More

    ಜೀವ ವೈವಿಧ್ಯತಾಣವಾಗಿ ಪಂಚಗಂಗಾವಳಿ ಕಾಂಡ್ಲವನ: ಜೀವ ವೈವಿಧ್ಯಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿಕೆ

    ಉಡುಪಿ: ಕುಂದಾಪುರ, ಪಂಚಗಂಗಾವಳಿ ನದಿಯ 100 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿರುವ ಕಾಂಡ್ಲವನವನ್ನು ಪಾರಂಪರಿಕ ಜೀವ ವೈವಿಧ್ಯತೆ ತಾಣವಾಗಿ ಘೋಷಿಸಲು ತಯಾರಿ ನಡೆಸಲಾಗುತ್ತಿದೆ ಎಂದು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.

    ಈ ಅಮೂಲ್ಯ ಪರಿಸರ ಸಂಪತ್ತಿನ ಸಂರಕ್ಷಣೆ ಅಗತ್ಯವಾಗಿದ್ದು, ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಇದನ್ನು ಪರಿಶೀಲಿಸಿ ಜೀವವೈವಿಧ್ಯ ತಾಣ ಘೋಷಣೆ ಮಾಡಲಾಗುವುದು ಎಂದು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

    ಕರಾವಳಿ ಜಿಲ್ಲೆಗಳಲ್ಲಿ ಕಾಂಡ್ಲವನ ಯೋಜನೆಯನ್ನು ಸಮುದ್ರತೀರದಲ್ಲಿ ಹಂತ ಹಂತವಾಗಿ ವಿಸ್ತರಿಸಲು ಉದ್ದೇಶಿಸಲಾಗಿದೆ. ಮೇ 22ರಂದು ಜೀವ ವೈವಿಧ್ಯ ದಿನಾಚರಣೆ ಅಂಗವಾಗಿ ರಾಜ್ಯದ ಎಲ್ಲ ಗ್ರಾ.ಪಂಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಡೀಮ್ಡ್ ಫಾರೆಸ್ಟ್ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.
    ಕಡಲಶಾಸ್ತ್ರ ತಜ್ಞ ಡಾ.ಪ್ರಕಾಶ್ ಮೇಸ್ತ, ಸಿಆರ್‌ಝಡ್ ಡಿಎಫ್‌ಒ ದಿನೇಶ್ ಕುಮಾರ್, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿಗಳಾದ ಲೋಹಿತ್, ಕ್ಲಿಫರ್ಡ್ ಲೋಬೊ, ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿದ್ದರು.

    ಉಡುಪಿಯಲ್ಲಿ ವಿಶ್ವೇಶತೀರ್ಥ ಶ್ರೀ ಸ್ಮತಿವನ
    ಪರಿಸರದ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥರ ನೆನಪಿನಲ್ಲಿ ಜಿಲ್ಲೆಯಲ್ಲಿ ಸ್ಮತಿವನ ನಿರ್ಮಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಅನಂತ ಹೆಗಡೆ ಹೇಳಿದರು. ಸರ್ಕಾರ ಈ ಬಜೆಟ್‌ನಲ್ಲಿ ಸ್ಮತಿವನ ಯೋಜನೆ ಪ್ರಸ್ತಾಪಿಸಲಿದೆ. ಅರಣ್ಯ, ಪ್ರವಾಸೋದ್ಯಮ ಇಲಾಖೆ ಮೂಲಕ ಜಿಲ್ಲೆಯಲ್ಲಿ ಪೇಜಾವರ ಸ್ಮತಿವನ ನಿರ್ಮಾಣವಾಗಲಿದೆ. ಈ ಬಗ್ಗೆ ಜಾಗ ಗುರುತು ಇನ್ನಷ್ಟೇ ಆಗಬೇಕಿದೆ ಎಂದರು.
    ಸಿಂಗಳೀಕ ಸಂರಕ್ಷಣೆಗೆ ಕ್ರಮ

    ಅವನತಿ ಅಂಚಿನಲ್ಲಿರುವ ಸಿಂಗಳೀಕ ಸಂತತಿ ಸಂರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಗೇರುಸೊಪ್ಪ ಶರಾವತಿ ವನ್ಯಜೀವಿ ಅಭಯರಣ್ಯ ಸಿಂಗಳೀಕ ಸಂರಕ್ಷಿತ ಪ್ರದೇಶವನ್ನಾಗಿ ಈಗಾಗಲೇ ಘೋಷಿಸಲಾಗಿದೆ ಎಂದು ಅನಂತ ಹೆಗಡೆ ಹೇಳಿದರು. ರಾಜ್ಯದ ಪ್ರತಿ ಜಿಲ್ಲೆಯಲ್ಲಿರುವ ವನ್ಯಜೀವಿ, ಸಸ್ಯ ಸಂಪತ್ತಿನ ಬಗ್ಗೆ ವಿವರ, ಅವನತಿ ಅಂಚಿನಲ್ಲಿರುವ ಮತ್ತು ಸಂರಕ್ಷಣೆಗೆ ಕೈಗೊಳ್ಳಬೇಕಾದ ಕಾರ್ಯದ ಬಗ್ಗೆ ಕನ್ನಡ ಭಾಷೆಯಲ್ಲಿ ಸಂಕ್ಷಿಪ್ತವಾಗಿ ಕಿರುಹೊತ್ತಗೆ ಶೀಘ್ರ ಹೊರ ತರಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts