More

    ಸಾಮಾಜಿಕ ಜಾಲತಾಣದಲ್ಲಿ ಭಾರತ ವಿರುದ್ಧ ಅಪಪ್ರಾಚಾರ ಮಾಡಲು ಯುವಕರಿಗೆ ಬಲೆ ಬೀಸಿದ ಪಾಕ್​

    ನವದೆಹಲಿ: ಭಾರತದ ಎದುರು ಎಲ್ಲ ರೀತಿಯಲ್ಲೂ ಮುಖಭಂಗ ಅನುಭವಿಸಿರುವ ಹಾಗೂ ಅನುಭವಿಸುತ್ತಿರೋ ಪಾಕಿಸ್ತಾನ ಇದೀಗ ಮತ್ತೊಂದು ಕುತಂತ್ರ ರೂಪಿಸಲು ಸಜ್ಜಾಗಿದೆ.

    ಭಾರತ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಲು ಜನರಲ್​ ಆಸಿಫ್​ ಗಫೂರ್​ ನೇತೃತ್ವದ ಪಾಕಿಸ್ತಾನ ಇಂಟರ್​ ಸರ್ವಿಸ್​ ಪಬ್ಲಿಕ್​ ರಿಲೇಶನ್​(ಐಎಸ್​ಪಿಆರ್​) 1000ಕ್ಕೂ ಹೆಚ್ಚು ಯುವಕರ ನೇಮಕಾತಿ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಗುರುವಾರ ತಿಳಿದುಬಂದಿದೆ.

    ಐಎಸ್​ಪಿಆರ್, ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾಗಿದೆ. ಪ್ರತಿ ತಿಂಗಳು ಸ್ಪರ್ಧೆಯೊಂದನ್ನು ಏರ್ಪಡಿಸುವ ಐಎಸ್​ಪಿಆರ್​ ಅತಿ ಹೆಚ್ಚು ರೀಟ್ವೀಟ್​ ಪಡೆಯುವ ಯುವಕರ ಟ್ವೀಟ್​ಗೆ ಪ್ರಶಸ್ತಿ ನೀಡುತ್ತದೆ.​ ಪ್ರಶಸ್ತಿಯು ಉದ್ಯೋಗ ಮತ್ತು ಫೌಜಿ ಫೌಂಡೇಶನ್​ನಲ್ಲಿ ಉದ್ಯೋಗ ಒಪ್ಪಂದ ಒಳಗೊಂಡಿರುತ್ತದೆ.

    ಐಎಸ್​ಪಿಆರ್​ ಕಳಿಸುವ ಕೆಲವೊಂದು ಪ್ರಶ್ನಗಳಿಗೆ ಭಾರತದ ವಿರುದ್ಧ ಅಪಪ್ರಚಾರ ಸ್ಟೋರಿಯನ್ನು ಪೋಸ್ಟ್​ ಮಾಡುವಂತಹ ಪ್ರಭಾವಿ ಸಾಮಾಜಿಕ ಜಾಲತಾಣ ಬಳಕೆದಾರರು ಈ ಸ್ಪರ್ಧೆಯಲ್ಲಿ ಜಯ ಗಳಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಸ್ಪರ್ಧೆಯಲ್ಲಿ 100,000 ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಾರೆ ಎಂದು ಹೇಳಲಾಗಿದೆ.

    ಯುವಕರಿಗೆ ಪ್ರಭಾವಿ ಭಾರತೀಯರ ಸಾಮಾಜಿಕ ಜಾಲತಾಣ ಖಾತೆಗಳ ಮಾಹಿತಿಯನ್ನು ಕೊಡಲಾಗುತ್ತದೆ. ಬಳಿಕ ಭಾರತದ ನಾಯಕರು, ಸೈನಿಕರು ಮತ್ತು ಅಧಿಕಾರಿಗಳ ಬಗ್ಗೆ ವಿಭಿನ್ನ ಸ್ಟೋರಿ ಬರೆಯುವಂತೆ ಹೇಳಲಾಗುತ್ತದೆ. ಇದರಲ್ಲಿ ಯಾರ ಪೋಸ್ಟ್​ಗಳು ಹೆಚ್ಚು ರೀಟ್ವೀಟ್​ ಪಡೆದುಕೊಳ್ಳುತ್ತದೆ ಅವರನ್ನು ವಿಜೇತರು ಎಂದು ಘೋಷಿಸಲಾಗುತ್ತದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts