More

    ಪಂಚಕಲ್ಯಾಣ ಮಹೋತ್ಸವ ಆಚರಣೆಗೆ ಅಗತ್ಯ ಸಹಕಾರ

    ಬೋರಗಾಂವ : ಬರುವ ಮಾ. 27ರಿಂದ ಭೋಜ ಗ್ರಾಮದ ಆಚಾರ್ಯ ಶಾಂತಿಸಾಗರ ತೀರ್ಥಂಕರ ಸ್ಮಾರಕದಲ್ಲಿ ನಡೆಯಲಿರುವ ಪಂಚ ಕಲ್ಯಾಣ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಅವರು ಸಮೀಪದ ಭೋಜ ಗ್ರಾಮದಲ್ಲಿ ಪಂಚಕಲ್ಯಾಣ ಮಹಾಮಹೋತ್ಸವದ ಬಗ್ಗೆ ಮಾಹಿತಿ ಪಡೆದು, ಶಾಂತಿಸಾಗರ ತೀರ್ಥಪ್ರಣೀತ 108 ಪ್ರಜ್ಞಾಸಾಗರ ಮುನಿಗಳ ಆಶೀರ್ವಾದ ಪಡೆದು, ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ನೀಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಭೋಜ ಗ್ರಾಮವು ಶಾಂತಿಸಾಗರ ಮುನಿಗಳ ಪುಣ್ಯ ಕ್ಷೇತ್ರವಾಗಿದೆ. ಇಂತಹ ಪುಣ್ಯಕ್ಷೇತ್ರದಲ್ಲಿ ಅದ್ದೂರಿಯಾಗಿ ಆಚರಿಸಲಿರುವ ಪಂಚ ಕಲ್ಯಾಣ ಮಹಾಪೂಜೆಗೆ ವಿವಿಧ ಇಲಾಖೆಯಿಂದ ಸಹಕಾರ ನೀಡಲಾಗುವುದು.

    ಗ್ರಾಮದಲ್ಲಿ ಸ್ವಚ್ಛತೆ, 24 ಗಂಟೆ ವಿದ್ಯುತ್, ಕುಡಿಯುವ ನೀರು, ಪೊಲೀಸ್ ಭದ್ರತೆ, ರಸ್ತೆ, ಚರಂಡಿ ನಿರ್ಮಾಣ, ಮುಖ್ಯ ರಸ್ತೆಗಳ ಡಾಂಬರೀಕರಣ, ಆರೋಗ್ಯ ಸೇವೆ ಸೇರಿ ಇತರ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

    ಎಲ್ಲರ ಸಹಕಾರದಿಂದ ಮಹೋತ್ಸವವನ್ನು ಮಾದರಿಯಾಗಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಶಾಂತಿಸಾಗರ ಸಭಾಭವನದಲ್ಲಿ ಜೊಲ್ಲೆ ದಂಪತಿಯನ್ನು ಪ್ರಜ್ಞಾಸಾಗರ ಮುನಿಗಳು ಸತ್ಕರಿಸಿದರು. ರಾಹುಲ ಪಾಟೀಲ, ಆದಗೊಂಡಾ ಪಾಟೀಲ, ಭರತ ಕುಪಾನಟ್ಟೆ, ಸಚಿನ ಕೇಸ್ತೆ, ಪ್ರಶಾಂತ ಪಾಟೀಲ, ಅಪ್ಪಾಸಾಬ ಪಾಟೀಲ, ಸಜೀತ್ ಮಾಳಿ, ಸಂಜು ಸಂಕಪಾಳ, ಶಿವಗೊಂಡಾ ಪಾಟೀಲ, ಮಲಗೌಡಾ ಪಾಟೀಲ, ಸಂಜಯ ಪಾಟೀಲ, ಸಂಜಯ ಕಮತೆ, ಬಿ.ಬಿ. ಬೇಡಕಿಹಾಳೆ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts