More

    ಭಾರತದ ಮೊದಲ ಕೋವಿಡ್​ ಚುಚ್ಚುಮದ್ದು ಕೊವಾಕ್ಸಿನ್​ ಸಿದ್ಧವಾಗಿದ್ದು ಹೀಗೆ…

    ನವದೆಹಲಿ: ಭಾರತದ ಮೊದಲ ಕೋವಿಡ್​-19 ರೋನಿರೋಧಕ ಚುಚ್ಚುಮದ್ದು ಕೊವಾಕ್ಸಿನ್​ ಅನ್ನು ಭಾರತ್​ ಬಯೋಟೆಕ್​ ಇಂಡಿಯಾ (ಬಿಬಿಐಎಲ್​) ಸಿದ್ಧಪಡಿಸಿದೆ. ಮನುಷ್ಯರ ಮೇಲೆ ಇದರ ಪ್ರಯೋಗ ನಡೆಸಲು ಭಾರತೀಯ ಔಷಧ ನಿಯಂತ್ರಣ ಮಂಡಳಿಯಿಂದಲೂ ಅನುಮತಿ ಪಡೆದುಕೊಳ್ಳಲಾಗಿದೆ. ಈ ಪರೀಕ್ಷೆಗಳು ಜುಲೈನಿಂದ ಆರಂಭವಾಗಲಿದೆ. ಹಾಗಾದರೆ ಭಾರತದ ಮೊದಲ ಕೋವಿಡ್​ ಚುಚ್ಚುಮದ್ದು ತಯಾರಾಗಿದ್ದು ಹೇಗೆ?

    ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಸಹಾಯದೊಂದಿಗೆ ಬಿಬಿಐಎಲ್​ ಕೊವಾಕ್ಸಿನ್​ ರೋಗನಿರೋಧಕ ಚುಚ್ಚುಮದ್ದನ್ನು ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಕೋವಿಡ್​ ರೋಗ ಲಕ್ಷಣವಿಲ್ಲದ ರೋಗಿಯೊಬ್ಬರ ದೇಹದಲ್ಲಿದ್ದ ಕರೊನಾ ವೈರಾಣುವಿನಿಂದ ಸ್ಟ್ರೈನ್​ ಒಂದನ್ನು ಪ್ರತ್ಯೇಕಿಸಿ ಮೇ ಮೊದಲ ವಾರದಲ್ಲಿ ಬಿಬಿಐಎಲ್​ಗೆ ನೀಡಿತ್ತು. ಬಿಬಿಐಎಲ್​ ಇದನ್ನು ಬಳಸಿಕೊಂಡು ಇನ್​ಆ್ಯಕ್ಟಿವೇಟೆಡ್​ ರೋಗನಿರೋಧಕ ಚುಚ್ಚುಮದ್ದು ಅಂದರೆ, ಸತ್ತ ವೈರಾಣುವನ್ನು ಬಳಸಿಕೊಂಡು ರೋಗನಿರೋಧಕ ಚುಚ್ಚುಮದ್ದನ್ನು ಅಭಿವೃದ್ಧಿಪಡಿಸಿತು.

    ಇದನ್ನೂ ಓದಿ: ಟಿಬೆಟ್​ನಂತೆ ಹಾಂಗ್​ಕಾಂಗನ್ನು ಹೊಸಕಿದ ಚೀನಾ; ಭದ್ರತಾ ಕಾಯ್ದೆ ಅಂಗೀಕಾರ; ಪ್ರಜಾಪ್ರಭುತ್ವ ಹೋರಾಟಕ್ಕೆ ಭಾರಿ ಹಿನ್ನಡೆ

    ಈ ಚುಚ್ಚುಮದ್ದನ್ನು ಮನುಷ್ಯರಿಗೆ ಕೊಟ್ಟಾಗ, ಅವರಿಗೆ ಸೋಂಕು ಉಂಟಾಗುವುದಾಗಲಿ ಅಥವಾ ಕರೊನಾ ವೈರಾಣು ದ್ವಿಗುಣಗೊಳ್ಳಲಾಗಲಿ ಇದು ಅವಕಾಶ ಕೊಡುವುದಿಲ್ಲ. ಹಾಗಾಗಿ ಇದನ್ನು ಸಾಯಿಸಿದ ವೈರಾಣು ಎಂದು ಪರಿಗಣಿಸಲಾಗುತ್ತದೆ. ಮತ್ತು ಸೋಂಕಿತ ವ್ಯಕ್ತಿಯಲ್ಲಿ ವೈರಾಣುವಿನ ವಿರುದ್ಧ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಬಿಬಿಐಎಲ್​ ವಿವರಿಸಿದೆ. ಈ ರೀತಿಯ ಇನ್​ಆ್ಯಕ್ಟಿವೇಟೆಡ್​ ರೋಗನಿರೋಧಕ ಚುಚ್ಚುಮದ್ದುಗಳು ಬಳಕೆಗೆ ತುಂಬಾ ಸುರಕ್ಷಿವಾಗಿರುತ್ತದೆ ಎಂದು ಹೇಳಿದೆ.

    ಚುಚ್ಚುಮದ್ದ ಸಿದ್ಧವಾದ ಬಳಿಕ ಪ್ರೀಕ್ಲಿನಿಕಲ್​ ಪರೀಕ್ಷೆಗೆ ಒಳಪಡಿಸಲಾಯಿತು. ಅಂದರೆ ಗಿನಿಯಾ ಪಿಗ್​ ಮತ್ತು ಇಲಿಗಳ ಮೇಲೆ ಇದನ್ನು ಪ್ರಯೋಗಿಸಿ, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಯಿತು. ಆನಂತರದಲ್ಲಿ ಅದು ಮನುಷ್ಯರ ಮೇಲೆ ಪ್ರಯೋಗಿಸಲು ಅಗತ್ಯ ಅನುಮತಿಗಳನ್ನು ಪಡೆದುಕೊಂಡು, ಜುಲೈನಿಂದ ಆ ಕಾರ್ಯವನ್ನು ಆರಂಭಿಸಲಿದೆ.

    ‘ಕರೊನಿಲ್’​ನಿಂದ ಕರೊನಾ ಸೋಂಕು ನಿವಾರಣೆಯಾಗುತ್ತದೆ ಎಂದು ನಾವು ಹೇಳೇ ಇಲ್ಲ; ಪತಂಜಲಿ ಯೂ ಟರ್ನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts