More

    IPL 2024: ಇಂದು ಮುಂಬೈ-ಗುಜರಾತ್​ ಮುಖಾಮುಖಿ; ಹಾರ್ದಿಕ್​ ಪಾಂಡ್ಯಗೆ ಮಾಜಿ ತಂಡವೇ ಮೊದಲ ಎದುರಾಳಿ!

    ಅಹಮದಾಬಾದ್​: ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಉತ್ತರಾಧಿಕಾರಿಯಾಗಿ ಮುಂಬೈ ಇಂಡಿಯನ್ಸ್​ ತಂಡದ ಪರ ಎರಡು ವರ್ಷಗಳ ಬಳಿಕ ಮರಳಿ ಕಣಕ್ಕಿಳಿಯಲು ಸಜ್ಜಾಗಿರುವ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯಗೆ ಮೊದಲ ಪಂದ್ಯದಲ್ಲೇ ತನ್ನ ಮಾಜಿ ತಂಡ ಗುಜರಾತ್​ ಟೈಟಾನ್ಸ್​ ಎದುರಾಗಲಿದೆ. ಐಪಿಎಲ್​-17ರಲ್ಲಿ ಭಾನುವಾರ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮುಂಬೈ-ಗುಜರಾತ್​ ನಡುವಿನ ಪಂದ್ಯ ಹಲವು ಹೊಸ ಆರಂಭಗಳಿಗೆ ಸಾಯಾಗಲಿದೆ. ಐಪಿಎಲ್​ನಲ್ಲಿ ಶುಭಮಾನ್​ ಗಿಲ್​ ಅವರ ನಾಯಕತ್ವದ ಅಧ್ಯಾಯ ಆರಂಭವೂ ಅದರಲ್ಲಿ ಪ್ರಮುಖವಾದುದು.

    5 ಬಾರಿಯ ಚಾಂಪಿಯನ್​ ಮುಂಬೈ ಐಪಿಎಲ್​ ಇತಿಹಾಸದ ಯಶಸ್ವಿ ತಂಡಗಳಲ್ಲಿ ಒಂದಾಗಿದ್ದರೆ, ಗುಜರಾತ್​ ಟೈಟಾನ್ಸ್​ ತಂಡ ಆಡಿದ ಮೊದಲ 2 ಆವೃತ್ತಿಗಳಲ್ಲೂ ಫೈನಲ್​ ಪ್ರವೇಶಿಸಿದ ಅಪರೂಪದ ದಾಖಲೆ ಹೊಂದಿದೆ. ಆದರೆ ಕಳೆದ 2 ವರ್ಷಗಳಿಂದ ಗುಜರಾತ್​ ನಾಯಕರಾಗಿದ್ದ ಹಾರ್ದಿಕ್​ ಈಗ ಮುಂಬೈ ತಂಡದಲ್ಲಿದ್ದಾರೆ. ಅವರಿಗೆ ಗುಜರಾತ್​ ತಂಡದ ಬಲ-ದೌರ್ಬಲ್ಯಗಳ ಬಗ್ಗೆ ಅರಿವು ಇರುವುದರಿಂದ ಈ ಮುಖಾಮುಖಿ ಕುತೂಹಲ ಕೆರಳಿಸಿದೆ.
    ಇನ್ನು ಶುಭಮಾನ್​ ಗಿಲ್​ ಮೊದಲ ಬಾರಿಗೆ ಪ್ರಮುಖ ತಂಡವೊಂದರ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ. ನಾಯಕತ್ವದಲ್ಲಿ ಅವರಿಗೆ ಹೆಚ್ಚಿನ ಅನುಭವವಿಲ್ಲ. ಆದರೆ ಐಪಿಎಲ್​ನಲ್ಲಿ ಗಮನಾರ್ಹ ಸಾಧನೆ ತೋರಿದರೆ ಭವಿಷ್ಯದಲ್ಲಿ ಟೀಮ್​ ಇಂಡಿಯಾದ ನಾಯಕತ್ವವನ್ನೂ ಪಡೆಯಬಹುದಾದ ಅವಕಾಶವಿದೆ. ಹೀಗಾಗಿ 24 ವರ್ಷದ ಗಿಲ್​ ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾದ ಸವಾಲು ಹೊಂದಿದ್ದಾರೆ.

    ಇನ್ನು ರೋಹಿತ್​ ಶರ್ಮ 2012ರ ಬಳಿಕ ಮೊದಲ ಬಾರಿಗೆ ಐಪಿಎಲ್​ನಲ್ಲಿ ನಾಯಕತ್ವವಿಲ್ಲದೆ ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿಯಲಿದ್ದು, ಬ್ಯಾಟಿಂಗ್​ ವಿಭಾಗವನ್ನು ಬಲಪಡಿಸುವ ನಿರೀಕ್ಷೆ ಇದೆ. ವಿಶ್ವ ನಂ. 1 ಟಿ20 ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ಗಾಯದಿಂದಾಗಿ ಮುಂಬೈ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ರಣಜಿಯಲ್ಲಿ ಆಡದೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿರುವ ವಿಕೆಟ್​ ಕೀಪರ್​-ಬ್ಯಾಟರ್​ ಇಶಾನ್​ ಕಿಶನ್​ ಪಂದ್ಯದ ಕೇಂದ್ರ ಬಿಂದುವಾಗಿರುವ ಮತ್ತೋರ್ವ ಆಟಗಾರ. ಇನ್ನು ಗುಜರಾತ್​ ಪರ ಕಿವೀಸ್​ ನಾಯಕ ಕೇನ್​ ವಿಲಿಯಮ್ಸನ್​ ಮರಳಿ ಕಣಕ್ಕಿಳಿಯಲಿದ್ದಾರೆ. ಕಳೆದ ವರ್ಷ ಉದ್ಘಾಟನಾ ಪಂದ್ಯದಲ್ಲಿ ಗಾಯಗೊಂಡ ಬಳಿಕ ಐಪಿಎಲ್​ನಿಂದ ಹೊರಬಿದ್ದಿದ್ದರು.

    ಮುಖಾಮುಖಿ: 4
    ಮುಂಬೈ: 2
    ಗುಜರಾತ್​: 2
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋಸಿನಿಮಾ.

    ವಿಜಯಾನಂದ ಟ್ರಾವೆಲ್ಸ್ ಆಯೋಜಿಸಿರುವ VRL​ ಬಸ್​​ ವರ್ಕ್​​ಶಾಪ್​​ನಲ್ಲಿ ಭಾಗಿಯಾಗಲಿದ್ದಾರೆ​ RCB ಆಟಗಾರ್ತಿ ಶ್ರೇಯಾಂಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts