಬಿಟ್ಟು ಬರಲ್ಲ. ರಾಜ್ಯ, ಕೇಂದ್ರ ಸರ್ಕಾರದ ಅಭಿವೃದ್ಧಿಯೊಂದೇ ಗೆಲುವಿಗೆ ಮಾನದಂಡವಾಗಲ್ಲ. ಜಾತಿವಾರು ಮತಗಳ ಸಮೀಕರಣದೊಂದಿಗೆ ಚುನಾವಣೆ ಎದುರಿಸಬೇಕಿದ್ದು, ಯಾವುದೇ ಸಮುದಾಯವನ್ನು ನಿರ್ಲಕ್ಷಿಸುವಂತಿಲ್ಲ.

    ಕೆಆರ್‌ಪಿಪಿ ಮತಗಳಿಕೆ ಮೇಲೆ ಬಿಜೆಪಿ ಗೆಲವು ಅವಲಂಬಿತವಾಗಿದ್ದು, ಹೆಚ್ಚಾದರೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

    ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲರೂ ಟಿಕೆಟ್ ಬಯಸುವುದು ಸಹಜ, ಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟು ಮೂರನೇ ಬಾರಿ ನೀಡಿದೆ. ಆಕಾಂಕ್ಷಿತರು ನಮ್ಮೊಂದಿಗಿದ್ದು, ಪಕ್ಷ ಬಿಟ್ಟು ಹೋಗಿರುವವರೂ ಮತ್ತೆ ಬರಲಿದ್ದಾರೆ.
    ಪರಣ್ಣ ಮುನವಳಿ, ಬಿಜೆಪಿ ಅಭ್ಯರ್ಥಿ

    ಬಿಜೆಪಿ ಗೆಲುವಿಗಾಗಿ ಶ್ರಮಿಸಲಾಗುತ್ತಿದ್ದು, ಆರಂಭದಿಂದಲೂ ಪರಣ್ಣ ಮುನವಳ್ಳಿ ಅವರಿಗೆ ಟಿಕೆಟ್ ನೀಡಿದರೆ ಸೂಕ್ತ ಎಂದು ಅಭಿಪ್ರಾಯವಿತ್ತು. ರಾಜಕೀಯ ಸಮತೋಲನ ಹಿನ್ನೆಲೆಯಲ್ಲಿ ನನ್ನ ಹೆಸರು ಮುನ್ನೆಲೆಗೆ ಬಂದಿದ್ದು, ಕೈತಪ್ಪಿದ್ದಕ್ಕೆ ಬೇಸರವಿಲ್ಲ.
    ನೆಕ್ಕಂಟಿ ಸೂರಿಬಾಬು, ಬಿಜೆಪಿ ಪ್ರಮುಖ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts