More

    ಸೋಲಿನ ನಡುವೆಯೂ ಭಾರತಕ್ಕೆ ಮತ್ತೊಂದು ಆಘಾತ..!

    ಅಡಿಲೇಡ್: ಭಾರತ ತಂಡ ತನ್ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸೋಲನುಭವಿಸುವ ಮೂಲಕ ಎಲ್ಲೆಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದೀಗ ಮತ್ತೊಂದು ಶಾಕ್ ಭಾರತ ತಂಡಕ್ಕೆ ಬಡಿದಿದೆ. ವೇಗಿ ಮೊಹಮದ್ ಶಮಿ ಮಣಿಕಟ್ಟು ನೋವಿನಿಂದ ಸರಣಿಯ ಉಳಿದ ಮೂರು ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಶನಿವಾರ ಅಡಿಲೇಡ್ ಓವೆಲ್ ಮೈದಾನದಲ್ಲಿ ಅಂತ್ಯಗೊಂಡ ಪಂದ್ಯದಲ್ಲಿ ಬ್ಯಾಟಿಂಗ್‌ಗಿಳಿದ ಶಮಿ ಮಣಿಕಟ್ಟು ನೋವಿನಿಂದಾಗಿ ಕಣದಿಂದ ನಿವೃತ್ತಿ ಪಡೆದಿದ್ದರು. ನೋವಿನಿಂದ ಬಳಲಿದ ಶಮಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಸ್ಕ್ಯಾನಿಂಗ್‌ನಲ್ಲಿ ಕೈಗೆ ಪೆಟ್ಟು ಬಿದ್ದಿರುವ ಕಾರಣ ಅವರಿಗೆ ವಿಶ್ರಾಂತಿ ಸೂಚಿಸಲಾಗಿದೆ.

    ಇದನ್ನೂ ಓದಿ:ಭಾರತ ತಂಡ ಸೋತಿದ್ದಕ್ಕೆ ಮತ್ತೆ ಟ್ರೋಲ್ ಆದ ನಟಿ ಅನುಷ್ಕಾ ಶರ್ಮ

    ಶಮಿ ಅಲಭ್ಯ ಭಾರತದ ಬೌಲಿಂಗ್ ವಿಭಾಗಕ್ಕೆ ಹಿನ್ನಡೆವುಂಟಾಗಿದೆ. ಬೌಲಿಂಗ್ ವಿಭಾಗದಲ್ಲಿ ಯೋಜನೆ ರೂಪಿಸುವಲ್ಲಿ ಶಮಿ ಪ್ರಮುಖ ಪಾತ್ರವಹಿಸುತ್ತಿದ್ದರು. ನಾಯಕ ವಿರಾಟ್ ಕೊಹ್ಲಿ ಕೂಡ ಪಿತೃತ್ವ ರಜೆ ಮೇಲೆ ತವರಿಗೆ ವಾಪಸಾಗುತ್ತಿದ್ದಾರೆ. ಇದರಿಂದ ಮುಂದಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಬೇಕಿದೆ. ಈಗಾಗಲೇ ಆಸ್ಟ್ರೇಲಿಯಾ ತಲುಪಿರುವ ಅನುಭವಿ ಆಟಗಾರ ರೋಹಿತ್ ಶರ್ಮ ಮೂರನೇ ಟೆಸ್ಟ್ ಪಂದ್ಯಕ್ಕೆ ಕಣಕ್ಕಿಳಿಯುವ ಸಾಧ್ಯತೆಗಳಿವೆ.

    ಇದನ್ನೂ ಓದಿ: ಹಿರಿಯ ಕ್ರಿಕೆಟಿಗರಿಂದ ಟ್ರೋಲ್‌ಗೆ ಒಳಗಾದ ವಿರಾಟ್ ಕೊಹ್ಲಿ ಪಡೆ,

    ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ನಿರ್ವಹಣೆಗೆ ಸಾಕ್ಷಿಯಾದ ವಿರಾಟ್ ಕೊಹ್ಲಿ ಬಳಗ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಹರ್ನಿಶಿ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಎದುರು 8 ವಿಕೆಟ್‌ಗಳಿಂದ ಶರಣಾಯಿತು. 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-1 ರಿಂದ ಹಿನ್ನಡೆ ಅನುಭವಿಸಿತು. 88 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತ ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿದ ಕುಖ್ಯಾತಿಗೆ ಒಳಗಾಯಿತು.

    ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಭಾರತ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts