More

    ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ 27ರಿಂದ

    ಬೋರಗಾಂವ: ಪಟ್ಟಣದಲ್ಲಿ ಶ್ರೀ ಮದ್ದೇವಾದಿದೇವ 1008 ಭಗವಾನ ಪಾರ್ಶ್ವನಾಥ ದಿಗಂಬರ ಜಿನಮಂದಿರ, ಆದಿಸಾಗರ ಜೈನ ಗುಂಫಾದ ಅಭಿವೃದ್ಧಿ ಹಾಗೂ ಪ್ರಥಮಾಚಾರ್ಯ ಶ್ರೀ ಶಾಂತಿಸಾಗರ ಮುನಿ ಮಹಾರಾಜರ ಪ್ರತಿಮೆ ಸ್ಥಾಪನೆ ಅಂಗವಾಗಿ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವವನ್ನು ಜ. 27ರಿಂದ 31ರ ವರೆಗೆ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ, ಶ್ರಾವಕರತ್ನ ರಾವಸಾಹೇಬ ಪಾಟೀಲ ತಿಳಿಸಿದ್ದಾರೆ.

    ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋರಗಾಂವದಲ್ಲಿ ಸುಂದರ ಅತಿಶಯ ಕ್ಷೇತ್ರ ಜೊತೆಗೆ ಮುನಿ ನಿವಾಸ, ಶ್ರಾವಕ ನಿವಾಸ ನಿರ್ಮಿಸಲು ಪ್ರಯತ್ನಿಸಲಾಗಿದೆ. ರಾಜ್ಯ ಅಲ್ಪಸಂಖ್ಯಾತರ ಇಲಾಖೆ ಹಾಗೂ ದಾನಿಗಳು, ಶ್ರಾವಕರ ಸಹಕಾರದಿಂದ 90 ಲಕ್ಷ ರೂ. ಖರ್ಚು ಮಾಡಿ, ಮಂದಿರದ ಜಿರ್ಣೋದ್ಧಾರ ಮಾಡಲಾಗಿದೆ. ಸುಸಜ್ಜಿತ ಸಾಂಸ್ಕೃತಿಕ ಭವನ, ಪಂಡಿತ ನಿವಾಸ, ಶಾಂತಿಸಾಗರ ಮಹಾರಾಜರ ಪ್ರತಿಮೆ ಸ್ಥಾಪನೆ, ಕಚೇರಿ, ಮಂದಿರ ಪರಿಸರದಲ್ಲಿ ನೆಲಹಾಸು ಕಾಮಗಾರಿ, ಉದ್ಯಾನ ನಿರ್ಮಾಣ, ಸೇರಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ಸೋಮವಾರ ಧ್ವಜಾರೋಹಣ, ಉದ್ಘಾಟನೆ, ನವಗ್ರಹ ಹೋಮ ಮತ್ತು ಗರ್ಭಕಲ್ಯಾಣ ಕಾರ್ಯಕ್ರಮ ಜರುಗಲಿದೆ.

    ಮಂಗಳವಾರ ಜನ್ಮಕಲ್ಯಾಣ, ಬುಧವಾರ ಮೌಜಿಬಂಧನ ಮತ್ತು ರಾಜ್ಯಾಭಿಷೇಕ, ಗುರುವಾರ ಕಲ್ಯಾಣ ಹಾಗೂ ರಥೋತ್ಸವ, ಶುಕ್ರವಾರ ನಿರ್ವಾಣ ಕಲ್ಯಾಣ ಸತ್ಕಾರ ಕಾರ್ಯಕ್ರಮ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಉದ್ಯಮಿ ಅಭಿನಂದನ ಪಾಟೀಲ, ಮುಖಂಡ ಉತ್ತಮ ಪಾಟೀಲ, ಸಮಿತಿಯ ನಿರ್ದೇಶಕರಾದ ನೆಮಗೊಂಡ ಪಾಟೀಲ, ರಾಜೇಂದ್ರ ಪಾಟೀಲ, ಬಿ.ಟಿ. ವಠಾರೆ, ಅಭಯ ಕರೋಲೆ, ಅರವಿಂದ ಮೈಶಾಳೆ, ಸುಜಾತಾ ಲಗಾರೆ, ಧನ್ಯಕುಮಾರ ಪಾಟೀಲ, ರಾಜು ಮಗದುಮ್ಮ, ಮನೋಜ ಪಾಟೀಲ, ಪೋಪಟ ಪಾಟೀಲ, ಅಭಯಕುಮಾರ ಮಗದುಮ್ಮ, ಅಶೋಕ ಪಾಟೀಲ, ಮೀನಾಕ್ಷಿ ಪಾಟೀಲ, ಅಶೋಕ ಬಂಕಾಪುರೆ, ಪ್ರಕಾಶ ಜಂಗಟೆ, ರಾಕೇಶ ಫಿರಗನ್ನವರ, ಅನಿಲ ಪಾಟೀಲ, ಶ್ರೀಮಂಧರ ಪಾಟೀಲ ಇದ್ದರು. ಬಾಳಾಸಾಬ ಹವಲೆ ಸ್ವಾಗತಿಸಿದರು. ಪಾಯಗೊಂಡ ಪಾಟೀಲ ವಂದಿಸಿದರು.

    5 ದಿನ ಕಾರ್ಯಕ್ರಮ

    ಶ್ರೀ 108 ನಿಶ್ಚಯಸಾಗರ ಮಹಾರಾಜ, ಪ.ಪೂ. ಆಚಾರ್ಯ ಶ್ರೀ 108 ಗುಣಭದ್ರನಂದಿ ಮಹಾರಾಜ ಅವರ ಸಾನ್ನಿಧ್ಯದಲ್ಲಿ, 14 ಭಟ್ಟಾರಕ ಸ್ವಾಮೀಜಿ ಹಾಗೂ ಮಾತಾಜಿಗಳ ಮಾರ್ಗದರ್ಶನದಲ್ಲಿ ನಡೆಯಲಿವೆ. ಪ.ಪೂ. ಶಾಂತಿಸಾಗರ ಮಹಾರಾಜರ ಜನ್ಮಶತಾಬ್ದಿ ಅಂಗವಾಗಿ 8 ಲಕ್ಷ ರೂ. ವೆಚ್ಚದಲ್ಲಿ ಕಂಚಿನ 6 ಅಡಿ ಶಾಂತಿಸಾಗರ ಮಹಾರಾಜರ ಮೂರ್ತಿ ಸ್ಥಾಪಿಸಲಾಗಿದೆ. ಇದರ ಪ್ರತಿಷ್ಠಾಪನೆ ಸೇರಿ ಮಹಾ ಅಭಿಷೇಕ, ಹೋಮ ಹಾಗೂ 56 ರಾಷ್ಟ್ರಗಳ ರಾಜರಿಂದ ಕಾಣಿಕೆ ಅರ್ಪಣೆ,ಪಾಂಡುಕ ಶಿಲೆಯ ಮೇಲೆ ಜಿನಜನ್ಮಾಭಿಷೇಕ ನಡೆಯಲಿದೆ ಎಂದು ರಾವಸಾಹೇಬ ಪಾಟೀಲ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts