More

    ಕೃಷಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಪಾಕಿಸ್ತಾನದ ಧ್ವಜ! ಸಾಗರೋತ್ತರ ಕಾಂಗ್ರೆಸ್ ಕೆಲಸವೆಂದು ದೂರಿದ ಬಿಜೆಪಿ

    ಬರ್ಲಿನ್​: ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ರೈತ ಹೋರಾಟದಲ್ಲಿ ಖಲಿಸ್ತಾನಿ ಧ್ವಜ ಹಾರಾಡಿದೆ ಎನ್ನುವ ವಿವಾದದ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದ ಆರಂಭವಾಗಿದೆ. ದೂರದ ಜರ್ಮನಿಯಲ್ಲಿ ಭಾರತದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸಲಾಗಿದ್ದು ಅದರಲ್ಲಿ ಪಾಕಿಸ್ತಾನಿ ಧ್ವಜ ಹಾರಿಸಲಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ಆರೋಪಿಸಿದ್ದಾರೆ.

    ಬಿಜೆಪಿ ಮುಖಂಡ ಸುರೇಶ್ ನಖುವಾ ಈ ಆರೋಪವನ್ನು ಮಾಡಿದ್ದಾರೆ. ಜರ್ಮನಿಯಲ್ಲೊ ಒಂದಿಷ್ಟು ಜನರು ಪಾಕಿಸ್ತಾನಿ ಧ್ವಜವನ್ನು ಹಿಡಿದಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಮೋದಿ ಫೋಟೋಗೆ ಚಪ್ಪಲಿ ತೋರಿಸುತ್ತಿರುವುದು ಕಂಡುಬಂದಿದೆ. ಈ ಫೋಟೋದಲ್ಲಿ ಕೆಂಪು ಬಣ್ಣದ ಬಟ್ಟೆ ತೊಟ್ಟಿರುವವರು ಭಾರತೀಯ ಸಾಗರೋತ್ತರ ಕಾಂಗ್ರೆಸ್​ನ ಪದಾಧಿಕಾರಿ ರಾಜ್ ಶರ್ಮಾ. ಹಾಗೆಯೇ ನೀಲಿ ಬಣ್ಣದ ಬಟ್ಟೆ ತೊಟ್ಟವರ ಹೆಸರು ಚರಣ್ ಕುಮಾರ್. ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಾಕಿಸ್ತಾನದೊಂದಿಗೆ ಕೈಗವಸು ಹೊಂದಿದೆ. ಜರ್ಮನಿಯಲ್ಲಿ ನಡೆದ ರೈತ ಪ್ರತಿಭಟನೆಯಲ್ಲಿ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಪದಾಧಿಕಾರಿಗಳು ಪಾಕಿ ಧ್ವಜವನ್ನು ಬಿಚ್ಚಿದ್ದಾರೆ ಎಂದು ಅವರು ದೂರಿದ್ದಾರೆ.

    ಸುರೇಶ್ ಅವರ ಈ ಟ್ವೀಟನ್ನು ಅನೇಕ ನಾಯಕರು ಹಂಚಿಕೊಂಡಿದ್ದಾರೆ. ಬಿಜೆಪಿ ನಾಯಕರಾದ ವಿಜಯ್ ಚೌಥೈವಾಲೆ ಸೇರಿ ಅನೇಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾಗಿ ಧ್ವನಿ ಎತ್ತಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬಿರಿಯಾನಿ ಪ್ರಿಯರೇ ಇಲ್ಲಿ ನೋಡಿ.. ಈ ಬಿರಿಯಾನಿ ಬೆಲೆ ಎಷ್ಟಿರಬಹುದು ನೀವೇ ಹೇಳಿ..

    ಊಟ ಆರ್ಡರ್​ ಮಾಡಿದವನಿಗೆ ಮೂತ್ರ ಗಿಫ್ಟ್​ ಕೊಟ್ಟ ಡೆಲಿವರಿ ಬಾಯ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts