More

    ಬ್ಲೂಫ್ಲ್ಯಾಗ್ ಬೀಚ್‌ಗೆ ಪ್ರವಾಸಿಗರ ದಂಡು

    ಪಡುಬಿದ್ರಿ: ಬ್ಲೂಫ್ಲ್ಯಾಗ್ ಬೀಚ್ ಆಗಿ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿ ಎಂಡ್ ಪಾಯಿಂಟ್ ಬೀಚ್‌ನಲ್ಲಿ ಭಾನುವಾರ ಪ್ರವಾಸಿಗರ ದಂಡು ಹೆಚ್ಚಾಗಿ ರಸ್ತೆ ಉದ್ದಕ್ಕೂ ಟ್ರಾಫಿಕ್ ಜಾಮ್ ಆಯಿತು.
    ವಾರದ ಹಿಂದಷ್ಟೇ ಅಂತಾರಾಷ್ಟ್ರೀಯ ಮಾನ್ಯತೆ ದೊರೆತ ಬಳಿಕ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹೊರತು ಪಡಿಸಿ ದೂರದ ಜಿಲ್ಲೆಗಳಿಂದಲೂ ಜನರು ಇಲ್ಲಿಗೆ ಬರಲಾರಂಭಿಸಿದ್ದಾರೆ. ಬ್ಲೂಫ್ಲ್ಯಾಗ್ ಬೀಚ್ ಘೋಷಣೆ ಮೊದಲು ಬೆರಳೆಣಿಕೆ ಜನರು ಭೇಟಿ ನೀಡುತಿದ್ದ ಇಲ್ಲಿ ಸದ್ಯ ಪ್ರತಿನಿತ್ಯ ಪ್ರವಾಸಿಗರ ಸಂಖ್ಯೆ 500ಕ್ಕೂ ಅಧಿಕವಾಗಿದೆ. ವಾರಾಂತ್ಯದಲ್ಲಿ ಮತ್ತು ರಜಾ ದಿನಗಳಲ್ಲಿ ಸಾವಿರಕ್ಕೂ ಮಿಕ್ಕಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಇದೊಂದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗುತ್ತಿದೆ. ಭಾನುವಾರ ಪಡುಬಿದ್ರಿ ಮುಖ್ಯ ಬೀಚ್ ಸೇರಿ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಬೀಚ್ ಸಂಪರ್ಕಿಸುವ ರಸ್ತೆ ಅಗಲ ಕಿರಿದಾದ ಪರಿಣಾಮ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿತ್ತು. ಬ್ಲೂಫ್ಲ್ಯಾಗ್ ಬೀಚ್‌ನಿಂದ ಪಡುಬಿದ್ರಿ ಬೀಚ್ ಸೇರಿ ಬೀಚ್ ರಸ್ತೆಯಲ್ಲಿರುವ ಸೇತುವೆವರೆಗೆ ಟ್ರಾಫಿಕ್ ಜಾಮ್ ಆಗಿ ಅಡಚಣೆ ಉಂಟಾಯಿತು. ಬಳಿಕ ಸ್ಥಳೀಯರು ಸೇರಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಸುಗಮ ಸಂಚಾರವಾಗುವಂತೆ ನೋಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts