More

    ಬಡವರ ಹಸಿವಿನ ವಿಚಾರದಲ್ಲೂ ಬಿಜೆಪಿ ರಾಜಕೀಯ: ಡಾ.ಜಿ. ಪರಮೇಶ್ವರ

    ತುಮಕೂರು: ಬಿಪಿಎಲ್​ ಕಾರ್ಡ್​ ಹೊಂದಿರುವ ಕುಟುಂಬಗಳಿಗೆ ಮೊದಲ ಮೂರು ತಿಂಗಳು ಐದು ಕೆಜಿ ಅಕ್ಕಿ ಹಾಗೂ ಇನ್ನುಳಿದ 5ಕೆಜಿ ಅಕ್ಕಿಯ ಬದಲು ಮುರು ತಿಂಗಳು ಹಣ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.

    ಕೊರಟೆಗೆರೆಯಲ್ಲಿ ಸಾಮೂಹಿಕ ಪ್ರಾರ್ಥನೆ ನಂತರ ಮಾತನಾಡಿದ ಪರಮೇಶ್ವರ ಮೊದಲ ಮೂರು ತಿಂಗಳೂ ಐದು ಕೆಜಿ ಅಕ್ಕಿಯ ಬದಲು ಹಣ ಕೊಡಲಾಗುವುದು. ಅಷ್ಟರಲ್ಲಿ ಅಕ್ಕಿಯನ್ನು ಹೊಂದಿಸಿಕೊಂಡು ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

    ರಾಜಕೀಯ ಮಾಡುತ್ತಿದ್ದಾರೆ

    ಅಕ್ಕಿ ಕೊಡದಿದ್ದರೆ ಹಣ ಹಾಕಿ ಎಂದು ಹೇಳಿದ್ದು, ಬಿಜೆಪಿಯವರು. ಈಗ ಬಿಪಿಎಲ್​ ಕಾರ್ಡ್​ ಇರುವವರ ಖಾತೆಗೆ ಹಣ ಹಾಕಿದರೆ ಅದಕ್ಕೂ ವಿರೋಧಿಸುತ್ತಿದ್ದಾರೆ. ಬಿಜೆಪಿಯವರು ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಜುಲೈ 13-14ರಂದು ಬೆಂಗಳೂರಿನಲ್ಲಿ ವಿಪಕ್ಷಗಳ ಎರಡನೇ ಸಭೆ; ಮಲ್ಲಿಕಾರ್ಜುನ ಖರ್ಗೆ ನೇತೃತ್ವ: ಶರದ್​ ಪವಾರ್​

    ಅಕ್ಕಿ ಕೊಡುವ ವಿಚಾರ ಪ್ರತಿಷ್ಠುಯಾಗಬಾರದು. ಬಡವರ ಹಸಿವಿನ ಪ್ರಶ್ನೆಯಾಗಬೇಕು. ಪ್ರತಿಷ್ಠ ಸಾಧಿಸಿದರೆ ಬಡವರ ಹೊಟ್ಟೆ ತುಂಬುವುದಿಲ್ಲ. ಅಕ್ಕಿ ಬದಲು ಹಣ ಕೊಡುವ ವಿಚಾರವಾಗಿ ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ಧಾರೆ.

    ದೇಶದ ಅನೇಕ ಗೋದಾಮುಗಳಲ್ಲಿ ಅಕ್ಕಿ ಕೊಳೆಯುತ್ತಿದ್ದು, ಹಣ ಕೊಡುತ್ತೇವೆ ಎಂದರು ಕೇಂದ್ರ ಸರ್ಕಾರ ಮಾರಾಟ ಮಾಡುತ್ತಿಲ್ಲ. ಕರ್ನಾಟಕದಲ್ಲಿರುವ ಭಾರತ ಆಹಾರ ನಿಗಮ(FCI) ಗೋದಾಮಿನಲ್ಲಿ ಏಳು ಲಕ್ಷ ಟನ್​ ಅಕ್ಕಿ ಸ್ಟಾಕ್​ ಇದ್ದು, ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ನಮಗೆ ಕೊಡುವ ವಿಚಾರದಲ್ಲಿ ಮಾತ್ರ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts