More

    ಪರ್ಲ್ ಅಗ್ರೋಟೆಕ್ ಕಾರ್ಪೋರೇಶನ್​ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

    ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು.

    ದೇಶವ್ಯಾಪಿ ಸಾವಿರಾರು ಕೋಟಿ ರೂ. ವಂಚನೆ ಮಾಡಿದ ಪಿಎಸಿಎಲ್ ಕಂಪನಿಗೆ ಸೇರಿದ ಆಸ್ತಿಯನ್ನು ಸೇಬಿ ಜಪ್ತಿ ಮಾಡಿತ್ತು. ಅಲ್ಲದೆ, ಹೂಡಿಕೆದಾರರಿಗೆ ಹಣ ಹಿಂತಿರುಗಿಸಲು ನಿವೃತ್ತ ನ್ಯಾ.ಲೋಧಾ ಸಮಿತಿ ರಚಿಸಿತ್ತು. ಈ ಸಮಿತಿ ಹೂಡಿಕೆದಾರರಿಗೆ ಹಣ ಮರುಪಾವತಿ ಮಾಡುವ ಪ್ರಕ್ರಿಯೆ ಆರಂಭಿಸಿ 2019ರ ಡಿ.3 ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. 3,81,603 ಅರ್ಜಿಗಳು ಸ್ವೀಕರಿಸಿದ್ದ ಸಮಿತಿ ತಲಾ 5 ಸಾವಿರ ರೂ. ಹಿಂತಿರುಗಿಸಿದೆ.

    ಈ ಪೈಕಿ ಹಲವು ಅರ್ಜಿಗಳಲ್ಲಿ ಲೋಪ ಕಂಡು ಬಂದಿರುವ ಕಾರಣಕ್ಕೆ ತಡೆ ಹಿಡಿಯಲಾಗಿತ್ತು. ಲೋಪವನ್ನು ಸರಿಪಡಿಸಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಜುಲೈ 31ರ ಒಳಗಾಗಿ ಮರು ಅರ್ಜಿ ಸಲ್ಲಿಸಲ್ಲು ಅವಕಾಶ ನೀಡಲಾಗಿದೆ. ಜನವರಿ 24ರಿಂದ ಸೆಬಿ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸುವ ಪೋರ್ಟಲ್ ಕಾರ್ಯನಿರ್ವಹಿಸಲಿದೆ ಎಂದು ಸೆಬಿ ಅಧಿಕಾರಿಗಳು ತಿಳಿಸಿದ್ದಾರೆ.

    ಪಿಎಸಿಎಲ್​ನಿಂದ ವಂಚನೆಗೆ ಒಳಗಾದ ಹೂಡಿಕೆದಾರರಿಗೆ ಹಣ ಮರುಪಾವತಿ ಮಾಡಲು ನಿವೃತ್ತ ನ್ಯಾ.ಲೋಧಾ ಸಮಿತಿ ಮತ್ತು ಸೆಬಿ ಇದೆ. ಇದಲ್ಲದೆ, ಬೇರೆ ಯಾವುದೇ ಅಧಿಕಾರಿ ಮತ್ತು ಖಾಸಗಿ ಕಂಪನಿಗಳ ಆಮಿಷಗಳಿಗೆ ಒಳಗಾಗಬೇಡಿ. ಹೆಚ್ಚಿನ ಮಾಹಿತಿಗಾಗಿ ಸೆಬಿ ವೈಬ್​ಸೈಟ್​ನಲ್ಲಿ ನವೀಕರಿಸಿದ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ ಎಂದು ಸೆಬಿ ಅಧಿಕಾರಿಗಳು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts