More

  ಸಂತೆಯಲ್ಲಿ ಬದುಕಿದರೂ ಸಂತನಾಗಿ ಬಾಳಬೇಕು

  ಸಾಗರ: ಶರಣರು, ದಾರ್ಶನಿಕರು, ಸಂತರ ಮಾರ್ಗದರ್ಶನವನ್ನು ಅನುಸರಿಸಬೇಕು. ಸಂತೆಯಲ್ಲಿ ಬದುಕಿದರೂ ಸಂತನಾಗಿ ಬಾಳಬೇಕು ಎಂದು ತಹಸೀಲ್ದಾರ್ ಚಂದ್ರಶೇಖರ ನಾಯ್ಕ ಹೇಳಿದರು.

  ತಾಲೂಕು ಆಡಳಿತ ಶುಕ್ರವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕಾದರೆ ದಾರ್ಶನಿಕರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು, ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳುವುದು ಅತ್ಯಂತ ಮಹತ್ವದಾಗಿದೆ. ಮೋಹಾದಿಗಳನ್ನು ದೂರ ಮಾಡಿದರೆ ಬದುಕು ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಸಂತ ವೇಮನ ಅವರು ಜಗತ್ತಿಗೆ ಆದರ್ಶವನ್ನು ಸಾರಿದ ಅಪರೂಪದ ವ್ಯಕ್ತಿ. ಅಂತಹವರ ಬದುಕು ಆದರ್ಶವಾಗಿದೆ. ಆ ಮಾರ್ಗದಲ್ಲಿ ಮುನ್ನಡೆಯುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
  ಉಪನ್ಯಾಸ ನೀಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ಕನ್ನಡದ ಸರ್ವಜ್ಞನಂತೆ ತೆಲುಗಿನಲ್ಲಿ ವೇಮನ ಕಂಡು ಬರುತ್ತಾರೆ. ರಾಜ ವೈಭೋಗದಲ್ಲಿ ಬದುಕಿದರು ವೈರಾಗ್ಯವನ್ನು ತಾಳಿಯೋಗಿಯಾದ ಅಪರೂಪದ ವ್ಯಕ್ತಿತ್ವ ವೇಮನರಾಗಿದ್ದಾರೆ ಎಂದರು.
  ಪಿಎಸ್‌ಐ ತುಕಾರಾಂ ಸಾಗರ್‌ಕರ್, ಬಸವರಾಜು, ಫರ್ನಾಂಡಿಸ್, ಉಪತಹಸೀಲ್ದಾರ್ ಕಲ್ಲಪ್ಪ ಮೆಣಸಿನಹಾಳ್, ಮೋಹನ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts