More

    ಕೇಳ್ರೋಪ್ಪೋ, ಕೇಳ್ರಿ… ಪಾಕ್​ ಷೇರು ವಿನಿಮಯ ಕೇಂದ್ರದ ಮೇಲಿನ ಉಗ್ರರ ದಾಳಿ ಹಿಂದೆ ಭಾರತ ಇದೆಯಂತೆ!

    ಇಸ್ಲಾಮಾಬಾದ್​: ಪಾಕಿಸ್ತಾನದ ಕರಾಚಿಯಲ್ಲಿನ ಷೇರು ವಿನಿಮಯ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯ ಹಿಂದೆ ಭಾರತದ ಕೈವಾಡ ಇದೆ ಎಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮಂಗಳವಾರ ಹೇಳಿದ್ದಾರೆ.

    ಷೇರು ವಿನಿಮಯ ಕೇಂದ್ರಕ್ಕೆ ಸೋಮವಾರ ನುಗ್ಗಿದ ನಾಲ್ವರು ಶಸ್ತ್ರಧಾರಿಗಳು ಗ್ರನೇಡ್​ಗಳನ್ನು ಎಸೆದು, ಗುಂಡಿನ ಸುರಿಮಳೆ ಸುರಿಸಿದ್ದರಿಂದ ಇಬ್ಬರು ಗಾರ್ಡ್​ಗಳು, ಒಬ್ಬ ಪೊಲೀಸ್​ ಅಧಿಕಾರಿ ಮೃತಪಟ್ಟಿದ್ದರು. ನಂತರ ಭದ್ರತಾಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ನಾಲ್ವರು ಶಸ್ತ್ರಧಾರಿಗಳು ಹತರಾಗಿದ್ದರು.
    ಮಂಗಳವಾರ ನಡೆದ ಪಾಕ್​ ಸಂಸತ್ತಿನ ಮಂಗಳವಾರದ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಇಮ್ರಾನ್​ ಖಾನ್​, ಈ ದಾಳಿಯ ಹಿಂದೆ ಭಾರತದ ಕೈವಾಡ ಇದೆ ಯಾವುದೇ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

    ತಮ್ಮ ಈ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸದ ಅವರು, ಪಾಕಿಸ್ತಾನದಲ್ಲಿ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಬೇಹುಗಾರಿಕಾ ವರದಿಗಳು ಬಂದಿದ್ದವು. ಈ ಕುರಿತು ಸಚಿವ ಸಂಪುಟದ ಕೆಲವು ಸಹೋದ್ಯೋಗಿಗಳೊಂದಿಗೆ ಚರ್ಚಿಸಿದ್ದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಭಾರತದ ಮೊದಲ ಕೋವಿಡ್​ ಚುಚ್ಚುಮದ್ದು ಕೊವಾಕ್ಸಿನ್​ ಸಿದ್ಧವಾಗಿದ್ದು ಹೀಗೆ…

    ಪಾಕಿಸ್ತಾನದ ಬೇಹುಗಾರಿಕಾ ಪಡೆಗಳು ನಾಲ್ಕು ಉಗ್ರರ ದಾಳಿಗಳ ಬಗ್ಗೆ ಮಾಹಿತಿ ನೀಡಿದ್ದವು. ಇಸ್ಲಾಮಾಬಾದ್​ನಲ್ಲಿ ನಡೆಯಬೇಕಿದ್ದ ಎರಡು ದಾಳಿಯನ್ನು ವಿಫಲಗೊಳಿಸಲಾಗಿತ್ತು. ಆದರೆ ಎಲ್ಲಾ ದಾಳಿಗಳನ್ನು ವಿಫಲಗೊಳಿಸಲು ಸಾಧ್ಯವಾಗುವುದಿಲ್ಲ. ಕರಾಚಿ ದಾಳಿ ಅದಕ್ಕೆ ಸಾಕ್ಷಿ ಎಂದು ತಿಳಿಸಿದ್ದಾರೆ.

    ಬಲೂಚಿಸ್ತಾನದಲ್ಲಿ ಪ್ರತ್ಯೇಕತಾ ಹೋರಾಟದಲ್ಲಿ ತೊಡಗಿರುವ ಬಲೂಚ್​ ಲಿಬರೇಷನ್​ ಆರ್ಮಿ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ಉಗ್ರರು ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಷೇರು ವಿನಿಮಯ ಕೇಂದ್ರಕ್ಕೆ ಬಂದಿದ್ದರು. ಕಟ್ಟಡದೊಳಗೆ ನುಸುಳಿ ಒಂದಷ್ಟು ಜನರನ್ನು ಒತ್ತೆಸೆರೆಯಲ್ಲಿ ಇರಿಸಿಕೊಳ್ಳುವುದು ಅವರ ಹುನ್ನಾರವಾಗಿತ್ತು. ಆದರೆ ತುಂಬಾ ಎಚ್ಚರಿಕೆಯಿಂದ ಇದ್ದ ಭದ್ರತಾಪಡೆಗಳು ಈ ದಾಳಿಯನ್ನು ವಿಫಲಗೊಳಿಸಿದ್ದಾಗಿ ಹೇಳಿದ್ದಾರೆ.

    ಭೂಮಿ ಮೇಲೆ ಆಘ್ರಾಣಿಸಿ ಬಾಹ್ಯಾಕಾಶದ ವಾಸನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts