More

    ಆಸೀಸ್​ ವಿರುದ್ಧದ ಟೆಸ್ಟ್​ ಪಂದ್ಯ ಸೋಲಿನ ಬೆನ್ನಲ್ಲೇ ಪಾಕ್​ಗೆ ಡಬಲ್​ ಶಾಕ್​ ನೀಡಿದ ಐಸಿಸಿ

    ಪರ್ತ್​: ಇಲ್ಲಿನ ಪರ್ತ್​ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಕಾಂಗರೂ ಪಡೆ ಗೆದ್ದು ಬೀಗಿದ್ದು, ಪಾಕ್​ಗೆ 360 ರನ್​ಗಳ ಸೋಲುಣಿಸಿದೆ. ಮೊದಲ ಟೆಸ್ಟ್​ ಪಂದ್ಯದಲ್ಲಿ ಸೋಲಿನ ಬೆನ್ನಲ್ಲೇ ಐಸಿಸಿ ಪಾಕಿಸ್ತಾನಕ್ಕೆ ಡಬಲ್​ ಶಾಕ್​ ನೀಡಿದೆ.

    2025ರಲ್ಲಿ ನಡೆಯುವ ವಿಶ್ವ ಚಾಂಪಿಯನ್​ ಟೆಸ್ಟ್​ ಚಾಂಪಿಯನ್​ಶಿಪ್​ನ ದೃಷ್ಠಿಕೋನದಿಂದ ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾ ವಿರುದ್ಧದ ಗೆಲುವು ಅತ್ಯಗತ್ಯವಾಗಿತ್ತು. ಆದರೆ, ಶಾನ್​ ಮಸೂದ್​ ಪಡೆ ಕಾಂಗರೂಗಳ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಸೋಲಿನ ಹೊಡೆತದಿಂದ ಕಂಗೆಟ್ಟಿರುವ ಪಾಕ್​ಗೆ ಐಸಿಸಿ ದಂಡ ವಿಧಿಸಿರುವುದಲ್ಲದೇ ಎರಡು ಅಂಕವನ್ನು ಕಡಿತಗೊಳಿಸಿದೆ.

    ನಿದಾನಗತಿಯ ಬೌಲಿಂಗ್ ಮಾಡಿದ ಪಾಕಿಸ್ತಾನದ ಆಟಗಾರರಿಗೆ ಐಸಿಸಿ ಪಂದ್ಯ ಶುಲ್ಕದ ಶೇಕಡಾ 10ರಷ್ಟು ದಂಡ ವಿಧಿಸಿದೆ. ಇದಲ್ಲದೆ, ಐಸಿಸಿ WTC 2025ರ ಪಾಯಿಂಟ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ 2 ಅಂಕಗಳನ್ನು ಕಡಿತಗೊಳಿಸಿದೆ. ಆಸ್ಟ್ರೇಲಿಯಾ ವಿರುದ್ಧ 360 ರನ್‌ಗಳ ಸೋಲಿನ ನಂತರ, ಪಾಕಿಸ್ತಾನ WTC ಪಾಯಿಂಟ್ಸ್​ ಟೇಬಲ್​ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಇದರ ಲಾಭ ಪಡೆದ ಭಾರತ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ.

    ಇದನ್ನೂ ಓದಿ: ಅಬಕಾರಿ ನೀತಿ ಹಗರಣ; ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ED ಸಮನ್ಸ್​

    ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22ರ ಪ್ರಕಾರ ತಂಡವು ಒಂದು ಓವರ್‌ಗೆ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡರೆ, ಆ ತಂಡದ ಎಲ್ಲಾ ಆಟಗಾರರಿಗೆ ಪ್ರತಿ ಓವರ್‌ಗೆ ಶೇಕಡಾ 5 ರಂತೆ ದಂಡ ವಿಧಿಸಲಾಗುತ್ತದೆ. ಪಾಕಿಸ್ತಾನ ಎರಡು ಓವರ್‌ಗಳನ್ನು ವಿಳಂಬಗೊಳಿಸಿದ್ದು, ಈ ಕಾರಣದಿಂದಾಗಿ ಆಟಗಾರರಿಗೆ ಶೇಕಡಾ 10 ರಷ್ಟು ದಂಡವನ್ನು ವಿಧಿಸಲಾಗಿದೆ.

    ಇದಲ್ಲದೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆರ್ಟಿಕಲ್ 16.11.2 ರ ಪ್ರಕಾರ, ಪ್ರತಿ ತಡವಾದ ಓವರ್‌ಗೆ ಪಾಯಿಂಟ್‌ಗಳ ಪಟ್ಟಿಯಿಂದ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. ಪಾಕಿಸ್ತಾನ ಎರಡು ಓವರ್‌ಗಳನ್ನು ತಡವಾಗಿ ಬೌಲ್ ಮಾಡಿದ್ದರಿಂದ ಅವರಿಗೆ 2 ಅಂಕಗಳನ್ನು ದಂಡವಾಗಿ ವಿಧಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts