More

    ಇನ್ನು ಇಸ್ಲಾಂ ಪ್ರಕಾರವೇ ಬದುಕುವೆ ಎಂದು 18ನೇ ವಯಸ್ಸಿನಲ್ಲೇ ಪಾಕ್​ ಮಹಿಳಾ ಕ್ರಿಕೆಟರ್​ ವಿದಾಯ!

    ಲಾಹೋರ್​: ಪಾಕಿಸ್ತಾನ ಮಹಿಳಾ ಕ್ರಿಕೆಟ್​ ತಂಡದ ಉದಯೋನ್ಮುಖ ಆಟಗಾರ್ತಿ ಆಯೇಷಾ ನಸೀಮ್​ 18ನೇ ವಯಸ್ಸಿನಲ್ಲೇ ದಿಢೀರ್​ ಆಗಿ ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಇನ್ನು ಇಸ್ಲಾಂ ಧರ್ಮದ ಅನ್ವಯವೇ ಬದುಕುವೆ ಎಂಬ ನಿಲುವಿನೊಂದಿಗೆ ಆಯೇಷಾ ನಸೀಮ್​ ಈ ನಿರ್ಧಾರ ಕೈಗೊಂಡಿದ್ದಾರೆ.

    “ನಾನು ಕ್ರಿಕೆಟ್​ನಿಂದ ಹೊರನಡೆಯುತ್ತಿರುವೆ. ಇನ್ನು ಇಸ್ಲಾಂ ಪ್ರಕಾರವೇ ಬದುಕಲು ಬಯಸಿರುವೆ’ ಎಂದು ನಿವೃತ್ತಿ ನಿರ್ಧಾರದ ಬಗ್ಗೆ ಆಯೇಷಾ, ಪಾಕಿಸ್ತಾನ ಕ್ರಿಕೆಟ್​ ಮಂಡಳಿಗೂ ಮಾಹಿತಿ ನೀಡಿದ್ದಾರೆ. ಪಾಕ್​ ಮಹಿಳಾ ಕ್ರಿಕೆಟ್​ನಲ್ಲಿ ಬಿರುಸಿನ ಬ್ಯಾಟರ್​ ಆಗಿ ಗಮನಸೆಳೆದಿದ್ದ ಆಯೇಷಾ, ವೃತ್ತೀಜಿವನದಲ್ಲಿ ಉತ್ತುಂಗಕ್ಕೆ ಏರಬಹುದಾದ ಹಂತದಲ್ಲೇ ನಿವೃತ್ತಿ ಹೇಳಿರುವುದು ಪಾಕ್​ ಕ್ರಿಕೆಟ್​ ವಲಯಕ್ಕೆ ಆಘಾತ ತಂದಿದೆ.

    2020ರಲ್ಲಿ ಪಾಕಿಸ್ತಾನ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಆಯೇಷಾ, ಇದುವರೆಗೆ 4 ಏಕದಿನ ಮತ್ತು 30 ಟಿ20 ಪಂದ್ಯಗಳನ್ನು ಆಡಿದ್ದು ಕ್ರಮವಾಗಿ 33 ಮತ್ತು 269 ರನ್​ ಬಾರಿಸಿದ್ದಾರೆ. ಸರಾಗವಾಗಿ ಸಿಕ್ಸರ್​ ಬಾರಿಸುವ ಸಾಮರ್ಥ್ಯದಿಂದಾಗಿ ಪಾಕ್​ ಮಹಿಳಾ ಕ್ರಿಕೆಟ್​ನಲ್ಲಿ ಹೊಸ ತಾರೆಯಾಗಿ ಮಿಂಚುವ ಹಂತದಲ್ಲೇ ಆಯೇಷಾ ಗುಡ್​ಬೈ ಹೇಳಿದ್ದಾರೆ.

    ಮಹಿಳಾ ಕ್ರಿಕೆಟರ್​ ಸ್ಮೃತಿ ಮಂದನಾ ಬರ್ತ್​ಡೇಗೆ ಬಾಂಗ್ಲಾದೇಶದಲ್ಲಿ ಸಪ್ರ್ರೈಸ್​ ನೀಡಿದ ಬಾಯ್​ಫ್ರೆಂಡ್​!

    ವಿಶ್ವಕಪ್​ನಲ್ಲಿ ಭಾರತದ ಮುಸ್ಲಿಂ ನಮ್ಮನ್ನು ಬೆಂಬಲಿಸುತ್ತಾರೆ; ಪಾಕ್​ ಮಾಜಿ ವೇಗಿ ವಿವಾದಾತ್ಮಕ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts