More

    ಕನ್ನಡ ಕುವರ ಅನಿಲ್​ ಕುಂಬ್ಳೆ ಸಹಾಯ ಸ್ಮರಿಸಿದ ಪಾಕ್​ನ ಮಾಜಿ ಸ್ಪಿನ್ನರ್​ ಸಕ್ಲೇನ್​ ಮುಸ್ತಾಕ್​, ಕುಂಬ್ಳೆ ಮಾಡಿದ ಸಹಾಯವಾದರೂ ಏನು?

    ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ, ದಿಗ್ಗಜ ಬೌಲರ್​ ಅನಿಲ್​ ಕುಂಬ್ಳೆ ಹೋರಾಟ ಎಂಬ ಪದಕ್ಕೆ ಪ್ರತಿಮೆಯಾಗಿದ್ದರು. ವೆಸ್ಟ್​ಇಂಡೀಸ್​ ಪ್ರವಾಸದಲ್ಲಿ ದವಡೆ ಮುರಿತಕ್ಕೆ ಒಳಗಾದರೂ ಬ್ಯಾಂಡೇಜ್​ ಕಟ್ಟಿಕೊಂಡು ಬೌಲಿಂಗ್​ ಮುಂದುವರಿಸಿದ ಆ ಚಿತ್ರ ಇಂದಿನ ಮತ್ತು ಮುಂದಿನ ಪೀಳಿಗೆಯವರೆಲ್ಲರಿಗೂ ಸ್ಫೂರ್ತಿದಾಯಕ ಎನಿಸಿದೆ.

    ಇಂಥ ಆಟಗಾರ ಪರಮ ಶತ್ರು ಪಾಳೆಯ ಎನಿಸಿಕೊಂಡ ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರನೊಬ್ಬನ ಅಭಿಮಾನವನ್ನು ಗೆದ್ದಿದ್ದರು ಎಂದರೆ ನಂಬಲಸಾಧ್ಯವಾದ ಮಾತು. ಪಾಕ್​ ಕ್ರಿಕೆಟ್​ ತಂಡದ ಮಾಜಿ ಸ್ಪಿನ್ನರ್​ ಸಕ್ಲೇನ್​ ಮುಸ್ತಾಕ್​ ಹೇಳುವವರೆಗೂ ಈ ವಿಷಯ ಸಾರ್ವಜನಿಕವಾಗಿರಲಿಲ್ಲ.

    ಸಕ್ಲೇನ್​ ಮುಸ್ತಾಕ್​ ಅವರ ಮಾತಿನಲ್ಲೇ ಹೇಳುವುದಾದರೆ, ನನ್ನ ಕಣ್ಣಿನಲ್ಲಿ ಏನೋ ತೊಂದರೆ ಇತ್ತು. ಪಾಕಿಸ್ತಾನದಲ್ಲಿ ಘಟಾನುಘಟಿ ಕಣ್ಣಿನ ವೈದ್ಯರಲ್ಲಿ ತೋರಿಸಿಕೊಂಡರೂ ಸಮಸ್ಯೆ ಪರಿಹಾರವಾಗಿರಲಿಲ್ಲ. ನಾವು ಆಗ ಇಂಗ್ಲೆಂಡ್​ನಲ್ಲಿದ್ದೆವು. ಆಗ ಭಾರತ ಕ್ರಿಕೆಟ್​ ತಂಡದ ಅನಿಲ್​ ಕುಂಬ್ಳೆ ಅವರನ್ನು ಭೇಟಿಯಾಗಿ, ಅವರ ಬಳಿ ನನ್ನ ಸಮಸ್ಯೆ ಹೇಳಿಕೊಂಡೆ. ಆಗ ಅವರು ಲಂಡನ್​ನಲ್ಲಿದ್ದ ಭಾರತೀಯ ಮೂಲಕ ಕಣ್ಣಿನ ತಜ್ಞ ಡಾ. ಭಾರತ್​ ರುಂಗಾನಿ ಬಳಿ ಹೋಗುವಂತೆ ಸಲಹೆ ನೀಡಿದರು. ಸ್ವತಃ ತಾವು ಮತ್ತು ಸೌರವ್​ ಗಂಗೂಲಿ ಆ ವೈದ್ಯರ ಬಳಿಯೇ ಕಣ್ಣಿನ ಚಿಕಿತ್ಸೆ ಪಡೆಯುವುದಾಗಿ ಹೇಳಿದರು.

    ಲಂಡನ್​ನ ಹರ್ಲೆ ಸ್ಟ್ರೀಟ್​ನಲ್ಲಿದ್ದ ಅವರ ಬಳಿ ಹೋಗಿ ತೋರಿಸಿಕೊಂಡ ನಂತರದಲ್ಲಿ ನನ್ನ ಕಣ್ಣಲ್ಲಿ ಪೊರೆ ಇರುವುದು ಪತ್ತೆಯಾಯಿತು. ಜತೆಗೆ ನನ್ನ ಕಣ್ಣಿನಲ್ಲಿ ಸಿಲಿಂಡ್ರಿಕಲ್​ ದೃಷ್ಟಿ ದೋಷ ಇರುವುದು ಗೊತ್ತಾಯಿತು. ತಕ್ಷಣವೇ ಅವರು ಕಣ್ಣಿನ ಪೊರೆಯ ಸಮಸ್ಯೆ ಪರಿಹರಿಸಿ, ಕನ್ನಡಕ ಬರೆದುಕೊಟ್ಟರು. ಅದರಿಂದ ನನ್ನ ಕಣ್ಣಿನ ಸಮಸ್ಯೆ ದೂರಾಯಿತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

    ಅಂದಿನಿಂದ ಅನಿಲ್​ ಕುಂಬ್ಳೆ ನನ್ನ ಪಾಲಿಗೆ ಹಿರಿಯ ಅಣ್ಣ ಇದ್ದಂತೆ. ಅವರೊಬ್ಬ ಶ್ರೇಷ್ಠ ವ್ಯಕ್ತಿ. ನನಗೆ ನನ್ನ ಕಣ್ಣಿನ ಸಮಸ್ಯೆ ಪರಿಹರಿಸಿಕೊಳ್ಳಲು ಸಹಕರಿಸಿದ್ದಕ್ಕಾಗಿ ಅವರಿಗೆ ನಾನು ಸದಾ ಚಿರಋಣಿ ಎಂದು ಹೇಳಿದ್ದಾರೆ.

    ಇದಾದ ನಂತರದಲ್ಲಿ ತಾವಿಬ್ಬರು ಭೇಟಿಯಾದಾಗಲೆಲ್ಲ ಹಲವು ವಿಷಯಗಳ ಕುರಿತು ಮುಕ್ತವಾಗಿ ಚರ್ಚೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

    ಕ್ರಿಕೆಟ್​ ವಿಶ್ವದ ಬೌಲರ್​ಗಳ ಪಾಲಿನ ಸಿಂಹಸ್ವಪ್ನ ವೀರೇಂದ್ರ ಸೆಹ್ವಾಗ್​ಗೆ ರಾಮಾಯಣದ ಈ ಪಾತ್ರವೇ ಸ್ಫೂರ್ತಿಯಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts