More

    ಪಾಕಿಸ್ತಾನದ ಎಲ್​ಇಟಿ ಕಮಾಂಡರ್​ ಸೇರಿ ಮೂವರು ಉಗ್ರರನ್ನು ಹೊಡೆದುರುಳಿಸಿದ ರಕ್ಷಣಾ ಪಡೆ

    ಶ್ರೀನಗರ: ಉಗ್ರರನ್ನು ಗುರಿಯಾಗಿಸಿಕೊಂಡು ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ರಕ್ಷಣಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.

    ಬುಧವಾರ ಬೆಳಿಗ್ಗೆಯೇ ಕಾರ್ಯಾಚರಣೆ ನಡೆದಿದೆ. ಓರ್ವ ಉಗ್ರನನ್ನು ಪಾಕಿಸ್ತಾನದ ಲಷ್ಕರ್​-ಎ-ತೈಬಾ ಉಗ್ರ ಸಂಘಟನೆಯ ಕಮಾಂಡರ್​ ಐಜಾಜ್​ ಅಲಿಯಾಸ್​ ಅಬು ಹುರೈರಾ ಎಂದು ಗುರುತಿಸಲಾಗಿದೆ. ಉಳಿದ ಇಬ್ಬರು ಸ್ಥಳೀಯರು ಎಂದು ತಿಳಿದುಬಂದಿದೆ.

    ಕಾಶ್ಮೀರ ವಲಯ ಪೊಲೀಸರ ಪ್ರಕಾರ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಒಳಗೊಂಡಂತೆ ತಪ್ಪಿಗೆ ಗುರಿ ಮಾಡುವ ಕೆಲ ವಸ್ತುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಪ್ರಸ್ತುತ ರಕ್ಷಣಾ ಪಡೆಗಳ ಕಾರ್ಯಾಚರಣೆ ನಡೆಯುತ್ತಿದೆ.

    ನಿರ್ದಿಷ್ಟ ಮಾಹಿತಿ ಮೇರೆಗೆ ಪೊಲೀಸ್, ಸೇನೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಜಂಟಿ ತಂಡವು ಪ್ರದೇಶವನ್ನು ಸುತ್ತುವರಿದಾಗ ಉಗ್ರರು ಮತ್ತು ರಕ್ಷಣಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆದಿದೆ. ಈ ವೇಳೆ ಮೂವರು ಹತರಾಗಿದ್ದಾರೆ. ಪ್ರಸ್ತುತ ಪುಲ್ವಾಮ ಪಟ್ಟಣದಲ್ಲಿ ಕರ್ಫ್ಯೂ ವಿಧಿಸಲಾಗಿದೆ.

    ನಿನ್ನೆ ರಾತ್ರಿ ಡ್ರೋನ್​ ಪತ್ತೆ
    ಮಂಗಳವಾರ ತಡರಾತ್ರಿ ಜಮ್ಮುವಿನ ಅರ್ನಿಯಾ ಸೆಕ್ಟರ್​ನ ಗಡಿಯಿಂದ 200 ಮೀಟರ್ ಒಳಗೆ​ ರೆಡ್​ಲೈಟ್​ ಬ್ಲಿಂಕ್​ ಆಗುತ್ತಿರುವುದನ್ನು ಯೋಧರು ಪತ್ತೆಹಚ್ಚಿದರು. ತಕ್ಷಣ ಎಚ್ಚೆತ್ತ ಯೋಧರು ಅದರತ್ತ ಗುಂಡಿನ ದಾಳಿ ಮಾಡಿದರು. ತಕ್ಷಣ ಡ್ರೋನ್​ ಕಣ್ಮರೆಯಾಯಿತು. ಸ್ಥಳವನ್ನು ಶೋಧಿಸಿದಾಗ ಏನೂ ಕೂಡ ಪತ್ತೆಯಾಗಲಿಲ್ಲ ಎಂದು ಬಿಎಸ್​ಎಫ್​ ಪತ್ರಿಕಾ ಹೇಳಿಕೆಯನ್ನು ನೀಡಿದೆ. (ಏಜೆನ್ಸೀಸ್​)

    ಜಮ್ಮುವಿನ ಅರ್ನಿಯಾ ಸೆಕ್ಟರ್​ನಲ್ಲಿ ಡ್ರೋನ್​ ಪತ್ತೆ: ಬಿಎಸ್​ಎಫ್​ ಯೋಧರ ಗುಂಡಿನ ದಾಳಿಗೆ ಡ್ರೋನ್​ ಕಣ್ಮರೆ

    ವಂಚನೆ ಯತ್ನ ಕೇಸ್‌: ದರ್ಶನ್ ಸ್ನೇಹಕೂಟದ ಆರೋಪ-ಪ್ರತ್ಯಾರೋಪಗಳಿಗೆ ಮೂಕಪ್ರೇಕ್ಷಕರಾದ ಪೊಲೀಸರು!

    ಯೂನಿವರ್ಸ್ ಬಾಸ್ ಪದ ಬಳಕೆಗೆ ಐಸಿಸಿ ನಕಾರ: ವಿಂಡೀಸ್​ ದಾಂಡಿಗ ಕ್ರಿಸ್​ ಗೇಲ್ ಶಾಕಿಂಗ್​ ಹೇಳಿಕೆ!​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts