More

    ಕರೊನಾ ವಾರಿಯರ್ಸ್ ವಿರುದ್ಧ ಪಾದರಾಯನಪುರ ನಿವಾಸಿಗಳ ಗಲಾಟೆ: 50ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್​ಗೆ ಕರೆದೊಯ್ಯುವಾಗ ಪುಂಡಾಟ

    ಬೆಂಗಳೂರು: ಕೊರೊನಾ ಸೋಂಕು ಪ್ರಕರಣಗಳು ಹೆಚ್ಚು ಕಾಣಿಸಿಕೊಂಡು ಸೀಲ್ ಡೌನ್ ಆಗಿರುವ ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರ ದ್ವಿತೀಯ ಸಂಪರ್ಕ ಹೊಂದಿದ್ದ 58 ಜನರನ್ನು ಭಾನುವಾರ ಕ್ವಾರೆಂಟೈನ್ ಮಾಡುವ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ. ಅಲ್ಲದೆ, ಕೆಲವರು ಆರೋಗ್ಯಾಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ಬೈದಿರುವುದು ಹಾಗೂ ಬ್ಯಾರಿಕೇಡ್ ತಳ್ಳಿ ಗದ್ದಲ ಸೃಷ್ಟಿಸಿದ್ದಾರೆ.

    ಪಾದರಾಯನಪುರದಲ್ಲಿ ಇಲ್ಲಿಯವರೆಗೆ ಒಟ್ಟು‌ 18 ಕೊರೊನಾ ಸೋಂಕು ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಸೀಲ್ ಡೌನ್ ಮಾಡಲಾಗಿದ್ದು, ಈ ಭಾಗದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತದಲ್ಲಿ ಇದ್ದವರನ್ನು ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕ ಕ್ವಾರಂಟೈನ್ ಮಾಡಲಾಗುತ್ತಿದೆ.

    ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಬಾಲಸುಂದರ್ ಅವರು, ಒಟ್ಟು 58 ಜನರು ಕೊರೊನಾ ಸೋಂಕಿತರ ದ್ವಿತೀಯ ಸಂಪರ್ಕದಲ್ಲಿದ್ದರು ಇವರಲ್ಲಿ 17 ಜನ ಸಹಕಾರ ನೀಡಿ, ಕ್ವಾರೆಂಟೈನ್ ಆಗಿದ್ದಾರೆ.

    ಉಳಿದವರು ನಮಗೆ ಸಹಕಾರ ನೀಡಿಲ್ಲ. ಶಾಸಕರು, ಪಾಲಿಕೆ ಸದಸ್ಯರು ಬರಬೇಕು. ನಮಗೆ ಕೊರೊನಾದ ಯಾವುದೇ ಲಕ್ಷಣ ಇಲ್ಲ ಎಂದು ಹೇಳಿದ್ದಾರೆ. ಇವರನ್ನು ಮನವೊಲಿಸಲು ಸಾಧ್ಯವಾಗದ ಕಾರಣ ನಾಳೆ ಬೆಳಗ್ಗೆ ಕ್ವಾರೆಂಟೈನ್ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಬಿಂದಿಗೆ ಹೊತ್ತು ಬರುತ್ತಿದ್ದ ಮಹಿಳೆಯರನ್ನು ತಡೆದ ಪೊಲೀಸರಿಗೆ ಸಿಕ್ಕಿದ್ದೇನು?

    ಅಡ್ಡಾದಿಡ್ಡಿ ಚಾಲನೆ ಮಾಡಿದ್ದನ್ನು ಪ್ರಶ್ನಿಸಿದ ಇನ್‌ಸ್ಪೆಕ್ಟರ್ ಮೇಲೆಯೇ ಕಾರು ಹತ್ತಿಸಲು ಯತ್ನಿಸಿ ಯುವತಿಯರಿಬ್ಬರು ಪರಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts