More

    ಪಹಣಿ ಬೆಲೆ ಇಳಿಕೆ ಮಾಡಲು ಆಗ್ರಹ: ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದಿಂದ ಮನವಿ

    ಮಂಡ್ಯ: ಇತ್ತೀಚೆಗೆ ರಾಜ್ಯ ಸರ್ಕಾರ ಏರಿಕೆ ಮಾಡಿರುವ ಪಹಣಿ, ಎಂಆರ್ ಹಾಗೂ ಜಮೀನಿನ ನಕ್ಷೆ ಸ್ಕೆಚ್ ಬೆಲೆಯನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ವತಿಯಿಂದ ನಗರದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರ ಮೂಲಕ ಕಂದಾಯ ಸಚಿವ ಆರ್.ಅಶೋಕ್‌ಗೆ ಮನವಿ ರವಾನಿಸಿದ ಒಕ್ಕೂಟದ ಪದಾಧಿಕಾರಿಗಳು, ರಾಜ್ಯ ಸರ್ಕಾರ ರೈತ ಸಮುದಾಯವನ್ನು ಕಾರ್ಪೊರೇಟ್ ವ್ಯವಸ್ಥೆಯೊಂದಿಗೆ ಸಮೀಕರಣಗೊಳಿಸಿ ಲೆಕ್ಕಾಚಾರ ಮಾಡುತ್ತಿರುವುದನ್ನು ಕೈಬಿಡಬೇಕು. ಜಾಗತೀಕರಣದ ಜತೆಯಲ್ಲಿ ಲಾಭದಾಯಕದತ್ತ ಸಾಗುತ್ತಿರುವಾಗ ಕೃಷಿ ಕ್ಷೇತ್ರವು ಮಾರುಕಟ್ಟೆ ಏರಿಳಿತದಿಂದ ಪ್ರತಿ ವರ್ಷವೂ ನಷ್ಟದತ್ತ ಸಾಗುತ್ತಿದೆ. ರೈತ ಸಮುದಾಯವು ದೈನಂದಿನ ಖರ್ಚು ವೆಚ್ಚಗಳಿಗೆ ಹೆಣಗಾಡುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಪ್ರತಿ ನಿತ್ಯವೂ ರೈತರ ಹೆಸರು ಹೇಳುತ್ತಾ ಒಂದು ಸೌಲಭ್ಯವನ್ನು ಕಲ್ಪಿಸಿ, ಹಲವಾರು ರೀತಿಯಲ್ಲಿ ಬೆಲೆ ಏರಿಸಿ ರೈತ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಮಾಡುತ್ತಿದೆ. ಕೂಡಲೇ ಸರ್ಕಾರ ರೈತರ ವಿರುದ್ಧ ಇರುವ ತನ್ನ ನಿರ್ಧಾರಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿದರು.
    ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್, ಗೌರವಾಧ್ಯಕ್ಷ ಕೀಲಾರ ಕೃಷ್ಣ, ಹುಲಿವಾನ ಕಾಳೇಗೌಡ, ಸ್ವರ್ಣಸಂದ್ರ ಲೋಕೇಶ್, ತುಂಬಕೆರೆ ಮಂಜು, ರೈತ ಸಂಘದ ಕೀಲಾರ ಸೋಮಣ್ಣ, ಹೆಮ್ಮಿಗೆ ಚಂದ್ರಶೇಖರ್, ಕೋಣನಹಳ್ಳಿ ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts