More

    ಪಾಕಿಸ್ತಾನದಲ್ಲಿ ಬಿಗೊ ಬ್ಯಾನ್​; ಟಿಕ್​ಟಾಕ್​ಗೆ ಕೊನೇ ಎಚ್ಚರಿಕೆ ರವಾನೆ

    ಇಸ್ಲಮಾಬಾದ್​: ಚೀನಾದ 59 ಆ್ಯಪ್​ಗಳನ್ನು ಭಾರತದಲ್ಲಿ ನಿಷೇಧ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಪಬ್​ಜಿ ಆನ್​ಲೈನ್​ ಆಟವನ್ನು ತಾತ್ಕಾಲಿಕವಾಗಿ ಬ್ಯಾನ್​ ಮಾಡಿತ್ತು.

    ಇದೀಗ ಮತ್ತೊಂದು ಪ್ರಮುಖ ನಿರ್ಧಾರ ಕೈಗೊಂಡಿರುವ ಪಾಕ್​, ಸಿಂಗಪೂರ್​ ಮೂಲದ ಬಿಗೊ ಲೈವ್​ ಆ್ಯಪ್​​ನ್ನು ನಿಷೇಧಿಸಿದೆ. ಅಷ್ಟೇ ಅಲ್ಲ ವಿಡಿಯೋ ಅಪ್ಲೋಡ್​ ಆ್ಯಪ್​ ಆಗಿರುವ ಟಿಕ್​ಟಾಕ್​ಗೆ ಖಡಕ್​ ಎಚ್ಚರಿಕೆಯನ್ನು ನೀಡಿದೆ.  ಬಿಗೊ ಸಿಂಗಪೂರ ಮೂಲದ ಆ್ಯಪ್​ ಆಗಿದ್ದರೂ ನಂತರದಲ್ಲಿ ಇದರ ತಂತ್ರ ವನ್ನು 2019ರಲ್ಲಿ ಚೀನಾದ JOYY ಕಂಪನಿ ಸ್ವಾಧೀನಪಡಿಸಿಕೊಂಡಿದೆ.

    ಪಬ್​​ಜಿಯಿಂದ ಯುವಕರು, ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ ಎಂದು ಆರೋಪಿಸಿದ್ದ ಪಾಕಿಸ್ತಾನ ದೂರ ಸಂಪರ್ಕ ಪ್ರಾಧಿಕಾರ (PETA) ಆ ಆಟವನ್ನು ತಾತ್ಕಾಲಿಕವಾಗಿ ನಿಷೇಧಿಸುವುದಾಗಿ ಹೇಳಿತ್ತು. ಇದನ್ನೂ ಓದಿ: ಸೋಂಕಿತರ ಮನೆ ಬಾಗಿಲಿಗೆ ತಗಡಿನ ಶೀಟ್​ ಹಾಕಿ ಸೀಲ್​ ಮಾಡಿದ ಬಿಬಿಎಂಪಿ: ಮೂರೇ ಗಂಟೆಯಲ್ಲಿ ತೆರವಾಗಿದ್ದೇಕೆ?

    ಇದೀಗ ಬಿಗೊ ಮತ್ತು ಟಿಕ್​ಟಾಕ್​ಗಳ ಬಗ್ಗೆಯೂ ಅಪಾರ ದೂರು ಬರುತ್ತಿದೆ. ಟಿಕ್​ಟಾಕ್​ಗೆ ಕೊನೇ ಎಚ್ಚರಿಕೆ ನೀಡಲಾಗಿದೆ. ಇನ್ನು ಮುಂದೆ ಅದರಲ್ಲಿ ಅಶ್ಲೀಲ, ಪ್ರಚೋದನಾಕಾರಿ ವಿಡಿಯೋಗಳನ್ನು ನೋಡಿದರೆ, ಅದನ್ನೂ ಕೂಡ ದೇಶದಲ್ಲಿ ಬ್ಯಾನ್​ ಮಾಡುತ್ತೇವೆ ಎಂದು PETA ತಿಳಿಸಿದೆ.

    ಬಿಗೊ ಹಾಗೂ ಟಿಕ್​ಟಾಕ್​ಗಳಲ್ಲಿ ಅಶ್ಲೀಲ, ಅನೈತಿಕವಾದ ವಿಡಿಯೋಗಳು ಬಿತ್ತರವಾಗುತ್ತವೆ. ಇದು ಕೂಡ ಯುವಜನತೆ, ಮಕ್ಕಳ ಮನಸು ಮತ್ತು ದೇಹದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸಮಾಜದ ವಿವಿಧ ವರ್ಗಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ದೂರು ನೀಡಿದ್ದಾರೆ ಎಂದು ಪಾಕ್​ ದೂರ ಸಂಪರ್ಕ ಪ್ರಾಧಿಕಾರ ತಿಳಿಸಿದೆ. (ಏಜೆನ್ಸೀಸ್​)

    VIDEO: ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದ ಲಾಠಿ ಸ್ಕಿಲ್ ಅಜ್ಜಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts