More

    ಅಪ್ಪನ ಚಿತೆಗೆ ಅಗ್ನಿಸ್ಪರ್ಶ ನೀಡಿ ನೇರ ಶಸ್ತ್ರಚಿಕಿತ್ಸೆ ಕೊಠಡಿಗೆ ಬಂದ ಹೃದ್ರೋಗ ತಜ್ಞ!

    ಮಂಗಳೂರು: ಅಪ್ಪನ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ನೇರ ಆಸ್ಪತ್ರೆಗೆ ತೆರಳಿ ಹೃದಯಾಘಾತವಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿದ ಮಂಗಳೂರಿನ ಹೃದ್ರೋಗ ತಜ್ಞ ಪದ್ಮನಾಭ ಕಾಮತ್ ಅವರ ಮಾನವೀಯ ಸೇವೆ, ಕರ್ತವ್ಯನಿಷ್ಠೆ ಮತ್ತೊಮ್ಮೆ ಜನರ ಶ್ಲಾಘನೆಗೆ ಪಾತ್ರವಾಗಿದೆ.

    ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ತಂದೆ ಡಾ.ಮಂಜುನಾಥ ಕಾಮತ್ ಅವರ ಆರೋಗ್ಯ ಹದಗೆಟ್ಟಿದೆ ಎಂಬ ಸುದ್ದಿ ತಿಳಿದಾಗ ಪದ್ಮನಾಭ ಆಸ್ಪತ್ರೆಯಲ್ಲಿದ್ದರು. ಮನೆಗೆ ತೆರಳಿ ತುರ್ತುಚಿಕಿತ್ಸೆ ನೀಡುತ್ತದ್ದಂತೆ ತಂದೆ ಅಸುನೀಗಿದರು. ಆಸ್ಪತ್ರೆಗೆ ಕರೆದೊಯ್ದಗ ಅಲ್ಲಿನ ವೈದ್ಯರು ನಿಧನವನ್ನು ಖಚಿತಪಡಿಸಿ, ಘೋಷಿಸಿದರು. ಮೃತದೇಹ ಹಸ್ತಾಂತರಿಸುವ ಮುನ್ನ ಕಾಗದಪತ್ರಗಳ ತಯಾರಿಗೆ 10-15 ನಿಮಿಷಗಳ ಬಿಡುವಿತ್ತು. ಅಷ್ಟರಲ್ಲಿ ಆಸ್ಪತ್ರೆಯಿಂದ ಬಂದ ತುರ್ತು ಕರೆ ಬಂತು. ತಕ್ಷಣ ಆಸ್ಪತ್ರೆಗೆ ಧಾವಿಸಿ ಹೃದ್ರೋಗಿಯೊಬ್ಬರನ್ನು ಬದುಕಿಸಿದರು. ಮತ್ತೆ ಆಸ್ಪತ್ರೆಗೆ ಬಂದು ಅಪ್ಪನ ಮೃತದೇಹವನ್ನು ಮನೆಗೊಯ್ದಿದ್ದಾರೆ.

    ಉತ್ತರಕ್ರಿಯೆಯಂದೂ ಶಸ್ತ್ರಚಿಕಿತ್ಸೆ: ಇನ್ನೊಂದಡೆ, ಫೆ.27ರಂದು ಕಾಮತರ ತಂದೆಯ ಉತ್ತರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಆಸ್ಪತ್ರೆಯ ಅಡುಗೆ ಸಿಬ್ಬಂದಿಯೊಬ್ಬರಿಗೆ ತೀವ್ರ ಹೃದಯಾಘಾತವಾಗಿದೆ ಎಂದು ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬರು ಮಾಹಿತಿ ನೀಡಿದರು. ತಂದೆ ನಿಧನದ ಶೋಕದ ನಡುವೆಯೂ ತಮ್ಮ ಮನೆಯವರನ್ನು ಸಮಾಧಾನಪಡಿಸಿ ತಕ್ಷಣ ಆಸ್ಪತ್ರೆಗೆ ತೆರಳಿ ಶಸ್ತ್ರಕ್ರಿಯೆ ನಡೆಸಿ ಆ ರೋಗಿಯ ಜೀವ ರಕ್ಷಿಸಿದ್ದಾರೆ. ಕಾಮತ್ ಅವರ ಕಾರ್ಯಕ್ಕೆ ರೋಗಿ ಮನೆಯವರು ಕೃತಜ್ಞತೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts