More

    ಚನ್ನಪಟ್ಟಣ ರಾಜಣ್ಣಾಚಾರ್ ಚಂದ್ರಶೇಖರ್ ಅವರಿಗೆ ಪದ್ಮ ಪ್ರಶಸ್ತಿ

    ಚನ್ನಪಟ್ಟಣ ನೆಲ ಮೂಲದ ವಿಶ್ವವಿಖ್ಯಾತ ಮನೋಶಾಸ್ತ್ರ ತಜ್ಞ ಡಾ. ಸಿ.ಆರ್.ಚಂದ್ರಶೇಖರ್ ಅವರಿಗೆ ದೇಶದ  ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ಈ ಮೂಲಕ ಬೊಂಬೆನಾಡಿನ ಕೀರ್ತಿ ಹೆಚ್ಚಿಸಿದ್ದಾರೆ.

    ಚನ್ನಪಟ್ಟಣ ರಾಜಣ್ಣಾಚಾರ್ ಚಂದ್ರಶೇಖರ್ ಅವರಿಗೆ ಪದ್ಮ ಪ್ರಶಸ್ತಿ

    ಡಾ.ಸಿ.ಆರ್.ಚಂದ್ರಶೇಖರ್ ನಗರದ ಕುವೆಂಪುನಗರದ ಮೂರನೇ ಅಡ್ಡರಸ್ತೆಯ ನಿವಾಸಿ ಬಿ.ಎಂ. ರಾಜಣ್ಣಾಚಾರ್ ಹಾಗೂ ಎಸ್.ಪಿ. ಸರೋಜಮ್ಮನವರ ಏಕೈಕ ಪುತ್ರ. ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ನಗರದಲ್ಲೇ ಪಡೆದಿದ್ದಾರೆ‌.

    ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಹಾಗೂ ಪ್ರೌಢಶಿಕ್ಷಣವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಪಡೆದ ಇವರು ತದನಂತರ, ಎಂಬಿಬಿಎಸ್ ಪದವಿಯನ್ನು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಪೆಡದಿದ್ದಾರೆ.

    ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಚನ್ನಪಟ್ಟಣ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಇವರಿಗಿದೆ. ವೈದ್ಯಕೀಯ ಪದವಿ ಪಡೆದ ನಂತರ ಮನೋಶಾಸ್ತ್ರ ವಿಚಾರದಲ್ಲಿ ಎಂಡಿಯನ್ನು ಪಡೆದುಕೊಂಡಿದ್ದು, ನಂತರ ನಿಮ್ಹಾನ್ಸ್ ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ, ಹಿರಿಯ ಪ್ರೋಫೆಸರ್ ಆಗಿ ಅಲ್ಲಿಯೇ ನಿವೃತ್ತರಾಗಿದ್ದಾರೆ.

    ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಇದಲ್ಲದೇ ಮಾನಸಿಕ ಖಾಯಿಲೆಗಳ ವಿಧಾನಗಳ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದಾರೆ. ಸಾವಿರಕ್ಕೂ ಹೆಚ್ಚು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಕನ್ನಡ ಭಾಷೆಯಲ್ಲಿ 280 ಮತ್ತು ಆಂಗ್ಲ ಭಾಷೆಯಲ್ಲಿ 40 ಪುಸ್ತಕಗಳನ್ನು ಬರೆದಿದ್ದಾರೆ‌‌‌. ಇವರ ಅದ್ವಿತೀಯ ಸಾಧನೆ ಗುರುತಿಸಿ, ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

    ಚನ್ನಪಟ್ಟಣ ಮೂಲದ ಸಾಧಕನಿಗೆ ತಾಲೂಕಿನ ಜನತೆ ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts