More

    ಅಫ್ಘಾನಿಸ್ತಾನ ಆಕ್ರಮಿಸಿಕೊಂಡ ಬೆನ್ನಲ್ಲೇ ತಾಲಿಬಾನ್​ ಸದಸ್ಯನನ್ನು ಜೈಲಿನಿಂದ ಬಿಡುಗಡೆ ಮಾಡಿದ ಪಾಕ್​..!

    ಕಾಬುಲ್​: ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ರಕ್ತ ಚರಿತ್ರೆ ಆರಂಭವಾಗಿದೆ. ಅಮೆರಿಕ ಸೇನಾ ಹಿಂತೆಗೆತ ಬಳಿಕ ಆಫ್ಘಾನ್​​ ಮೇಲಿನ ಆಕ್ರಮಣವನ್ನು ಆರಂಭಿಸಿದ ತಾಲಿಬಾನ್​ ಬಂಡುಕೋರರು ರಕ್ತದೋಕುಳಿ ಬರೆದು ಇಡೀ ಆಫ್ಘಾನ್​ ರಾಷ್ಟ್ರವನ್ನೇ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

    ಇಡೀ ಆಫ್ಘಾನ್​ ಅನ್ನು ತನ್ನ ನಿಯಂತ್ರಣಕ್ಕೆ ತೆಗದುಕೊಂಡಿರುವ ತಾಲಿಬಾನ್​ ಇದೀಗ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಇತ್ತ ತಾಲಿಬಾನ್​ ಅಫ್ಘಾನಿಸ್ತಾನದಲ್ಲಿ ರಣಕೇಕೆ ಹಾಕುತ್ತಿದ್ದರೆ, ಅತ್ತ ಪಾಕಿಸ್ತಾನ ಸರ್ಕಾರ ತಾಲಿಬಾನ್​ ಸದಸ್ಯ ಮುಲ್ಲಾ ಮೊಹಮ್ಮದ್​ ರಸೌಲ್​ನನ್ನು ಬಿಡುಗಡೆ ಮಾಡುವ ಮೂಲಕ ಪರೋಕ್ಷವಾಗಿ ತಾನು ತಾಲಿಬಾನ್​ ಕಡೆ ಎಂಬುದನ್ನು ಸಾಬೀತು ಮಾಡಿದೆ.

    ರಸೌಲ್​ ಬರೋಬ್ಬರಿ ಐದು ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದ. ತಾಲಿಬಾನ್​ನಿಂದ ಬೇರೆಯಾಗಿ ತನ್ನದೇ ಬಣವನ್ನು ರಚಿಸುತ್ತಿದ್ದಾಗ ಪಾಕಿಸ್ತಾನ ಆತನನ್ನು ಬಂಧಿಸಿತ್ತು. ಆದರೆ, ಇದೀಗ ಆತನನ್ನು ಬಿಡುಗಡೆ ಮಾಡಿದ್ದು, ರಸೌಲ್​ ಮತ್ತೆ ತಾಲಿಬಾನ್​ ಸೇರಲಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ.

    ತಾಲಿಬಾನ್​ಗೆ ಚೀನಾ ಮತ್ತು ಪಾಕ್​ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸುತ್ತಿವೆ ಎಂಬ ಚರ್ಚೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆನ್ನಲ್ಲೇ ಪಾಕ್​ ನಡೆ ಅದಕ್ಕೆ ಪುಷ್ಠಿ ನೀಡುವಂತಿದೆ. (ಏಜೆನ್ಸೀಸ್​)

    ಅವರು ಕೊಂದರೆ ದೇವಿಯ ಮಡಿಲಲ್ಲಿ ಖುಷಿಯಿಂದ ಪ್ರಾಣ ಬಿಡುವೆ, ಅನ್ನ ಕೊಟ್ಟ ಅಫ್ಘಾನ್‌ ಬಿಟ್ಟು ಬರಲ್ಲ ಎಂದ ಅರ್ಚಕ

    ಭಾರತಕ್ಕೆ ಎಚ್ಚರಿಕೆ ಬೇಕು, ಗಾಬರಿ ಬೇಡ; ಅಫ್ಘನ್​ ಆಚೆ ಈಚೆ…

    ದೋಹಾ ಕತಾರ್​ನಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ನೂರಾರು ಮಂದಿಯಿಂದ ರಕ್ತದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts