More

    ಇಮ್ರಾನ್ ಖಾನ್​ ಸರ್ಕಾರದ ಮತ್ತೊಂದು ಕೆಟ್ಟ ಕೆಲಸ; ನಿಷೇಧಿತರ ಪಟ್ಟಿಯಿಂದ ಸದ್ದಿಲ್ಲದೆ ನಾಪತ್ತೆಯಾಗುತ್ತಿವೆ ಉಗ್ರರ ಹೆಸರುಗಳು

    ನ್ಯೂಯಾರ್ಕ್​: ಲಷ್ಕರ್​ ಎ ತೊಯ್ಬಾ ಕಾರ್ಯಾಚರಣೆಯ ಕಮಾಂಡರ್​ , 2008ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಝಾಕಿ ಉರ್​ ರೆಹಮಾನ್​ ಸೇರಿ ಒಟ್ಟು 4000 ಕ್ಕೂ ಹೆಚ್ಚು ಉಗ್ರರ ಹೆಸರನ್ನು ಪಾಕಿಸ್ತಾನ ತನ್ನ ಭಯೋತ್ಪಾದನಾ ವೀಕ್ಷಣ ಪಟ್ಟಿಯಿಂದ ಸದ್ದಿಲ್ಲದೆ ತೆಗೆದು ಹಾಕಿದೆ. ಇದಕ್ಕೆ ಯಾವುದೇ ಸಾರ್ವಜನಿಕ ವಿವರಣೆಯನ್ನೂ ಆ ದೇಶ ನೀಡಿಲ್ಲ ಎಂದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ವೊಂದು ವರದಿ ನೀಡಿದೆ.

    ಭಾರತ ಸೇರಿ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪಾಕ್​ ಉಗ್ರರು ದಾಳಿ ನಡೆಸುತ್ತಿದ್ದಾರೆ. ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತ, ಅವರಿಗಾಗಿ ಅಕ್ರಮ ಹಣ ವರ್ಗಾವಣೆ ಮಾಡುತ್ತಿರುವ ಆರೋಪದಡಿ ಪಾಕಿಸ್ತಾನವನ್ನು ಭಯೋತ್ಪಾದನಾ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್‍ಎಟಿಎಫ್) ಬೂದುಪಟ್ಟಿಯಲ್ಲಿ ಇಟ್ಟಿದೆ.

    ಕಳೆದ ಒಂದೂವರೆ ವರ್ಷದಲ್ಲಿ ಪಾಕಿಸ್ತಾನ ಯಾವುದೇ ವಿವರಣೆ, ಮಾಹಿತಿಯನ್ನು ನೀಡದೆ 3800 ನಿಷೇಧಿತರ ಹೆಸರುಗಳನ್ನು ಭಯೋತ್ಪಾದನಾ ಕಣ್ಗಾವಲು ಪಟ್ಟಿಯಿಂದ ಅಳಿಸಿಹಾಕಿದೆ. ಹಾಗೇ ಈ ಸಲದ ಮಾರ್ಚ್​9ರಿಂದ ಇಲ್ಲಿಯವರೆಗೆ ಝಾಕಿ ಉರ್​ ರೆಹಮಾನ್​ ಲಖವಿ ಸೇರಿ 1800 ಉಗ್ರರ ಹೆಸರನ್ನು ತೆಗೆದುಹಾಕಿದೆ ಎಂದು ಯುಎಸ್​ ಮೂಲದ ಸ್ಟಾರ್ಟ್ ಅಪ್​ ಕ್ಯಾಸ್ಟೆಲ್ಲಮ್ ವರದಿ ಬಹಿರಂಗ ಪಡಿಸಿದೆ.

    ಅದರಲ್ಲೂ 2020ರ ಮಾ.9ರಿಂದ 27ರವರೆಗೆ ಒಟ್ಟು ಇಮ್ರಾನ್​ ಖಾನ್​ ಸರ್ಕಾರ 1069 ಉಗ್ರರ ಹೆಸರನ್ನು ನಿಷೇಧಿತ ಪಟ್ಟಿಯಿಂದ ತೆಗೆದುಹಾಕಿದ್ದು, ಮಾ.27ರಿಂದ ಇಲ್ಲಿಯವರೆಗ 800 ಮಂದಿ ಹೆಸರು ರಿಮೂವ್​ ಆಗಿದೆ ಎಂದು ಕ್ಯಾಸ್ಟೆಲ್ಲಮ್​ ಡಾಟಾ ತೋರಿಸಿದೆ.

    2018ರಲ್ಲಿ ಪಾಕಿಸ್ತಾನದ ಭಯೋತ್ಪಾದನಾ ಕಾವಲು ಪಟ್ಟಿಯಲ್ಲಿ ಸುಮಾರು 7600 ಉಗ್ರರ ಹೆಸರು ಇತ್ತು. ಆದರೆ ಅದೀಗ ಸದ್ದಿಲ್ಲದೆ ಕಡಿಮೆಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts