More

    ಸಂಗಾತಿ ಮುಟ್ಟಾದರೆ ಪುರುಷರಿಗೆ ವೇತನಸಹಿತ ರಜೆ ನೀಡುತ್ತಂತೆ ಈ ಕಂಪನಿ…!

    ಬೆಂಗಳೂರು: ನಗರ ಮೂಲದ ಹಾರ್ಸಸ್ ಸ್ಟೇಬಲ್ ನ್ಯೂಸ್ ಎಂಬ ಸ್ಟಾರ್ಟ್ಅಪ್ ಸಂಸ್ಥೆಯೊಂದು ವಿಭಿನ್ನ ಉಪಕ್ರಮವನ್ನು ಆರಂಭಿಸಿದೆ.
    ಈ ಸಂಸ್ಥೆಯಲ್ಲಿರುವ ಮುಟ್ಟಾಗುವ ಎಲ್ಲ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡುವ ವಿಭಿನ್ನ ಮತ್ತು ವಿಶಿಷ್ಟ ಉಪಕ್ರಮ ಕೈಗೊಂಡಿದೆ ಎಂದು ಸಂಸ್ಥೆಯ ಅಧಿಕಾರಿ ಬುಧವಾರ ತಿಳಿಸಿದ್ದಾರೆ.
    ಅಷ್ಟೇ ಅಲ್ಲದೆ ‘ಆ ದಿನಗಳ’ಲ್ಲಿ ತಮ್ಮ ಹೆಂಡತಿಯರನ್ನು ಬೆಂಬಲಿಸಲು ಪುರುಷ ಉದ್ಯೋಗಿಗಳಿಗೂ ಈ ಸೌಲಭ್ಯ ನೀಡಿದೆ.

    ಇದನ್ನೂ ಓದಿ: ಪುರಿ ಜಗನ್ನಾಥನೇ ನಮ್ಮನ್ನು ಕ್ಷಮಿಸುವುದಿಲ್ಲ ಎಂದ ಸುಪ್ರೀಂ ಕೋರ್ಟ್​


    “ಈ ಉಪಕ್ರಮವು ಮಹಿಳೆಯರಿಗೆ ಎರಡು ದಿನಗಳ ವೇತನ ರಜೆ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಆ ನಿರ್ದಿಷ್ಟ ಸಮಯದಲ್ಲಿ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗುವಂತೆ 250 ರೂ.ಗಳ ಭತ್ಯೆಯನ್ನು ನೀಡುತ್ತದೆ” ಎಂದು ಸ್ಟಾರ್ಟ್​​​ಅಪ್​​ನ ಅಧಿಕಾರಿ ತಿಳಿಸಿದ್ದಾರೆ.
    ಮಹಿಳಾ ಉದ್ಯೋಗಿಗಳಿಗೆ ಮಾತ್ರವಲ್ಲ, ಪುರುಷ ಉದ್ಯೋಗಿಗಳಿಗೆ ಈ ಸಮಯದಲ್ಲಿ ಅವರ ಹೆಂಡತಿಯರನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಒಂದು ದಿನದ ರಜೆ ನೀಡಲಾಗುತ್ತದೆ.

    ಇದನ್ನೂ ಓದಿ: ಸುಶಾಂತ್ ಸಿಂಗ್​ ಆತ್ಮಹತ್ಯೆ, 8 ಜನರ ವಿರುದ್ಧ ಕೇಸ್

    “ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ತೀವ್ರ ನೋವು ಅನುಭವಿಸುತ್ತಾರೆ ಮತ್ತು ಅವರಿಗೆ ಈ ಅವಧಿ ತುಂಬ ಪ್ರಯಾಸಕರವಾಗಿರುತ್ತದೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಮುಟ್ಟಿನ ರಜೆ ನೀತಿಯ ಅನುಷ್ಠಾನ ಸಂಸ್ಥೆಯ ಕೊಡುಗೆ ಎಂದು ಪರಿಗಣಿಸುವಂತಿಲ್ಲ. ಏಕೆಂದರೆ ಅಭಿವೃದ್ಧಿ ವಿಷಯದಲ್ಲಿ ಪುರುಷ ಮತ್ತು ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸುವುದು ಈ ಸಂಸ್ಥೆಯ ಗುರಿ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಸಲೋನಿ ಅಗರ್​ವಾಲ್ ಹೇಳಿದರು. ಇತರ ದೊಡ್ಡ ಸಂಸ್ಥೆಗಳಿಗೆ ಅಂತಹ ಉದ್ಯೋಗಿ ಸ್ನೇಹಿ ನೀತಿಗಳನ್ನು, ಲಿಂಗ ಸಮಾನತೆಗಾಗಿ ಕ್ರಮ ಕೈಗೊಳ್ಳಲು ಪ್ರೇರೇಪಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಸುಶಾಂತ್​​ಗೆ ನಿರ್ಮಾಪಕ ಅಭಿಷೇಕ್ ದಂಪತಿ ಹೇಗೆ ವಿಶೇಷ ಗೌರವ ಸಲ್ಲಿಸಲಿದ್ದಾರೆ ಗೊತ್ತಾ?

    ಈ ಉಪಕ್ರಮದಿಂದ, ಮುಟ್ಟಿನ ನಿಷೇಧವನ್ನು ಮುರಿಯಲು ನಾವು ಆಶಿಸುತ್ತೇವೆ ಎಂದು ಅವರು ಹೇಳಿದರು.  ಈ ಎರಡು ದಿನಗಳ ರಜೆಯನ್ನು ಅನಾರೋಗ್ಯ ರಜೆ ಎಂದು ಸಂಸ್ಥೆ ಪರಿಗಣಿಸುವುದಿಲ್ಲ.  ಆದರೆ ಸಂಸ್ಥೆ ಅಲ್ಲಿ ಕೆಲಸ ಮಾಡುವ ನೌಕರರ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಈ ಸ್ಟಾರ್ಟ್​​ ಅಪ್​​ ತಂಡದಲ್ಲಿ ಶೇ 60 ಮಹಿಳೆಯರು ಹಾಗೂ ಶೇ 40 ಪುರುಷರಿದ್ದಾರೆ ಎಂದು ತಿಳಿಸಿದೆ. 

    LIVE| ದೇಶದ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಉದ್ಘಾಟಿಸಿ ಪ್ರಧಾನಿ ಮೋದಿ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts