More

    ಶೂಟಿಂಗ್​ನಲ್ಲಿ ಮತ್ತೊಂದು ಪದಕ ಗೆದ್ದ ಅವನಿ ಲೇಖಾರ!

    ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಈ ಮುನ್ನ ಶೂಟಿಂಗ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅವನಿ ಲೇಖಾರ ಅವರು ಇದೀಗ ಮತ್ತೊಂದು ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ತನ್ಮೂಲಕ ಪ್ಯಾರಾ ಗೇಮ್ಸ್​​ನಲ್ಲಿ ಅವಳಿ ಪದಕಗಳಿಗೆ ಕೊರಳೊಡ್ಡಿದ ಮೊದಲ ಭಾರತೀಯ ಕ್ರೀಡಾಪಟು ಎಂಬ ಮನ್ನಣೆ ಗಳಿಸಿದ್ದಾರೆ.

    ಇಂದು ನಡೆದ ಮಹಿಳೆಯರ 50 ಮೀಟರ್​ ರೈಫಲ್​ 3ಪಿ ಎಸ್​​ಎಚ್​1 ಫೈನಲ್​ ಸ್ಪರ್ಧೆಯಲ್ಲಿ ಜೈಪುರದ 19 ವರ್ಷ ವಯಸ್ಸಿನ ಅವನಿ, ಕಂಚಿನ ಪದಕ ಗೆದ್ದರು. ರಜತ ಪದಕಕ್ಕಾಗಿ ಆಡಿದಾಗ, ಚೀನಾದ ಜಾಂಗ್​ 10.3 ಅಂಕ ಗಳಿಸಿದರೆ, ಅವನಿ, 10.2 ಅಂಕಗಳನ್ನು ಗಳಿಸಿದರು. ನಂತರ ಆಡಿದ ಕಂಚಿನ ಪದಕದ ಸ್ಪರ್ಧೆಯಲ್ಲಿ ಯುಕ್ರೇನಿನ ಶೆಟ್ನಿಕ್​ 9.9 ಅಂಕ ಗಳಿಸಿದರೆ, ಅವನಿ 10.5 ಅಂಕಗಳನ್ನು ಗಳಿಸಿ ಪದಕವನ್ನು ಗೆದ್ದರು.

    ಇದನ್ನೂ ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಬೆಳ್ಳಿ ಗೆದ್ದ ಪ್ಯಾರಾ ಪ್ರವೀಣ್​ಗೆ ಪ್ರಧಾನಿ ಅಭಿನಂದನೆ

    ಇದೇ ಪ್ಯಾರಾಲಿಂಪಿಕ್ಸ್​ ಕ್ರೀಡಾಕೂಟದಲ್ಲಿ 10 ಮೀಟರ್​ ಏರ್​ ರೈಫಲ್​ ಸ್ಟ್ಯಾಂಡಿಂಗ್​ ಎಸ್​ಎಚ್​1 ಈವೆಂಟಿನಲ್ಲಿ ಅವನಿ ಲೇಖಾರ ಚಿನ್ನಕ್ಕೆ ಮುತ್ತಿಟ್ಟಿದ್ದರು. ಇದೀಗ ಮತ್ತೊಂದು ಪದಕ ಗೆದ್ದು, ಒಂದೇ ಕ್ರೀಡಾಕೂಟದಲ್ಲಿ ಬೇರೆ ಬೇರೆ ಈವೆಂಟುಗಳಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ.

    ಅವನಿ ಅವರಿಗೆ ಕಂಚಿನ ಪದಕ ಪ್ರದಾನ ಮಾಡಲಾದ ಕ್ಷಣಗಳ ವಿಡಿಯೋವನ್ನು ಭಾರತದ ಲೋಕಸಭಾ ಸ್ಪೀಕರ್​ ಓಮ್​ ಬಿರ್ಲಾ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ ಮಾಡಿದ್ದಾರೆ. (ಏಜೆನ್ಸೀಸ್)

    ರೈಲಿನಲ್ಲಿ ಬನಿಯನ್​, ಅಂಡರ್​ವೇರ್​ನಲ್ಲಿ ಓಡಾಡಿದ ಶಾಸಕ!

    ಮಹಿಳೆಯರೇ, ಸ್ತನ ಕ್ಯಾನ್ಸರ್​ ಬಗ್ಗೆ ಎಚ್ಚರ ವಹಿಸಿ! ರೋಗಲಕ್ಷಣ, ತಪಾಸಣೆ, ಚಿಕಿತ್ಸೆ… ವಿವರಗಳು ಇಲ್ಲಿವೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts