More

    ಅಕ್ರಮ ವಲಸಿಗರ ಗಡಿಪಾರಿಗೆ ಪಾಕ್​ ತೀರ್ಮಾನ!

    ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ವರ್ಷಗಳಿಂದ ವಾಸಿಸುತ್ತಿರುವ 17 ಲಕ್ಷ ಆಪ್ಘನ್ನರು ಸೇರಿದಂತೆ ಎಲ್ಲ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಯೋಜನೆಯನ್ನು ಕ್ರಮಬದ್ಧವಾಗಿ ನಡೆಸುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದೆ.

    ಸಾಮೂಹಿಕ ಬಂಧನ ಮತ್ತು ಬಲವಂತದ ಗಡಿಪಾರು ತಪ್ಪಿಸಲು ಸೂಕ್ತ ದಾಖಲೆಗಳಿಲ್ಲದ ಯಾರೇ ಆದರೂ ಅಕ್ಟೋಬರ್​ 31ರ ಮೊದಲು ಸ್ವಯಂಪ್ರೇರಣೆಯಿಂದ ತಮ್ಮ ದೇಶಗಳಿಗೆ ಹಿಂತಿರುಗಬೇಕಾಗುತ್ತದೆ ಎಂದು ತಿಳಿಸಿದೆ. ಅಫ್ಘಾನಿಸ್ತಾನದ ತಾಲಿಬಾನ್​ ಆಡಳಿತಗಾರರು ಈ ಕ್ರಮವನ್ನು ಅಮಾನವೀಯ ಎಂದು ಖಂಡಿಸಿ, ಜಾಗತಿಕ ಮಾನವ ಹಕ್ಕುಗಳ ಗುಂಪುಗಳು ಈ ನಿರ್ಧಾರವನ್ನು ಪರಿಶೀಲಿಸುವಂತೆ ಪಾಕಿಸ್ತಾನದ ಅಧಿಕಾರಿಗಳಿಗೆ ಕರೆ ನೀಡಿವೆ.

    ಅಕ್ರಮ ವಲಸಿಗರನ್ನು ಹೊರಹಾಕುವ ನಿರ್ಧಾರವು ಸಾರ್ವಭೌಮ ದೇಶಗಳ ಕಾನೂನಿಗೆ ಅನುಗುಣವಾಗಿದೆ. ಅಂತಾರಾಷ್ಟ್ರೀಯ ನೀತಿಯ ಅನ್ವಯ ಪಾಕಿಸ್ತಾನವು ಈ ನಿರ್ಧಾರ ಕೈಗೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮುಮ್ತಾಜ್​ ಜಹ್ರಾ ಬಲೂಚ್​ ಹೇಳಿದ್ದಾರೆ. ಹೊಸ ನೀತಿಯು ವರ್ಷಗಳಿಂದ ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಆ್ಘನ್​ ನಿರಾಶ್ರಿತರನ್ನು ಗುರಿಯಾಗಿಸಿಲ್ಲ. ಈ ನೀತಿಯು ಎಲ್ಲ ರಾಷ್ಟ್ರೀಯತೆಗಳ ಎಲ್ಲ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ಈ ವಿಷಯದಲ್ಲಿ ಯಾವುದೇ ತಾರತಮ್ಯವಿಲ್ಲ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts