More

    ಹಿಮಾಚಲ ಪ್ರದೇಶದಲ್ಲಿ ಟ್ರೆಕ್ ಮಾಡುತ್ತಿದ್ದವರಿಗೆ ಸಿಕ್ಕಿತು, ಪಾಕಿಸ್ತಾನಿ ಮೊಬೈಲ್ ಸಿಗ್ನಲ್ !

    ಧರಂಶಾಲಾ : ಹಿಮಾಚಲ ಪ್ರದೇಶದ ಧರಂಶಾಲಾ ಬಳಿಯ ಕರೇರಿಗೆ ಟ್ರೆಕ್ಕಿಂಗ್ ಮಾಡಲು ಹೋದ ಯುವಜನರಿಗೆ ಪಾಕಿಸ್ತಾನಿ ಮೊಬೈಲ್ ಸಿಗ್ನಲ್​​ಗಳು ಲಭ್ಯವಾಗಿರುವ ಪ್ರಸಂಗ ವರದಿಯಾಗಿದೆ. ಈ ಸ್ಥಳಕ್ಕೆ ಅತ್ಯಂತ ಹತ್ತಿರವಾದ ಗಡಿರೇಖೆಯು 150 ಕಿಲೋಮೀಟರ್ ದೂರದಲ್ಲಿದ್ದರೂ, ಈ ರೀತಿ ಪಾಕಿಸ್ತಾನದ ನೆಟ್​ವರ್ಕ್​ ಲಭ್ಯವಾಗಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ.

    ಇತ್ತೀಚೆಗೆ ಹಿಮಾಚಲದ ಕಾಂಗ್ರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಧರಂಶಾಲಾದಿಂದ 26 ಕಿಲೋಮೀಟರ್ ದೂರದಲ್ಲಿರುವ ಕರೇರಿ ಕೆರೆಗೆ ಕೆಲವು ಯುವಜನರು ಟ್ರೆಕ್ಕಿಂಗ್ ಪ್ರವಾಸ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಪಾಕಿಸ್ತಾನದಿಂದ ಜನಿತವಾದ ಸೆಲುಲರ್ ನೆಟ್​ವರ್ಕ್​ ಸಿಗ್ನಲ್​ಗಳು ಸಿಕ್ಕಿದ್ದು, ಭಾರತದ ಯಾವುದೇ ಮೊಬೈಲ್ ಆಪರೇಟರ್​ಗಳ ಸಿಗ್ನಲ್ ಸಿಕ್ಕಿಲ್ಲ. ಅಷ್ಟೇ ಅಲ್ಲ, ಅವರ ಮೊಬೈಲ್ ಫೋನ್​ಗಳಲ್ಲಿ ಇಂಡಿಯನ್ ಸ್ಟಾಂಡರ್ಡ್ ಟೈಮ್(ಐಎಸ್​ಟಿ)​ನಲ್ಲಿ ಬದಲಾವಣೆ ಉಂಟಾಗಿ, ಪಾಕಿಸ್ತಾನ್ ಸ್ಟಾಡಂರ್ಡ್​ ಟೈಮ್ ತೋರಿಸಿದೆ ಎನ್ನಲಾಗಿದೆ.

    ಇದನ್ನೂ ಓದಿ: ಅತಿಉದ್ದನೇ ಕೂದಲಿನ ಹಿರಿಮೆಯುಳ್ಳ ಯುವತಿಗೆ 12 ವರ್ಷಗಳಲ್ಲಿ ಮೊದಲನೇ ಹೇರ್​​ಕಟ್!

    ಈ ಬಗ್ಗೆ ಕಾಂಗ್ರಾ ಜಿಲ್ಲಾಡಳಿತವು ಟೆಲಿಕಮ್ಯುನಿಕೇಷನ್ಸ್ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳೀಯ ಪೊಲೀಸರು ಎಚ್ಚರವಾಗಿರಬೇಕೆಂದು ಹೇಳಲಾಗಿದೆ. ಕೌತುಕವೆಂದರೆ ಧರಂಶಾಲಾ ಮತ್ತು ನಿಕಟವಾದ ಭಾರತ-ಪಾಕಿಸ್ತಾನ ಗಡಿಗೆ 140 ಕಿ.ಮೀ. ಅಂತರವಿದೆ. ಮತ್ತು ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ, ಮೊಬೈಲ್ ಫೋನ್ ಸಿಗ್ನಲ್​ಗಳು ಗಡಿಯ ಆಚೆಗೆ 500 ಮೀಟರ್​ಗಳನ್ನು ಮೀರಿದ ನಂತರ ಸಿಗುವ ಹಾಗಿಲ್ಲ ಎನ್ನಲಾಗಿದೆ.

    ಗಡಿಭಾಗದಲ್ಲಿ ಅನ್ಯದೇಶೀಯ ನೆಟ್​ವರ್ಕ್​ಗಳು ಸಿಗುವುದು ಸಾಮಾನ್ಯ ವಿಷಯವಾಗಿದೆ. ಆದರೆ ಇಷ್ಟೊಂದು ದೂರದಲ್ಲಿರುವ ಪ್ರದೇಶದಲ್ಲಿ ಪಾಕಿಸ್ತಾನಿ ನೆಟ್​ವರ್ಕ್​ ಸಿಕ್ಕಿರುವುದು ಸಮಾಜ ವಿರೋಧಿ ಚಟುವಟಿಕೆಗಳಿಗೆ ದುರ್ಬಳಕೆಯಾಗಬಹುದೆಂಬ ಕಳವಳ ಉಂಟುಮಾಡಿದೆ. ಟಿಬೆಟ್​​ನ ಆಧ್ಯಾತ್ಮ ಗುರು ದಲೈ ಲಾಮಾ ಅವರು ಕೂಡ ಧರಂಶಾಲಾದಲ್ಲೇ ವಾಸಿಸುವುದರಿಂದ ಈ ಪ್ರದೇಶ ಹೆಚ್ಚು ಕಾವಲು ಹೊಂದಿದ ಪ್ರದೇಶವಾಗಿದೆ. (ಏಜೆನ್ಸೀಸ್)

    ಕರೊನಾ ವಿರುದ್ಧ ದೃಢ ಸಂಕಲ್ಪ : ಚುನಾವಣೆ ಎದುರಿದ್ದರೂ ಈ ಹಳ್ಳಿ ಪೂರ್ಣ ಬಂದ್ !

    ‘ಮನೆಯಲ್ಲೇ ಇದ್ದರೂ ಕರೊನಾ ಸೋಂಕು ಹೇಗೆ ತಗುಲಿತು ?’ – ನಟ ರಾಹುಲ್ ರಾಯ್ ಪ್ರಶ್ನೆ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts