More

    ಪಾದರಾಯನಪುರದಲ್ಲಿ ಕ್ವಾರಂಟೈನ್​ನಲ್ಲಿದ್ದ ಮಹಿಳೆಯರ ಮಿತಿಮೀರಿದ ವರ್ತನೆ: ಆರೋಗ್ಯ ಸಚಿವರಿಂದ ಎಚ್ಚರಿಕೆ

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕರೊನಾ ಪ್ರಕರಣ ಹೆಚ್ಚಾಗುತ್ತಿರುವ ಭೀತಿಯ ನಡುವೆಯೂ ಕೋವಿಡ್​ನಿಂದ ಹೆಚ್ಚು ಬಾಧಿತಗೊಂಡು ಸೀಲ್​ಡೌನ್​ ಆಗಿರುವ ಪಾದಾರಾನಪುರದಲ್ಲಿ ಮಹಿಳೆಯರ ವರ್ತನೆಯಿಂದ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

    ಇದನ್ನೂ ಓದಿ: ಕೆಲಸವಿಲ್ಲದೇ ದೂರದ ತವರಿನತ್ತ ಹೊರಟ ವಲಸೆ ಕಾರ್ಮಿಕ ಕೊನೆಗೆ ತಲುಪಿದ್ದು ಹೆಣವಾಗಿ

    ಕ್ವಾರಂಟೈನ್​ನಲ್ಲಿದ್ದ ಮಹಿಳೆಯರು ಹೊರಗಡೆ ಓಡಾಡುತ್ತಿರುವುದು ಭಯದ ವಾತಾವರಣ ಸೃಷ್ಟಿಸಿದೆ. ಈ ಬಗ್ಗೆ ಖುದ್ದು ಆರೋಗ್ಯ ಸಚಿವ ಶ್ರೀರಾಮುಲು ಅವರೇ ಟ್ವೀಟ್​ ಮಾಡಿದ್ದು, ಪಾದರಾಯನಪುರದಲ್ಲಿ ಕ್ವಾರಂಟೈನ್​ನಲ್ಲಿರಬೇಕಾದ ಕೆಲ ಮಹಿಳೆಯರು ಹೊರ ಹೋದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ನಾಡಿನ ಜನರ ಆರೋಗ್ಯದ ವಿಷಯದಲ್ಲಿ ಆಟವಾಡುವ ಇಂತಹ ಘಟನೆ ಸಹಿಸಲು ಅಸಾಧ್ಯ. ಇವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ನಾಡಿನ ಜನತೆಯ ಆರೋಗ್ಯ ಕಾಪಾಡುವುದೇ ನಮ್ಮ ಮುಖ್ಯ ಧ್ಯೇಯ ಎಂದು ಹೇಳಿದ್ದಾರೆ.

    ಪಾದರಾಯನಪುರದಲ್ಲಿ ಕ್ವಾರಂಟೈನ್​ನಲ್ಲಿದ್ದ ಮಹಿಳೆಯರ ಮಿತಿಮೀರಿದ ವರ್ತನೆ: ಆರೋಗ್ಯ ಸಚಿವರಿಂದ ಎಚ್ಚರಿಕೆ

    ಇದನ್ನೂ ಓದಿ: ಮುಂಬೈನಲ್ಲಿ ಪೂನಂ ಪಾಂಡೆ ಬಂಧನ!

    ಕ್ವಾರಂಟೈನ್​ನಲ್ಲಿದ್ದ ಮುಸ್ಲಿಂ ಮಹಿಳೆಯರು ಪೊಲೀಸರ ಎದುರೇ 7 ಅಡಿ ಎತ್ತರದ ಕಾಂಪೌಂಡ್​ ಗೋಡೆ ಏರಿ ಹೊರಗಡೆ ಹೋದಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಟ್ವೀಟ್​ ಮೂಲಕ ಎಚ್ಚರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಅಬಕಾರಿ ಸಚಿವ ಎಚ್​. ನಾಗೇಶ್​ಗೆ ಸಿಎಂ ಬಿಎಸ್​ವೈ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts