More

    ಆಧಾರ್​ ಕಾರ್ಡ್​ನೊಂದಿಗೆ ವಾಸಿಸುತ್ತಿದ್ದ ಪಾಕಿಸ್ತಾನಿ ಭಯೋತ್ಪಾದಕನ ಬಂಧನ

    ನವದೆಹಲಿ: ಭಾರತೀಯ ನಾಗರೀಕನೆಂಬಂತೆ ನಕಲಿ ದಾಖಲಾತಿಯೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದ ಪಾಕಿಸ್ತಾನಿ ಭಯೋತ್ಪಾದಕನೊಬ್ಬನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ. ನಗರದ ಲಕ್ಷ್ಮೀನಗರದ ರಮೇಶ್​ ಪಾರ್ಕ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮೊಹಮ್ಮದ್ ಅಸ್ರಫ್​ ಬಂಧಿತ.

    ಬಂಧಿತ ಭಯೋತ್ಪಾದಕನ ಬಳಿಯಿಂದ ಒಂದು ಎಕೆ-47 ಅಸಾಲ್ಟ್​ ರೈಫಲ್​, ಎಕ್ಸ್​ಟ್ರಾ ಮ್ಯಾಗಜಿನ್​, 60 ರೌಂಡ್ಸ್​ ಬುಲೆಟ್​ಗಳು, ಒಂದು ಹ್ಯಾಂಡ್ ಗ್ರೆನೇಡ್​, 2 ಅತ್ಯಾಧುನಿಕ ಪಿಸ್ತೋಲ್​ಗಳು ಮತ್ತು ಅದರ 50 ರೌಂಡ್ಸ್​ ಬುಲೆಟ್​ಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಇಬ್ಬರು ಉಗ್ರವಾದಿಗಳನ್ನು ಸದೆಬಡಿದ ಜಮ್ಮು ಕಾಶ್ಮೀರ ಪೊಲೀಸರು

    ಬಂಧಿತ ಮೊಹಮ್ಮದ್​ ಅಸ್ರಫ್​ನ ಮನೆ ಮಾಲೀಕನಾದ ಉಜೈಬ್​​, ಸುದ್ದಿ ಸಂಸ್ಥೆ ಎಎನ್​ಐನೊಂದಿಗೆ ಮಾತನಾಡಿದ್ದು, ಅಸ್ರಫ್​ ಅಲ್ಲಿ 6 ತಿಂಗಳು ವಾಸಿಸಿದ್ದ. ತಮ್ಮ ತಂದೆಯೇ ಬಾಡಿಗೆ ಒಪ್ಪಂದ ಮಾಡಿಸುವುದಕ್ಕಾಗಿ ಅವರ ಆಧಾರ್​ ಕಾರ್ಡ್​ ಮಾಡಿಸಿದ್ದರು. ಅವನು ಇಲ್ಲಿಂದ ತೆರಳಿದ ಮೇಲೆ ಸಂಪರ್ಕದಲ್ಲಿರಲಿಲ್ಲ. ಅಗತ್ಯವಿದ್ದರೆ, ಪೊಲೀಸರೊಂದಿಗೆ ನಾವು ಸಹಕರಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್)

    ಮಕ್ಕಳಿಗೂ ಬಂತು ಕರೊನಾ ಲಸಿಕೆ: 2 ರಿಂದ 18 ವರ್ಷದವರಿಗೆ ಕೋವಾಕ್ಸಿನ್​ ತುರ್ತು ಬಳಕೆಗೆ ತಜ್ಞರ ಅನುಮೋದನೆ

    ದೆಹಲಿಯಲ್ಲಿ ವಿದ್ಯುತ್ ಕೊರತೆ ಇಲ್ಲ! ವಿದ್ಯುತ್ ಪೂರೈಕೆಯ ಫ್ಯಾಕ್ಟ್​ಶೀಟ್​ ಪ್ರಕಟಿಸಿದ ಕೇಂದ್ರ ಸರ್ಕಾರ

    ಬಿಜೆಪಿ ತೊರೆದು ‘ಕೈ’ ಸೇರಿದ ಉತ್ತರಾಖಂಡ ಸಚಿವ ಮತ್ತು ಶಾಸಕ ಪುತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts