More

    ಫೆಬ್ರವರಿ ತನಕವೂ ಬೂದುಪಟ್ಟಿಯಲ್ಲೇ ಉಳಿಯಲಿದೆ ಪಾಕ್

    ನವದೆಹಲಿ: ಮೋಸ್ಟ್ ವಾಂಟೆಡ್ ಉಗ್ರರಾದ ಮೌಲಾನಾ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿ ಜಾಗತಿಕ ಉಗ್ರ ನಿಗ್ರಹ ಕಣ್ಗಾವಲು ಸಂಸ್ಥೆಯಾದ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್​ಎಟಿಎಫ್) ನೀಡಿದ್ದ 6 ಪ್ರಮುಖ ಕ್ರಿಯಾ ಯೋಜನೆಗಳನ್ನು ಜಾರಿಗೆ ತರುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಇದೇ ಕಾರಣಕ್ಕೆ ಅದನ್ನು 2021ರ ಫೆಬ್ರವರಿ ತನಕವೂ ‘ಬೂದು’ ಪಟ್ಟಿಯಲ್ಲಿ ಮುಂದುವರಿಸಲು ಎಫ್​ಎಟಿಎಫ್​ ತೀರ್ಮಾನಿಸಿದೆ.

    ಎಫ್​ಎಟಿಎಫ್ ಸಭೆ ಅಕ್ಟೋಬರ್​ 21ರಿಂದ 23ರವರೆಗೆ ನಡೆದಿದ್ದು, ಪಾಕ್​ನ ಭಯೋತ್ಪಾದನಾ ವಿರೋಧಿ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ನಡೆಸಿದ್ದ ಸಭೆಯಲ್ಲಿ ಎಫ್​ಎಟಿಎಫ್, ಪಾಕಿಸ್ತಾನಕ್ಕೆ ಒಟ್ಟು 27 ಕ್ರಿಯಾ ಯೋಜನೆಗಳನ್ನು ಪೂರೈಸುವಂತೆ ಸೂಚಿಸಿತ್ತು. ಆದರೆ ಪಾಕಿಸ್ತಾನ ಅವುಗಳಲ್ಲಿ ಈವರೆಗೆ 21 ಕ್ರಿಯಾ ಯೋಜನೆಗಳನ್ನು ಪೂರೈಸಿದ್ದು, ಪ್ರಮುಖ 6 ಕಾರ್ಯಗಳಲ್ಲಿ ವಿಫಲವಾಗಿದೆ ಎಂಬುದು ಪರಿಗಣಿಸಲ್ಪಟ್ಟಿದೆ.

    ಇದನ್ನೂ ಓದಿ:  ರಾಜ್ಯ ರಾಜಧಾನಿಯಲ್ಲಿ ಟ್ರಾಫಿಕ್ ಸಿಗ್ನಲ್ ಸಿಸ್ಟಮ್ ಕೂಡ ಕಳುವಾಗಿದೆಯಂತೆ ನೋಡಿ!

    ಅಲ್ಲದೆ, ಪಾಕ್ ಈ ಮೊದಲು ಸಲ್ಲಿಸಿದ್ದ 7,600 ಉಗ್ರರ ಪಟ್ಟಿಯಿಂದ ಸುಮಾರು 4 ಸಾವಿರ ಉಗ್ರರ ಹೆಸರುಗಳನ್ನು ತೆಗೆದುಹಾಕಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾವನ್ನು ಬೂದು ಪಟ್ಟಿಯಲ್ಲೇ ಉಳಿಸಬೇಕು ಎಂದು ಎಫ್​ಎಟಿಎಫ್ ಸದಸ್ಯರು ಮತ ಚಲಾಯಿಸಿದ್ದಾರೆ. (ಏಜೆನ್ಸೀಸ್)

    ಅಂತರ್ಜಲ ಪೋಲು ತಡೆಯಲು ಸರಿಯಾದ ಕ್ರಮವೇಕೆ ತಗೊಂಡಿಲ್ಲ: ಕೇಂದ್ರವನ್ನು ತರಾಟೆಗೆ ತಗೊಂಡ ಎನ್​ಜಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts