More

    ಕೆಲಸವಿಲ್ಲದೇ ದೂರದ ತವರಿನತ್ತ ಹೊರಟ ವಲಸೆ ಕಾರ್ಮಿಕ ಕೊನೆಗೆ ತಲುಪಿದ್ದು ಹೆಣವಾಗಿ

    ನವದೆಹಲಿ: ಕರೊನಾ ಲಾಕ್​ಡೌನ್​ನಿಂದ ಕೆಲಸವಿಲ್ಲದೇ ತವರಿಗೆ ಮರಳಲು ನಿರ್ಧರಿಸಿದ ಓರ್ವ ವಲಸೆ ಕಾರ್ಮಿಕ ದೆಹಲಿಯಿಂದ ಬಿಹಾರದ ಪೂರ್ವ ಚಂಪಾರಣ್​ಗೆ ಸುಮಾರು 1000 ಕಿ.ಮೀ ಸೈಕ್ಲಿಂಗ್​ ಮಾಡುತ್ತಾ ಬರುವಾಗ ಮಾರ್ಗಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಘಟನೆ ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ಶನಿವಾರ ನಡೆದಿದೆ.

    ಸಾಗ್​ಹೀರ್​ ಅನ್ಸಾರಿ(26) ಮೃತ ದುರ್ದೈವಿ. ಕೆಲಸವಿಲ್ಲದೇ ಅನ್ಸಾರಿ ಹಾಗೂ ಆತನ ಏಳು ಮಂದಿ ಸ್ನೇಹಿತರು ಊರಿಗೆ ಮರಳಲು ನಿರ್ಧರಿಸಿ ಮೇ 5ರಂದು ಸೈಕಲ್​ ಮೂಲಕ ದೆಹಲಿ ಬಿಟ್ಟಿದ್ದರು. ಆಗಾಗಲೇ 5 ದಿನಗಳ ಕಳೆದು ಸುಮಾರು ಅರ್ಧ ದಾರಿಯನ್ನು ಕ್ರಮಿಸಿ ಲಖನೌಗೆ ಬಂದಿದ್ದರು.

    ಇದನ್ನೂ ಓದಿ: ಮಸೀದಿಗಾಗಿ ಹಿಂದು ಬಾಲಕನ ಬಲಿ: ದೂರು ನೀಡಲು ಹೋದ ಕುಟುಂಬಸ್ಥರಿಗೆ ಪೊಲೀಸರು ಮಾಡಿದ್ದು ಸರಿನಾ?

    ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಲಖನೌದ ರಸ್ತೆಯೊಂದರ ಡಿವೈಡರ್​ ಮೇಲೆ ಕುಳಿತು ಉಪಹಾರ ಸೇವನೆಯಲ್ಲಿ ತೊಡಗಿದ್ದರು. ವೇಳೆ ಲಖನೌ ನೋಂದಣಿಯ ಕಾರೊಂದು ನಿಯಂತ್ರಣ ಕಳೆದುಕೊಂಡು ಅನ್ಸಾರಿ ಕುಳಿತಿದ್ದ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಡಿವೈಡರ್​ ಮೇಲೆ ಬೆಳೆಸಲಾಗಿದ್ದ ಮರವು ಅನ್ಸಾರಿ ಸ್ನೇಹಿತರನ್ನು ಉಳಿಸಿದೆ.

    ಅನ್ಸಾರಿ ಸ್ನೇಹಿತರೆಲ್ಲರೂ ಒಂದೇ ಜಿಲ್ಲೆಯವರಾಗಿದ್ದು, ಅಪಘಾತವಾದ ಬಳಿಕ ಕಾರು ಮಾಲೀಕ ವಾಹನ ನಿಲ್ಲಿಸಿ ಪರಿಹಾರವಾಗಿ ಹಣ ನೀಡಲು ಬಂದರು. ನಾವದನ್ನು ಸ್ವೀಕರಿಸಲಿಲ್ಲ ಎಂದು ತಿಳಿಸಿದ್ದಾರೆ. ತಕ್ಷಣ ಅನ್ಸಾರಿಯನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗಿಡಾಗಿದ್ದಾರೆ. ಅನ್ಸಾರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದರು.

    ಇದನ್ನೂ ಓದಿ: VIDEO| ಒಂದೇ ಗಂಟೇಲಿ 6 ಮಹಿಳೆಯರಿಗೆ ಲೈಂಗಿಕ ಕಿರುಕುಳ: ಸಿಸಿಟಿವಿಯಲ್ಲಿ ಕಾಮುಕನ ಭಯಾನಕ ದೃಶ್ಯ!

    ಬಳಿಕ ಎನ್​ಜಿಒ ಮತ್ತು ರಾಜಕೀಯ ಕಾರ್ಯಕರ್ತರು ಆಂಬುಲೆನ್ಸ್​ಗಾಗಿ ಹಣವನ್ನು ಹೊಂದಿಸಿ, ಅನ್ಸಾರಿ ಮೃತದೇಹವನ್ನು ತವರಿಗೆ ಕಳುಹಿಸಿಕೊಟ್ಟಿದ್ದಾರೆ. ಕಾರು ಚಾಲಕನನ್ನು ಬಂಧಿಸಲಾಗಿದ್ದು, ಜೈಲಿಗೆ ಕಳುಹಿಸಲಾಗಿದೆ. ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಓರ್ವನ ಸಾವಿಗೆ ಕಾರಣವಾದ ಪ್ರಕರಣವನ್ನು ಚಾಲಕನ ವಿರುದ್ಧ ದಾಖಲಿಸಲಾಗಿದೆ. (ಏಜೆನ್ಸೀಸ್)

    VIDEO: ಚಲಿಸುತ್ತಿದ್ದ ವೈನ್​ ಟ್ಯಾಂಕರ್​​ಗೆ ಡೈರೆಕ್ಟ್​ ಬಾಯಿ ಕೊಟ್ಟ ಭೂಪ; ಮೈಮೇಲೆ ಇತ್ತು ಬರೀ ಅಂಡರ್​ವೇರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts