More

    ಯೋಗಿ ನಾರೇಯಣರ ಕಾಲಜ್ಞಾನ ಸದಾ ಪ್ರಸ್ತುತ

    ಮೂಡಿಗೆರೆ: ಯೋಗಿ ನಾರೇಯಣ ಅವರು ಲೋಕ ಕಲ್ಯಾಣಕ್ಕಾಗಿ ರಚಿಸಿದ ಕಾಲಜ್ಞಾನ ಇಂದಿಗೂ ಪ್ರಚಲಿತವಾಗಿದೆ ಎಂದು ಯೋಗಿ ನಾರಾಯಣ ಯತೀಂದ್ರ ಬಲಿಜ ಸಮಾಜ ಸಂಘದ ಕಾರ್ಯದರ್ಶಿ ಮನ ಮೋಹನ್ ಹೇಳಿದರು.
    ಸೋಮವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಮತ್ತು ಯೋಗಿ ನಾರೇಯಣ ಯತೀಂದ್ರ ಬಲಿಜ ಸಮಾಜ ಸಂಘದಿಂದ ಏರ್ಪಡಿಸಿದ್ದ 298ನೇ ಯೋಗಿ ನಾರೇಯಣ ಜಯಂತಿಯಲ್ಲಿ ಮಾತನಾಡಿದರು. ವಿಜ್ಞಾನ ಎಷ್ಟೇ ಮುಂದುವರಿದರೂ ಅಧ್ಯಾತ್ಮ, ಶಾಸವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಯೋಗಿ ನಾರೇಯಣ ಅವರು ಸಮಾಜವನ್ನು ಆಧ್ಯಾತ್ಮಿಕ ಮಾರ್ಗದಲ್ಲಿ ಕೊಂಡೊಯ್ದ ಕಾರ್ಯ ನಿಜವಾಗಿಯೂ ಅದ್ಭುತ. ಅವರು ರಚಿಸಿದ ಕಾಲಜ್ಞಾನ, ನಾರಾಯಣ ಕವಿ ಶತಕ, ಸೂಕ್ಷ್ಮ ಭೀಮ, ಲಿಂಗ ಶತಕ, ಪ್ರಪಂಚ ನಾರೇಯಣ ಮೊದಲಾದ ಕೃತಿಗಳಲ್ಲಿ ಉಲ್ಲೇಖಿಸಿರುವ ಆಧ್ಯಾತ್ಮಿಕ ವಿಚಾರಗಳು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಮಾನವನ ಜೀವನ ಪರಿವರ್ತನೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
    ತಹಸೀಲ್ದಾರ್ ಶೈಲೇಶ್ ಎಸ್.ಪರಮಾನಂದ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಸಂಘದ ಪದಾಧಿಕಾರಿಗಳು ತಾಲೂಕು ಸರ್ಕಾರಿ ಎಂಜಿಎಂ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ವಿತರಿಸಿದರು. ಯೋಗಿ ನಾರೇಯಣ ಯತೀಂದ್ರ ಬಲಿಜ ಸಮಾಜ ಸಂಘದ ಅಧ್ಯಕ್ಷ ಎಂ.ಪಿ.ದಿವಾಕರ್, ಬಾಲುಶೆಟ್ಟಿ, ಶ್ರೀನಿವಾಸ್, ಕಾರ್ತಿಕ್, ಎಂ.ಪಿ.ಸತ್ಯ, ಎಂ.ಪಿ.ಸುನಿಲ್, ತೇಜಪಾಲ್, ಶ್ರವಣ್, ಗೋವಿಂದ, ಜಗನ್ನಾಥ್, ಪ್ರೀತಮ್, ಮಧುಚಂದ್ರ, ಸಂಜಯ್, ಗಣೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts