More

    ಪಾಂಡುಕಲ್ಲು – ಶಿವಪುರ ರಸ್ತೆ ಅಭಿವೃದ್ಧಿ

    ಕೊಕ್ಕರ್ಣೆ: ಕಳ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ತೂರು- ಸಂತೆಕಟ್ಟೆ- ಪಾಂಡುಕಲ್ಲು- ಹೊಗೆಬೆಳಾರ್- ಕಕ್ಕುಂಜೆಬೈಲು- ಅಸ್ರಂಬಳ್ಳಿ ಸಂಪರ್ಕಿಸುವ 7 ಕಿ.ಮೀ. ರಸ್ತೆಗೆ 3 ಕೋಟಿ ರೂ. ವೆಚ್ಚದ ಕಾಮಗಾರಿ ಸದ್ಯದಲ್ಲಿ ಪೂರ್ಣಗೊಳ್ಳಲಿದೆ.

    ಸುಮಾರು ನಾಲ್ಕು ದಶಕಗಳ ಬೇಡಿಕೆಯನ್ನು ಈಡೇರಿಸುವಂತೆ 2 ವರ್ಷದ ಹಿಂದೆ ನಿವೃತ್ತ ಮುಖ್ಯಶಿಕ್ಷಕ ಹಳ್ಳಿ ಗಣಪತಿ ಶೆಟ್ಟಿ ನೇತೃತ್ವದಲ್ಲಿ ಗ್ರಾಮಸ್ಥರ ಸಹಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಗೆ ರಸ್ತೆ ಅವ್ಯವಸ್ಥೆ ಬಗ್ಗೆ ಪತ್ರ ಬರೆದಿದ್ದರು.

    ಪಿಎಂಜಿವೈ ಯೋಜನೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯಿಂದ ಕಳ್ತೂರು ಗ್ರಾಪಂ ಮತ್ತು ಶಿವಪುರ ಗ್ರಾಪಂ ವ್ಯಾಪ್ತಿಯ 11ಸಾವಿರಕ್ಕೂ ಅಧಿಕ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಈ ರಸ್ತೆ ಸೇತುವೆ ನಿರ್ಮಾಣದಲ್ಲಿ ಶಾಸಕರಾದ ವಿ.ಸುನೀಲ್ ಕುಮಾರ್, ಕೆ.ರಘುಪತಿ ಭಟ್, ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಪ್ರಮೋದ್ ಮಧ್ವರಾಜ್, ಜಿಪಂ ಮಾಜಿ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಮುಂತಾದವರು ಸಹಕರಿಸಿದ್ದಾರೆ. ರಸ್ತೆ ಅವ್ಯವಸ್ಥೆ ಬಗ್ಗೆ ವಿಶೇಷ ವರದಿ ಪ್ರಕಟಿಸಿ ವಿಜಯವಾಣಿ ಗಮನ ಸಳೆದಿತ್ತು.

    ಈ ಹಿಂದೆ ಗ್ರಾಮಸ್ಥರು ಸೇರಿ ಪ್ರಧಾನಿ ಮೋದಿಯವರಿಗೆ ರಸ್ತೆ ಅಭಿವೃದ್ಧಿಗೆ ಪತ್ರ ಬರೆದಿದ್ದೆವು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮುತುವರ್ಜಿಯಿಂದ ಕಾಂಕ್ರೀಟ್ ಕಾಮಗಾರಿಯಾಗುತ್ತಿದೆ. ಗ್ರಾಮಸ್ಥರ ಸಮಸ್ಯೆಯ ಕುರಿತು ವಿಶೇಷ ಲೇಖನ ಪ್ರಕಟಿಸಿದ ವಿಜಯವಾಣಿ ಪತ್ರಿಕೆಗೆ ಧನ್ಯವಾದಗಳು.
    -ಹಳ್ಳಿ ಗಣಪತಿ ಶೆಟ್ಟಿ, ಗ್ರಾಮಸ್ಥರು ಕಳ್ತೂರು ಸಂತೆಕಟ್ಟೆ

    ಪಾಂಡುಕಲ್ಲು -ಸಂತೆಕಟ್ಟೆ -ಶಿವಪುರ ಸಂಪರ್ಕಿಸುವ ಪ್ರಮುಖ ರಸ್ತೆಗೆ ಸದ್ಯ ಕಾಂಕ್ರೀಟ್ ಕಾಮಗಾರಿಯಾಗುತ್ತಿದೆ. ಎರಡೂ ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಜನರ ಓಡಾಟಕ್ಕೆ ಸಹಕಾರಿಯಾಗಲಿದೆ.
    -ಹರಿದಾಸ ಬಿ.ಸಿ.ರಾವ್ ಶಿವಪುರ, ಹಿರಿಯ ನಾಗರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts