More

    ಪಾಕಿಸ್ತಾನ-ಇಂಗ್ಲೆಂಡ್​ ನಡುವಿನ ಟೆಸ್ಟ್​ ಪಂದ್ಯಕ್ಕೆ ಮಳೆ ಅಡ್ಡಿ

    ಮ್ಯಾಂಚೆಸ್ಟರ್​: ಪಾಕಿಸ್ತಾನ ಹಾಗೂ ಏಕದಿನ ವಿಶ್ವಕಪ್​ ಚಾಂಪಿಯನ್​ ಇಂಗ್ಲೆಂಡ್​ ನಡುವಿನ ಮೊದಲ ಟೆಸ್ಟ್​ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದೆ. ಓಲ್ಡ್​ ಟ್ರಾೋರ್ಡ್​ ಮೈದಾನದಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್​ ಜಯಿಸಿ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ತಂಡ, 2 ವಿಕೆಟ್​ಗೆ 121 ರನ್​ ಗಳಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು.

    ಪಾಕಿಸ್ತಾನ-ಇಂಗ್ಲೆಂಡ್​ ನಡುವಿನ ಟೆಸ್ಟ್​ ಪಂದ್ಯಕ್ಕೆ ಮಳೆ ಅಡ್ಡಿ
    ಇದಕ್ಕೂ ಮೊದಲು ಇಂಗ್ಲೆಂಡ್​ ವೇಗಿಗಳ ದಾಳಿಗೆ ತತ್ತರಿಸಿದ್ದ ಪಾಕಿಸ್ತಾನ ತಂಡ ಭೋಜನ ವಿರಾಮದ ವೇಳೆಗೆ 2 ವಿಕೆಟ್​ಗೆ 53 ರನ್​ ಗಳಿಸಿತ್ತು. ಶಾನ್​ ಮಸೂದ್​ (45 ರನ್​, 134 ಎಸೆತ, 7 ಬೌಂಡರಿ) ಹಾಗೂ ಬಾಬರ್​ ಅಜಮ್​ (52 ರನ್​, 71 ಎಸೆತ, 9 ಬೌಂಡರಿ) ಜೋಡಿ ಮುರಿಯದ 3ನೇ ವಿಕೆಟ್​ಗೆ 78 ರನ್​ ಪೇರಿಸಿ ಪ್ರತಿಹೋರಾಟದ ನಿರೀಕ್ಷೆ ಮೂಡಿಸಿದೆ. ಪಾಕಿಸ್ತಾನ ಸೂಪರ್​ ಲೀಗ್​ (ಪಿಎಸ್​ಎಲ್​) ಬಳಿಕ ಕ್ರಿಕೆಟ್​ನಿಂದ ದೂರ ಉಳಿದಿದ್ದ ಪಾಕಿಸ್ತಾನ ಕ್ರಿಕೆಟಿಗರು ಬಹುತೇಕ 5 ತಿಂಗಳ ಬಳಿಕ ಮೈದಾನಕ್ಕಿಳಿದರು. ಕಳೆದ ವಾರವಷ್ಟೇ ವೆಸ್ಟ್​ ಇಂಡೀಸ್​ ವಿರುದ್ಧ ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಆತಿಥೇಯ ಇಂಗ್ಲೆಂಡ್​, ಮತ್ತೊಂದು ಸರಣಿ ಗೆಲುವಿನ ಕನಸಿನಲ್ಲಿದೆ. ವಿಂಡೀಸ್​ ವಿರುದ್ಧದ ಕಡೇ ಪಂದ್ಯದಲ್ಲಿ ಆಡಿದ ತಂಡವನ್ನೇ ಇಂಗ್ಲೆಂಡ್​ ಕಣಕ್ಕಿಳಿಸಿದೆ.

    ಇಂಗ್ಲೆಂಡ್​: 41.1 ಓವರ್ ಗಳಲ್ಲಿ 2 ವಿಕೆಟ್​ಗೆ 121 (ಶಾನ್​ ಮಸೂದ್​ 45, ಬಾಬರ್​ ಅಜಮ್​ 52, ಅಬಿದ್​ ಅಲಿ 16, ಕ್ರಿಸ್​ ವೋಕ್ಸ್​ 14ಕ್ಕೆ 1, ಜೋಫ್ರಾ ಆರ್ಚರ್​ 22 ಕ್ಕೆ 1)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts