More

    ಮಂಗಳೂರಿನ ಗೋಡೆಯಲ್ಲಿ ಮೂಡಿದೆ ನೈಜ ಬೆಸ್ತ ಮಹಿಳೆಯ ಪ್ರತಿರೂಪ

    ಮಂಗಳೂರು: ಕರಾವಳಿಯ ಆರ್ಥಿಕತೆಗೆ ಬೆಸ್ತರ ಕೊಡುಗೆ ಮಹತ್ತರ. ಬದುಕನ್ನು ಪಣವಾಗಿಟ್ಟು ಸಮುದ್ರದಲ್ಲಿ ಕೆಲಸ ಮಾಡುವ ಇವರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಇಲ್ಲಿನ ಪಿಕ್ಸಿನ್ಸಿಲ್ ಕಲಾವಿದರ ತಂಡ ಇದೇ ಆಶಯದಲ್ಲಿ ಮೊಗವೀರ ಸಮುದಾಯಕ್ಕೆ ಸಂದೇಶ ಸಾರುವ ನಿಟ್ಟಿನಲ್ಲಿ ಉರ್ವ ಮಾರ್ಕೆಟ್ ಬಳಿಯ ಕಟ್ಟಡವೊಂದರ ಗೋಡೆಯಲ್ಲಿ ಮೀನು ಮಾರಾಟ ಮಾಡುವ ಮಹಿಳೆಯ ಚಿತ್ರ ರಚಿಸಿ ಗಮನ ಸೆಳೆದಿದೆ.

    ಉರ್ವದಲ್ಲಿ ಮೀನು ಮಾರಾಟ ಮಾಡುವ ಹಿರಿಯ ಮಹಿಳೆಯ ಚಿತ್ರ ಇದಾಗಿದ್ದು, ಮೊಬೈಲ್‌ನಲ್ಲಿ ಫೋಟೊ ತೆಗೆದು ಅದನ್ನು ನೋಡಿ ಗೋಡೆಯಲ್ಲಿ ಚಿತ್ರ ಬಿಡಿಸಲಾಗಿದೆ. ತನ್ನ ಚಿತ್ರವನ್ನು ನೋಡಿ ಆ ಮಹಿಳೆ ಕೂಡ ಸಂಭ್ರಮಿಸಿದ್ದಾರೆ. ಚಿತ್ರದಲ್ಲಿ ಮತ್ಸ್ಯ ಲೋಕದ ಬಗ್ಗೆ ಕಾಳಜಿ ಹಾಗೂ ಜಾಗೃತಿಯನ್ನು ಬಣ್ಣಗಳಲ್ಲಿ ಅಭಿವ್ಯಕ್ತ ಪಡಿಸಲಾಗಿದೆ.

    ಇದೇ ರೀತಿ ಹಿರಿಯ ನಾಗರಿಕರೊಬ್ಬರ ಫೋಟೋ ತೆಗೆದು, ಅದನ್ನು ಚಿಲಿಂಬಿಯ ಗೋಡೆಯಲ್ಲಿ ಚಿತ್ರಿಸಲಾಗಿದೆ. ಇದರಲ್ಲಿ ಯುವ ಜನರಿಗೆ ಪೂರಕವಾಗುವಂತೆ ‘ಇಟ್ಸ್ ಯೂ ಟುಮಾರೊ’ ಎಂದು ಸಂದೇಶ ಬರೆಯಲಾಗಿದೆ.
    ಪೃಥ್ವಿರಾಜ್ ಮರೋಳಿ ನೇತೃತ್ವದ ಕಲಾವಿದರ ತಂಡದಲ್ಲಿ ಅಜೇಶ್ ಸಜಿಪ, ನಿತೇಶ್ ಕನ್ಯಾಡಿ, ವಿನೋದ್ ಚಿಲಿಂಬಿ ಹಾಗೂ ಅಭಿಜಿತ್ ದೇವಾಡಿಗ ಇದ್ದು, ಚಿತ್ರಗಳನ್ನು ವೀಕ್ಷಿಸಿದ ಶಾಸಕ ವೇದವ್ಯಾಸ ಕಾಮತ್ ಮೆಚ್ಚುಗೆ ಸೂಚಿಸಿದ್ದಾರೆ.

    ಉತ್ತಮ ಸಂದೇಶ ಉದ್ದೇಶ: ಹೊಸ ಶೈಲಿ ನಿರ್ಮಾಣ ಮಾಡುವ ಉದ್ದೇಶದಿಂದ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರಗಳನ್ನು ಅಲ್ಲಲ್ಲಿ ಮಾಡುತ್ತಿದ್ದೇವೆ. ಉರ್ವದಲ್ಲಿ ಮೀನು ಮಾರುವ ಮಹಿಳೆಯ ಚಿತ್ರ ಮೂರು ದಿನದಲ್ಲಿ ಪೂರ್ಣಗೊಳಿಸಿದ್ದೇವೆ. ಒಂದೊಂದು ಕಡೆ ಹೊಸ ಪರಿಕಲ್ಪನೆಯೊಂದಿಗೆ ಚಿತ್ರ ಮಾಡುತ್ತಿದ್ದೇವೆ ಎಂದು ಕಲಾವಿದ ಪೃಥ್ವಿರಾಜ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts