More

    ಟೀಮ್​ ಇಂಡಿಯಾ ಈಗ ವಿರಾಟ್​ ಕೊಹ್ಲಿಯದ್ದಲ್ಲ, ರವಿಶಾಸ್ತ್ರಿ ತಂಡದಂತಿದೆ!

    ನವದೆಹಲಿ: ಭಾರತೀಯ ಕ್ರಿಕೆಟ್​ ತಂಡದ ಇತ್ತೀಚೆಗಿನ ಯಶಸ್ಸಿನಲ್ಲಿ ನಾಯಕ ವಿರಾಟ್​ ಕೊಹ್ಲಿ ಮತ್ತು ಕೋಚ್​ ರವಿಶಾಸ್ತ್ರಿ ಅವರ ಪಾತ್ರ ಪ್ರಮುಖವಾದುದು. ಆದರೆ ಇಂಗ್ಲೆಂಡ್​ನ ಮಾಜಿ ಸ್ಪಿನ್ನರ್​ ಮಾಂಟಿ ಪನೇಸರ್​ ಪ್ರಕಾರ, ಭಾರತ ತಂಡದಲ್ಲಿ ನಾಯಕ ವಿರಾಟ್​ ಕೊಹ್ಲಿ ಅವರಿಗಿಂತ ಕೋಚ್​ ರವಿಶಾಸ್ತ್ರಿ ಅವರ ಪ್ರಭಾವವೇ ಹೆಚ್ಚಾಗಿದೆ! ರವಿಶಾಸ್ತ್ರಿ ಅವರು ತಂಡದಲ್ಲಿ ಹೆಚ್ಚಿನ ಆತ್ಮವಿಶ್ವಾಸ ತುಂಬಿದ್ದಾರೆ ಎಂದಿರುವ ಪನೇಸರ್​, ಆಸ್ಟ್ರೆಲಿಯಾ ಪ್ರವಾಸದಲ್ಲಿ ಭಾರತ ತಂಡ ಸಾಧಿಸಿದ ಐತಿಹಾಸಿಕ ಸಾಧನೆಯ ಶ್ರೇಯವನ್ನೂ ರವಿಶಾಸ್ತ್ರಿಗೆ ನೀಡಿದ್ದಾರೆ.

    ಭಾರತ ತಂಡದ ಕಳೆದ ಕೆಲ ತಿಂಗಳ ನಿರ್ವಹಣೆಯನ್ನು ವಿಶ್ಲೇಷಿಸಿದರೆ, ಅದು ವಿರಾಟ್​ ಕೊಹ್ಲಿಗಿಂತ ಹೆಚ್ಚಾಗಿ ರವಿಶಾಸ್ತ್ರಿ ಅವರ ತಂಡದಂತೆಯೇ ಕಾಣಿಸುತ್ತಿದೆ. ನನಗೆ ಅಂಥದ್ದೇ ಭಾವನೆ ಬರುತ್ತಿದೆ. ರವಿಶಾಸ್ತ್ರಿ ಅವರು ಭಾರತ ತಂಡದಲ್ಲಿ ಆತ್ಮ ನಂಬಿಕೆ ಸೃಷ್ಟಿಸಿದ್ದಾರೆ. ಅಡಿಲೇಡ್​ನಲ್ಲಿ ಕೇವಲ 36 ರನ್​ಗೆ ಆಲೌಟ್​ ಆದ ಬಳಿಕ ಆಸ್ಟ್ರೆಲಿಯಾಕ್ಕೆ ಭಾರತ ತಂಡ ತಿರುಗೇಟು ನೀಡಿದ ಶ್ರೇಯವೂ ರವಿಶಾಸ್ತ್ರಿಗೆ ಸಲ್ಲಬೇಕು. ಆ ಸರಣಿಯ ಉಳಿದ ಪಂದ್ಯಗಳಲ್ಲಿ ನಾಯಕ ವಿರಾಟ್​ ಕೊಹ್ಲಿ ಆಡಿರಲಿಲ್ಲ ಎಂದು ಪನೇಸರ್​ ವಿವರಿಸಿದ್ದಾರೆ.

    ಇದನ್ನೂ ಓದಿ: ಐಪಿಎಲ್​ನಿಂದ ಹೊರ ನಡೆಯುವ ಮುನ್ನ 8-9 ದಿನ ನಿದ್ದೆ ಮಾಡಿರಲಿಲ್ಲ ಅಶ್ವಿನ್​!

    ಆಸ್ಟ್ರೆಲಿಯಾವನ್ನು ಅದರದೇ ನೆಲದಲ್ಲಿ ಸೋಲಿಸುವಲ್ಲಿ ರವಿಶಾಸ್ತ್ರಿ ಅವರ ಕೊಡುಗೆ ಪ್ರಮುಖವಾದುದು ಎಂದು ಪನೇಸರ್​ ಹೇಳಿದ್ದಾರೆ. ಭಾರತ ತಂಡ ಈಗ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಪ್ರಶಸ್ತಿ ಸುತ್ತಿನ ಕಾದಾಟಕ್ಕೆ ಸಜ್ಜಾಗುತ್ತಿದೆ.

    ಪತ್ನಿಗೆ ತೆಲುಗಿನಲ್ಲಿ ರೊಮ್ಯಾಂಟಿಕ್​ ಸಂದೇಶ ರವಾನಿಸಿದ ಡೇವಿಡ್​ ವಾರ್ನರ್​!

    ಹಾಟ್ ಫೋಟೋಗಳ ಮೂಲಕ ಭರ್ಜರಿ ಸೌಂಡ್ ಮಾಡುತ್ತಿದ್ದಾರೆ ವಿಂಡೀಸ್ ಕ್ರಿಕೆಟಿಗನ ಪತ್ನಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts