More

    ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ದೂರಿ ಸ್ವಾಗತ

    ಕನಕಗಿರಿ: ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಶನಿವಾರ ಪಟ್ಟಣಕ್ಕೆ ಆಗಮಿಸಿದ್ದು, ತಾಲೂಕಾಡಳಿತದಿಂದ ಅದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆ ಮಾಡಲಾಯಿತು.

    ಯಲಬುರ್ಗಾ ತಾಲೂಕಿನಿಂದ ಪಟ್ಟಣಕ್ಕೆ ಆಗಮಿಸಿದ ಜಾಥಾವನ್ನು ತೊಂಡಿತೇರಪ್ಪ ಕ್ರಾಸ್ ಬಳಿ ತಹಸೀಲ್ದಾರ್ ವಿಶ್ವನಾಥ ಮುರುಡಿ ಹಾಗೂ ತಾಲೂಕಾಡಳಿತದಿಂದ ಸ್ವಾಗತಿಸಲಾಯಿತು. ಬಳಿಕ ತೊಂಡಿತೇರಪ್ಪ ದೇವಸ್ಥಾನ ವೃತ್ತದಿಂದ ನಾನಾ ಶಾಲೆಗಳ ಸ್ತಬ್ಧ ಚಿತ್ರಗಳು, ಮಹಿಳೆಯರ ಡೊಳ್ಳು, ತಾಷ್ ಮೇಳದೊಂದಿಗೆ ಆರಂಭವಾದ ಮೆರವಣಿಗೆ ವಾಲ್ಮೀಕಿ ವೃತ್ತ, ಅಂಬೇಡ್ಕರ್ ಸರ್ಕಲ್ ಮೂಲಕ ಬಸವೇಶ್ವರ ಸರ್ಕಲ್ (ಚೆಕ್ ಪೋಸ್ಟ್)ವರೆಗೆ ಸಾಗಿತು. ಮೆರವಣಿಗೆಯಲ್ಲಿ ಮುರಾರ್ಜಿ (ಹಿಂವ) ವಿದ್ಯಾರ್ಥಿಗಳ ಸಂವಿಧಾನ ಪೀಠಿಕೆ ಹಾಡಿನ ನೃತ್ಯ ಗಮನ ಸೆಳೆಯಿತು.

    ಮೆರವಣಿಗೆಯುದ್ದಕ್ಕೂ ರಾಷ್ಟ್ರಧ್ವಜ ಹಾಗೂ ನೀಲಿ ಬಾವುಟಗಳು ರಾರಾಜಿಸಿದವು. ಅಂಬೇಡ್ಕರ್‌ಗೆ ಜೈಕಾರ ಹಾಕಲಾಯಿತು. ಇದಕ್ಕೂ ಮೊದಲು ಪಟ್ಟಣದಲ್ಲಿ ಬೈಕ್ ರ‌್ಯಾಲಿ ನಡೆಸಲಾಯಿತು. ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಜಾಥಾದಲ್ಲಿ ಪಾಲ್ಗೊಂಡವರೆಲ್ಲರಿಗೂ ತಾಲೂಕು ಆಡಳಿತದಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಬಸವೇಶ್ವರ ವೃತ್ತದಲ್ಲಿ ಜಾಥಾ ಯಾತ್ರೆ ಬೀಳ್ಕೊಡಲಾಯಿತು.

    ಗಮನಸೆಳೆದ ಕುಂಭ ಮೇಳ: ಕನಕಗಿರಿಯಿಂದ ಬೀಳ್ಕೊಟ್ಟ ಜಾಥಾಕ್ಕೆ ತಾಲೂಕಿನ ಚಿಕ್ಕಮಾದಿನಾಳ, ಮುಸಲಾಪೂರ, ಬಸರಿಹಾಳ, ಗೌರಿಪುರ ಹಾಗೂ ಹುಲಿಹೈದರ ಗ್ರಾಮ ಪಂಚಾಯಿತಿಗಳಲ್ಲೂ ಭವ್ಯ ಸ್ವಾಗತ ದೊರೆಯಿತು. ನೂರಾರು ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಗ್ರಾಮಸ್ಥರಿಗೆ ಸಂವಿಧಾನ ಪ್ರಸ್ತಾವನೆಯನ್ನು ಪಿಡಿಒಗಳು ಬೋಧಿಸಿದರು.

    ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಪಪಂ ಸದಸ್ಯರಾದ ಕಂಠಿರಂಗಪ್ಪ, ಸಿದ್ದೇಶ ಕಲುಬಾಗಿಲಮಠ, ಮಾಜಿ ಅಧ್ಯಕ್ಷ ರವಿ ಭಜಂತ್ರಿ, ಗ್ರೇಡ್ 2 ತಹಸೀಲ್ದಾರ್ ವಿ.ಎಚ್ ಹೊರಪೇಟಿ, ತಾಪಂ ಇಒ ಚಂದ್ರಶೇಖರ ಕಂದಕೂರು, ಪಿಎಸ್‌ಐ ಲೋಕೇಶ, ಬಿಇಒ ವೆಂಕಟೇಶ ರಾಮಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಪ್ಪ ರಾಠೋಡ್, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಯ್ಯ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲಕುಮಾರ, ಪ್ರಮುಖರಾದ ಬಿ. ಕನಕಪ್ಪ, ಸಣ್ಣ ಕನಕಪ್ಪ, ಪಾಮಣ್ಣ ಅರಳಿಗನೂರು, ಸುಭಾಷ್ ಕಂದಕೂರು, ಕನಕಪ್ಪ ಮ್ಯಾಗಡೆ, ದುರ್ಗಪ್ಪ ಬೈಲಕ್ಕುಂಪುರ, ಅಂಗನವಾಡಿ ಕಾರ್ಯಕರ್ತರು, ಸ್ಕೌಟ್ಸ್-ಗೈಡ್ಸ್, ಸೇವಾದಳದ ಸ್ವಯಂ ಸೇವಕರು ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts