More

    ಅರೆಸ್ಟ್ ಆದ ಪಾದರಾಯನಪುರ ಪ್ರಮುಖ ಆರೋಪಿ ಕೆಎಫ್‌ಡಿ ಇರ್ಫಾನ್‌ಗೂ ತಗುಲಿದೆಯಾ ಕರೊನಾ?

    ಬೆಂಗಳೂರು: ಪಾದರಾಯನಪುರದಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಂಧನಕ್ಕೆ ಒಳಗಾದ ಪ್ರಮುಖ ಆರೋಪಿ ಕೆಎಫ್‌ಡಿ ಇರ್ಫಾನ್​ ಪಾಷಾಗೂ ಕರೊನಾ ತಗುಲಿದೆಯೇ?

    ಇಂತಹುದೊಂದು ಪ್ರಶ್ನೆ ಆತನನ್ನು ಬಂಧಿಸಿದ ಪೊಲೀಸರಿಗೆ ಕಾಡುತ್ತಿದೆ. ಆತನಿಗೆ ಸೋಂಕಿನ ಲಕ್ಷಣಗಳೇನೂ ಇಲ್ಲವಾದರೂ ಪೊಲೀಸರು ಮಂಗಳವಾರ ಇರ್ಫಾನ್‌ನನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ 19 ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಆದರೆ, ವರದಿ ಇನ್ನೂ ಕೈ ಸೇರಿಲ್ಲ.

    ಪಾದರಾಯನಪುರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ಗಲಭೆಯಲ್ಲಿ ಬಂಧಿತರಾದ 130 ಆರೋಪಿಗಳ ಪೈಕಿ ಐವರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಗಲಭೆ ಬಳಿಕ ರ್ಇಾನ್ ಕಾಡುಗೊಂಡನ ಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಕರೊನಾ ಪರೀಕ್ಷೆಗೆ ಮುಂದಾದರು ಎನ್ನಲಾಗಿದೆ.

    ಈ ನಡುವೆ, ಆತನನ್ನು ಮಂಗಳವಾರ ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ 3ನೇ ಎಸಿಎಂಎಂಎಂ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸಲು ತಮ್ಮ ವಶಕ್ಕೆ ನೀಡುವಂತೆ ಜೆ.ಜೆ. ನಗರ ಪೊಲೀಸರು ನ್ಯಾಯಾಧೀಶರಿಗೆ ಮನವಿ ಮಾಡಿದರು. ಬಳಿಕ ಆರೋಪಿಯನ್ನು 4 ದಿನ ಪೊಲೀಸರ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದರು.

    ರ್ಇಾನ್‌ನನ್ನು ರಾಜರಾಜೇಶ್ವರಿನಗರ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್, ಕೆಂಗೇರಿ ಉಪವಿಭಾಗದ ಎಸಿಪಿ ಮಂಜುನಾಥ್ ಹಾಗೂ ಜಗಜೀವನರಾಮ್ ನಗರ ಠಾಣಾಧಿಕಾರಿ ನೇತೃತ್ವದಲ್ಲಿ ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

    ‘ಗಲಭೆಯಲ್ಲಿ ನಾನು ಭಾಗಿಯಾಗಿಲ್ಲ. ಪ್ರಕರಣದಲ್ಲಿ ನನ್ನ ಹೆಸರನ್ನು ಅನಾವಶ್ಯಕವಾಗಿ ತರಲಾಗಿದೆ. ಗಲಭೆಗೆ ಸಂಬಂಧಿಸಿದಂತೆ ಪಾದರಾಯನಪುರದಲ್ಲಿನ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ. ಆ ದಿನ ನಾನು ಪಾದರಾಯನಪುರದಲ್ಲಿ ಇರಲಿಲ್ಲ. ಅಲ್ಲಿನ ಯಾವುದೇ ಸಿಸಿ ಕ್ಯಾಮರಾದಲ್ಲಿ ನನ್ನ ಮುಖಚಹರೆ ಸೆರೆಯಾಗಿದ್ದರೆ ಗಲ್ಲಿಗೆ ಹಾಕಿ’ ಎಂದು ಆರೋಪಿ ಹೇಳುತ್ತಿದ್ದಾನೆ ಎನ್ನಲಾಗಿದೆ.

    ಆರೋಪಿ ವಿಚಾರಣೆಗೆ ಸಹಕರಿಸದೆ ಸುಳ್ಳು ಹೇಳುತ್ತಿದ್ದಾನೆ. ಈತನೇ ಗಲಭೆಗೆ ಕುಮ್ಮಕ್ಕು ಕೊಟ್ಟಿದ್ದ ಎಂಬುದು ಈಗಾಗಲೇ ಬಂಧಿತ ಆರೋಪಿಗಳ ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ವರ್ಗಾವಣೆಯಾದಷ್ಟೇ ವೇಗದಲ್ಲಿ ಮರುಸ್ಥಾಪನೆಗೊಂಡ ಕಲಬುರಗಿ ಜಿಲ್ಲಾಧಿಕಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts