More

    ಹಲವು ಮುಖಗಳನ್ನು ಹೊಂದಿದ್ದ ಪಾಕಿಸ್ತಾನಿ ಉಗ್ರ… ಭಾರತೀಯ ಮಹಿಳೇನ ಮದುವೆ ಆಗಿದ್ದ!

    ನವದೆಹಲಿ: ದೆಹಲಿಯಲ್ಲಿ ನಿನ್ನೆ ಬಂಧಿಸಲ್ಪಟ್ಟಿರುವ ಪಾಕಿಸ್ತಾನಿ ಉಗ್ರ ಮೊಹಮ್ಮದ್​ ಅಸ್ರಫ್​ ಒಂದು ದಶಕಕ್ಕೂ ಹಿಂದಿನಿಂದ ನಕಲಿ ಹೆಸರಿನಲ್ಲಿ ಭಾರತದಲ್ಲಿ ವಾಸಿಸುತ್ತಿದ್ದಾನೆ. ಗುರುತಿನ ದಾಖಲಾತಿಗಳನ್ನು ಪಡೆಯುವುದಕ್ಕೋಸ್ಕರ ಘಾಜಿಯಾಬಾದ್​ನಲ್ಲಿ ಒಬ್ಬ ಭಾರತೀಯ ಮಹಿಳೆಯನ್ನು ಮದುವೆಯಾಗಿದ್ದ ಎಂದು ವಿಶೇಷ ಘಟಕದ ಡಿಸಿಪಿ ಪ್ರಮೋದ್​ ಖುಷ್​ವಾಹ ಹೇಳಿದ್ದಾರೆ.

    ಒಂದು ದಶಕಕ್ಕೂ ಹಿಂದಿನಿಂದ ಭಾರತದಲ್ಲಿ ವಾಸಿಸುತ್ತಿರುವ ಅವನು ಹಲವು ನಕಲಿ ಐಡಿಗಳನ್ನು ಇಟ್ಟುಕೊಂಡಿದ್ದ. ಅವುಗಳಲ್ಲಿ ಒಂದು ಅಹ್ಮದ್​ ನೂರಿ ಎಂಬ ಹೆಸರಾಗಿತ್ತು. ಭಾರತದ ಪಾಸ್​ಪೋರ್ಟ್​ ಕೂಡ ಪಡೆದು ಥೈಲೆಂಡ್​ ಮತ್ತು ಸೌದಿ ಅರೇಬಿಯಾಗೆ ಪ್ರಯಾಣಿಸಿದ್ದ. ದಾಖಲಾತಿಗಳಿಗಾಗಿ ಉತ್ತರಪ್ರದೇಶದ ಘಾಜಿಯಾಬಾದ್​ನ ಮಹಿಳೆಯನ್ನು ಮದುವೆಯಾಗಿ, ಬಿಹಾರದಲ್ಲಿ ಭಾರತೀಯನೆಂಬ ಗುರುತಿನ ಚೀಟಿಗಳನ್ನು ಪಡೆದಿದ್ದ ಎನ್ನಲಾಗಿದೆ.

    ಇದನ್ನೂ ಓದಿ: Lakhimpur Kheri Case: ಅಂಕಿತ್ ದಾಸ್​ ಕಾರಿನ ಚಾಲಕ ಪೊಲೀಸರ ವಶಕ್ಕೆ

    ಪಾಕಿಸ್ತಾನದ ಐಎಸ್ಐನಿಂದ ತರಬೇತಿ ಪಡೆದಿದ್ದ ಉಗ್ರ ಅಸ್ರಫ್​ ಬಾಂಗ್ಲಾದೇಶದ ಮೂಲಕ ಸಿಲಿಗುರಿ ಗಡಿಪ್ರದೇಶದಿಂದ ಭಾರತ ಪ್ರವೇಶಿಸಿದ್ದ. ನಸೀರ್​ ಎಂಬ ಕೋಡ್​ ನೇಮ್​ ಹೊಂದಿದ ಪಾಕಿಸ್ತಾನಿ ಏಜೆಂಟ್​ ಅವನಿಗೆ ಸೂಚನೆಗಳನ್ನು ಕೊಡುತ್ತಾ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿದ್ದ. ‘ಪೀರ್​ ಮೌಲಾನಾ’ ಎಂಬುದಾಗಿಯೂ ಅಸ್ರಫ್​ ವೇಷ ಬದಲಾಯಿಸಿಕೊಂಡು ಅಡ್ಡಾಡಿದ್ದಾನೆ. ಸದ್ಯ ಸ್ಲೀಪರ್​ ಸೆಲ್​ ಆಗಿ ಕಾರ್ಯನಿರ್ವಹಿಸುತ್ತಿದ್ದು, ದೊಡ್ಡ ಭಯೋತ್ಪಾದಕ ದಾಳಿಗೆ ಸಿದ್ಧತೆ ನಡೆಸುತ್ತಿದ್ದ ಎಂದು ಡಿಸಿಪಿ ಖುಷ್​ವಾಹ ತಿಳಿಸಿದ್ದಾರೆ. (ಏಜೆನ್ಸೀಸ್​​)

    ಕೆರೆ ಕೋಡಿ ಬಿದ್ದು ಹರಿದುಹೋದ ಮೀನುಗಳು… ಗುತ್ತಿಗೆದಾರರ ಬದುಕು ಹೈರಾಣ

    ಜಿ20 ಮೀಟ್: ಇಟಲಿಗೆ ತೆರಳಿರುವ ವಾಣಿಜ್ಯ ಸಚಿವ ಪಿಯೂಷ್​​ ಗೋಯಲ್​​; ವಿವಿಧ ರಾಷ್ಟ್ರಗಳೊಂದಿಗೆ ಮಾತುಕತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts