More

    ಮಹಿಳಾ ಆತ್ಮಾಹುತಿ ಬಾಂಬರ್​ ಬಂಧನ ವಿರೋಧಿಸಿ ಪಾಕ್​ನಲ್ಲಿ ಪ್ರತಿಭಟನೆ!

    ಇಸ್ಲಮಾಬಾದ್​: ಮಹಿಳಾ ಆತ್ಮಾಹುತಿ ಬಾಂಬರ್​ ಬಂಧನವನ್ನು ವಿರೋಧಿಸಿ, ಆಕೆಯ ಬಿಡುಗಡೆಗೆ ಆಗ್ರಹಿಸಿ ಪಾಕಿಸ್ತಾನಿ ಸೆಕ್ಯುರಿಟಿ ಏಜೆನ್ಸಿ ವಿರುದ್ಧ ಪಾಕಿಸ್ತಾನದ ಜನರು ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು.

    ಮಹಿಳಾ ಆತ್ಮಾಹುತಿ ಬಾಂಬರ್​ನನ್ನು ಮಹಲ್​ ಬಲೋಚ್​ ಎಂದು ಗುರುತಿಸಲಾಗಿದೆ. ಆಕೆಯನ್ನು ಕ್ವೆಟ್ಟಾದಲ್ಲಿರುವ ಪಾಕ್​ನ ಭಯೋತ್ಪಾದನಾ ವಿರೋಧಿ ಇಲಾಖೆ ಕಳೆದ ಶುಕ್ರವಾರ ಬಂಧಿಸಿದೆ. ಇದನ್ನು ವಿರೋಧಿಸಿ ಪಾಕ್​ ಜನರು ಬಲೂಚಿಸ್ತಾನದಲ್ಲಿ ಪ್ರತಿಭಟನೆ ನಡೆಸಿದ್ದು, ಮಹಲ್​ ಮೇಲೆ ಸುಳ್ಳು ಕೇಸ್​ ದಾಖಲಿಸಲಾಗಿದೆ. ಇದೊಂದು ಕುತಂತ್ರ ಎಂದು ಆರೋಪಿಸಿದರು.

    ಇದನ್ನೂ ಓದಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆಪಟ್ಟಿ ಒಂದು ವಾರದಲ್ಲಿ ಪ್ರಕಟ

    ಬಲೂಚಿಸ್ತಾನ್​ ಲಿಬರೇಷನ್​ ಫ್ರಂಟ್​ ಸಂಘಟನೆಗೆ ಮಹಲ್​ ಬೆಂಬಲ ನೀಡುತ್ತಿದ್ದಾಳೆ ಎಂಬ ಆರೋಪದ ಮೇಲೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆಕೆಯ ಹ್ಯಾಂಡ್​ಬ್ಯಾಗ್​​ನಲ್ಲಿ ಸ್ಫೋಟಕ ವಸ್ತುಗಳುಳ್ಳ ಸೂಸೈಡ್​ ಜಾಕೆ ಪತ್ತೆಯಾಗಿದ್ದು, ಕ್ವೇಟಾದಲ್ಲಿರುವ ಮಿಲಿಟರಿ ಪ್ರದೇಶವನ್ನು ಸ್ಫೋಟಿಸಲು ಬಂದಿದ್ದಳು ಎಂದು ಹೇಳಲಾಗಿದೆ.

    ಇದೀಗ ಆಕೆಯನ್ನು ಬಂಧಿಸಲಾಗಿದ್ದು, ತನಿಖೆ ಆರಂಭಿಸಿರುವ ಅಧಿಕಾರಿಗಳು ಆಕೆಯ ಹಿಂದೆ ಯಾರಿದ್ದಾರೆ ಎಂಬ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಬಲೂಚಿಸ್ತಾನದ ಹಲವ ಪ್ರದೇಶಗಳ ಮೇಲೆ ದಾಳಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆರ್ಥಿಕ ಸಮಸ್ಯೆಯಿಂದ ನಲುಗುತ್ತಿರುವ ಪಾಕಿಸ್ತಾನದಲ್ಲಿ ಒಂದರ ಹಿಂದೆ ಒಂದರಂತೆ ಭಯೋತ್ಪಾದಕ ದಾಳಿ ನಡೆಯುತ್ತಿದ್ದು, ಪಾಕ್ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. (ಏಜೆನ್ಸೀಸ್​)

    ಸೆಲ್ಫಿ ಪ್ರಕರಣ: ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಪೃಥ್ವಿ ಶಾಗೆ ಶಾಕ್​ ಕೊಡಲು ಸಜ್ಜಾದ ಸಪ್ನಾ ಗಿಲ್​

    ಡಬ್ಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದ ಪ್ರತಿಪಕ್ಷಗಳಿಗೆ ಟಕ್ಕರ್ ನೀಡಿದ ಸಚಿವ ಮಾಧುಸ್ವಾಮಿ!

    4 ದಿನ ಜಿ-20 ಹಣಕಾಸು ಸಂಬಂಧಿತ ಸಭೆ ನಿಗದಿ: 72 ನಿಯೋಗ, 500ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ಭಾಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts